ಅಂತೂ ಇಂತೂ ದೊಡ್ಮನೆಯ ಅಸಲಿ ಆಟ ಈಗ ಶುರುವಾಗಿದೆ. ಭುಡಕ್ಕೆ ಬೆಂಕಿ ಬಿದ್ದಾಗಲೇ ಅಲ್ವಾ? ಎಚ್ಚೆತ್ತಿಕೊಳ್ಳೋದು. ಹಾಗೆಯೇ ನಾಮಿನೇಷನ್ ಪ್ರಕ್ರಿಯೆ ಬಂದಾಗಲೇ ತಾವು ಸೇಫ್ ಆಗೋಕೆ ಸ್ಪರ್ಧಿಗಳ ಮೈಂಡ್ ಗೇಮ್ ಶುರುವಾಗೋದು. ಇಲ್ಲೂ ಹಾಗೇ ಆಗಿದೆ. ಸೈಲೆಂಟ್ ಆಗಿರೋ ‘ಪಾರು’ ಮೋಕ್ಷಿತಾರನ್ನು (Mokshitha Pai) ಭವ್ಯಾ ಗೌಡ ಕೆಣಸಿದ್ದಾರೆ.
ದೊಡ್ಮನೆಯಲ್ಲಿ (Bigg Boss Kannada 11) ಮೊದಲ ಎಲಿಮಿನೇಷನ್‌ಗೆ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಇಡೀ ಮನೆ ಚೈತ್ರಾ ಕುಂದಾಪುರ ಅನ್ನ ನಾಮಿನೇಟ್ ಮಾಡಿದ್ರೆ, ಇತ್ತ ಭವ್ಯ ಗೌಡ ಅದ್ಯಾಕೋ ಏನೋ? ಮೋಕ್ಷಿತಾ ಪೈ ಹಿಂದೆ ಬಿದ್ದಿದ್ದಾರೆ. ಆದರೆ, ನಾಮಿನೇಟ್ ಮಾಡಿರೋದಕ್ಕೆ ಕೊಟ್ಟ ಕಾರಣ ಏನು ಗೊತ್ತಾ? ಮೋಕ್ಷಿತಾ ಪೈ ಮಾತು ಆಡೋದಿಲ್ಲ. ತುಂಬಾನೆ ಸೈಲೆಂಟ್ ಆಗಿದ್ದಾರೆ ಅನ್ನೋದೇ ಭವ್ಯಾರ ವಾದ. ಅದನ್ನೇ ಗುರಿಯಾಸಿಕೊಂಡು ಮೋಕ್ಷಿತಾರನ್ನು ನಾಮಿನೇಟ್ ಮಾಡಿದ್ದಾರೆ ಭವ್ಯಾ. ಇದನ್ನೂ ಓದಿ:4ನೇ ಮದುವೆಗೆ ಸಜ್ಜಾದ ತಮಿಳು ನಟಿ ವನಿತಾ ವಿಜಯ್ ಕುಮಾರ್
ಮೋಕ್ಷಿತಾ ನೀವು ತುಂಬಾನೇ ಸೈಲೆಂಟ್ ಆಗಿದ್ದೀರಿ. ಯಾರ ಜೊತೆಗೂ ನೀವು ಇನ್ನೂ ಬರೆಯುತ್ತಿಲ್ಲ. ನಾನು ನೋಡ್ತಾನೇ ಇದ್ದೇನೆ. ನನ್ನ ಜೊತೆಗೆ ಕೂಡ ಮಾತನಾಡುತ್ತಿಲ್ಲ. ನೀವು ಸೈಲೆಂಟ್ ಆಗಿರೋದ್ದಕ್ಕೆ ನಾನು ನಿಮ್ಮ ಹೆಸರು ನಾಮಿನೇಟ್ ಮಾಡುತ್ತಿದ್ದೇನೆ ಅಂತಲೇ ಭವ್ಯಾ ನೇರವಾಗಿ ಹೇಳಿದ್ದಾರೆ.
ಭವ್ಯಾ (Bhavya Gowda) ಮಾತಿಗೆ ಮೋಕ್ಷಿತಾ ಕೂಡ ಪ್ರತಿಯುತ್ತರ ನೀಡಿದ್ದಾರೆ. ನಾನು ಎಲ್ಲರ ಜೊತೆಗೆ ಮಾತನಾಡುತ್ತೇನೆ. ಸ್ವರ್ಗದಲ್ಲಿರೋರ ಜೊತೆಗೂ ಮಾತನಾಡಿದ್ದೇನೆ. ಆದರೆ, ನೀವೇ ನನ್ನ ಎದುರು ಬಂದಿಲ್ಲ. ಬರದೇ ಹೇಗೆ ಮಾತನಾಡೋಕೆ ಸಾಧ್ಯ ಆಗುತ್ತದೆ ಹೇಳಿ? ಹೀಗೆ ಪ್ರಶ್ನೆ ಮಾಡಿರೋ ಮೋಕ್ಷಿತಾ ನಾಮಿನೇಷನ್ ಮಾಡಿದಕ್ಕೆ ಬೇಸರ ಏನೂ ಇಲ್ಲ. ಅದು ನಿಮ್ಮ ಅಭಿಪ್ರಾಯವೇ ಆಗಿದೆ. ಅದನ್ನು ನಾನು ಗೌರವಿಸುತ್ತೇನೆ ಅಂತಲೂ ಮೋಕ್ಷಿತಾ ಪೈ ಹೇಳಿಕೊಂಡಿದ್ದಾರೆ. ಇದನ್ನೆಲ್ಲ ನೋಡಿದ್ರೆ, ಈ ಸ್ಪರ್ಧಿಗಳು ಒಳ್ಳೆಯ ಫ್ರೆಂಡ್ಸ್ ಆಗುತ್ತಾರಾ? ದೊಡ್ಮನೆ ಕಿಚ್ಚು ಹೆಚ್ಚಾಗುತ್ತಾ? ಎಂದು ಕಾದುನೋಡಬೇಕಿದೆ.
ಅಂದಹಾಗೆ, ಮೋಕ್ಷಿತಾ ಪೈ ಅವರು ‘ಪಾರು’ ಸೀರಿಯಲ್ (Paaru Serial) ಮೂಲಕ ಕರ್ನಾಟಕದ ಮನೆ ಮಾತಾಗಿದ್ದರು. ಭವ್ಯಾ ಗೌಡ ಅವರು ‘ಗೀತಾ’ (Geetha Serial) ಸೀರಿಯಲ್‌ನಲ್ಲಿ ನಟಿಸಿದ್ದರು.