ಮುಂಬೈ: ಪೈಲಟ್‍ವೊಬ್ಬರು ರಸ್ತೆ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡ ಘಟನೆ ಮಹಾರಾಷ್ಟ್ರದ ಸಾತಿವಾಲಿ ಬ್ರಿಡ್ಜ್ ಬಳಿ ನಡೆದಿದೆ.
ವೃತ್ತಿಯಲ್ಲಿ ಪೆಲಟ್ ಆಗಿದ್ದ ಭಾಯಂದರ್ ನಿವಾಸಿ ವರುಣ್ ಬರ್ಮೋಡಿ ಮೃತ ದುರ್ದೈವಿ. ಟ್ರೇಲರ್ ಟ್ರಕ್‍ವೊಂದರ ಕೆಳಗೆ ಬೈಕ್ ಸಿಲುಕಿದ ಪರಿಣಾಮ ವರುಣ್ ಸಾವನ್ನಪ್ಪಿದ್ದಾರೆ. ಘಟನೆ ನಡೆದಾಗ ವರುಣ್ ತನ್ನ 10-15 ಸ್ನೇಹಿತರೊಂದಿಗೆ ಬಿಎಂಡಬ್ಲ್ಯೂ ಜಿಎಸ್ 1200 ಬೈಕ್‍ನಲ್ಲಿ ಭಾಯಂದರ್‍ನಿಂದ ಮ್ಯಾನರ್‍ಗೆ ಹೋಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
Advertisement
ನಾವು ಸಾತಿವಾಲಿ ಬ್ರಿಡ್ಜ್ ಬಳಿ ತಲುಪಿದಾಗ ಮಧ್ಯದ ಲೇನ್‍ನಲ್ಲಿ ಟ್ರೇಲರ್ ಟ್ರಕ್ ಇತ್ತು. ವರುಣ್ ಅದನ್ನು ಓವರ್ ಟೇಕ್ ಮಾಡಲು ಸಿದ್ಧನಾಗಿದ್ದ. ಆತ ಇನ್ನೇನು ಕ್ರಾಸ್ ಮಾಡಬೇಕು ಎನ್ನುವಷ್ಟರಲ್ಲಿ ಟ್ರೇಲರ್ ಟ್ರಕ್ ಮೊದಲನೇ ಲೇನ್‍ಗೆ ಬಂತು. ಆಗ ವರುಣ ಹಿಂಭಾಗದ ಚಕ್ರದಡಿ ಸಿಲುಕಿದ ಎಂದು ವರುಣ್ ಸ್ನೇಹಿತರೊಬ್ಬರು ಹೇಳಿದ್ದಾರೆ.
Advertisement
Advertisement
ವರುಣ್ ಸಹೋದರ ಕುನಾಲ್ ನಮ್ಮ ಜೊತೆಯ್ಲಲೇ ಇದ್ದ. ನಾವು ಕೂಡಲೇ ಟ್ರೇಲರ್ ಟ್ರಕ್ ಬಳಿ ಹೋದೆವು. ಆದ್ರೆ ಚಾಲಕ ಪರಾರಿಯಾಗಿದ್ದ. ಅನಂತರ ನಾವು ಪೊಲೀಸರಿಗೆ ಕರೆ ಮಾಡಿ, ವರುಣ್‍ನನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ದೆವು. ಆದ್ರೆ ಅಡ್ಮಿಟ್ ಮಾಡುವ ವೇಳೆಗೆ ಆತ ಸಾವನ್ನಪ್ಪಿದ್ದಾನೆಂದು ಹೇಳಿದ್ರು. ವರುಣ್ ಯಾವಾಗ್ಲೂ ಸುರಕ್ಷಿತವಾಗಿಯೇ ವಾಹನ ಚಾಲನೆ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.
Advertisement
ಅಪಘಾತ ನಡೆದಾಗ ನಾನು ಆತನ ಹಿಂದೆಯೇ ಇದ್ದೆ. ಕ್ಷಣಾರ್ಧದಲ್ಲಿ ಘಟನೆ ನಡೆದುಹೋಯ್ತು. ವರುಣ್ ಉತ್ತಮ ಚಾಲಕನಾಗಿದ್ದ. ಬೈಕ್ ಮೇಲೆ ಆತನಿಗೆ ಉತ್ತಮ ಹಿಡಿತ ಇತ್ತು. ನಾವು ಸರ್ಟಿಫೈಡ್ ಬೈಕರ್‍ಗಳಾಗಿದ್ದು, ಸದಾ ಒಟ್ಟಿಗೆ ಚಾಲನೆ ಮಾಡುತ್ತಿದ್ದೆವು. ನಾನು ಆತನನ್ನ ಮಿಸ್ ಮಾಡಿಕೊಳ್ತೀನಿ ಅಂತ ಮತ್ತೊಬ್ಬ ಸ್ನೇಹಿತರಾದ ಪ್ರಸಾದ್ ಪಾಟೀಲ್ ಹೇಳಿದ್ದಾರೆ.
ಪ್ರಕರಣದ ಬಗ್ಗೆ ವಾಲೀವ್ ಪೊಲೀಸ್ ಠಾಣೆಯ ತನಿಖಾಧಿಕಾರಿ ಬಿಎಮ್ ದೇವ್ರೇ ಮಾತನಾಡಿ, ನಾವು ಐಪಿಸಿ ಹಾಗೂ ಮೋಟಾರ್ ವಾಹನ ಕಾಯ್ದೆಯಡಿ ಟ್ರೇಲರ್ ಟ್ರಕ್ ಚಾಲಕನ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದೇವೆ. ಚಾಲಕನ ಹೆಸರು ಏನೆಂಬುದು ಇನ್ನೂ ಗೊತ್ತಾಗಿಲ್ಲ. ಆದ್ರೆ ಆತನ ವಾಹನವನ್ನ ಜಪ್ತಿ ಮಾಡಿದ್ದು, ಆರೋಪಿಗಾಗಿ ಬಲೆ ಬೀಸಿದ್ದೇವೆ ಎಂದು ಹೇಳಿದ್ದಾರೆ.