ಬಿಗ್ ಬಾಸ್ ಮನೆಯ ಆಟ (Bigg Boss Kannada 11) 94 ದಿನಗಳು ಪೂರೈಸಿವೆ. ಇದೀಗ ಸ್ಪರ್ಧಿಗಳ ಕುಟುಂಬದವರು ಮನೆಗೆ ಬರುತ್ತಿದ್ದಾರೆ. ಹೀಗೆ ಬರುವ ಕುಟುಂಬದವರು ಸ್ಪರ್ಧಿಗಳಿಗೆ ಒಂದೊಂದು ಟಿಪ್ಸ್ ನೀಡುವ ಕೆಲಸ ಮಾಡುತ್ತಾ ಇದ್ದಾರೆ. ಯಾವ ರೀತಿಯಲ್ಲಿ ಆಡಬೇಕು ಎಂಬುದನ್ನು ಪರೋಕ್ಷವಾಗಿ ಹೇಳುತ್ತಿದ್ದಾರೆ. ಇದೀಗ ಭವ್ಯಾ (Bhavya Gowda) ಅವರ ಅಕ್ಕ ದಿವ್ಯಾ ಬಿಗ್ ಬಾಸ್‌ಗೆ ಬಂದಿದ್ದಾರೆ. ಅವರು ತ್ರಿವಿಕ್ರಮ್‌ನಿಂದ ದೂರ ಇರುವಂತೆ ಪರೋಕ್ಷವಾಗಿ ಸಲಹೆ ನೀಡಿದ್ದಾರೆ. ಇದನ್ನೂ ಓದಿ:ಇಲಿಯಾನಾ ಮತ್ತೆ ಪ್ರೆಗ್ನೆಂಟಾ?- ಹೊಸ ವರ್ಷದಂದು ಸುಳಿವು ಕೊಟ್ರಾ ನಟಿ?
Advertisement
ಭವ್ಯಾಗೆ ಕನ್ಫೆಷನ್ ಕೊಠಡಿಗೆ ಬರುವಂತೆ ಬಿಗ್ ಬಾಸ್ ಹೇಳಿದ್ದಾರೆ. ದಿವ್ಯಾ (Divya Gowda) ಅವರು ಕನ್‌ಫೆಷನ್ ರೂಂನಲ್ಲೇ ಇದ್ದರು. ಅವರು ವೈದ್ಯರ ಡ್ರೆಸ್‌ನಲ್ಲಿ ಮುಖಕ್ಕೆ ಮಾಸ್ಕ್ ಹಾಕಿ ಕುಳಿತಿದ್ದರು. ಭವ್ಯಾ ಹೋಗಿ ಕುಳಿತ ಬಳಿಕ, ಹೇಗಿದ್ದೀರಿ ಎಂದು ಕೇಳಿದರು. ಭವ್ಯಾ ಒಮ್ಮೆ ಗೊಂದಲಕ್ಕೆ ಒಳಗಾದರು. ಆ ನಂತರ ಅಕ್ಕ ಬಂದಿರುವ ರಿಯಾಲಿಟಿ ಅರಿತುಕೊಂಡ ಅವರು ಖುಷಿಯಿಂದ ಕುಣಿದಾಡಿದರು. ಅಕ್ಕನನ್ನು ಅಪ್ಪಿಕೊಂಡು ಕಣ್ಣೀರಿಟ್ಟರು. ಇದನ್ನೂ ಓದಿ:BBK 11: ಅಕ್ಕನ ಮರೆತ ವಿಶೇಷ ಚೇತನ ಸಹೋದರ- ಮೋಕ್ಷಿತಾ ಕಣ್ಣೀರು
Advertisement
Advertisement
ಬಳಿಕ ಭವ್ಯಾ ಅವರು ನಾನು ಏನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಅಕ್ಕ ದಿವ್ಯಾಗೆ ಕೇಳಿದರು. ಇದಕ್ಕೆ ಉತ್ತರಿಸಿದ ದಿವ್ಯಾ, ಜನರು ಕಡಿಮೆ ಆಗುತ್ತಿದ್ದಾರೆ. ನೀನು ಎಲ್ಲರ ಜೊತೆಯೂ ಬೆರೆಯಬೇಕು. ಕಂಫರ್ಟ್ ಜೋನ್‌ನಲ್ಲಿ ಇದ್ದೀಯಾ, ತೊಂದರೆ ಇಲ್ಲ. ಎಲ್ಲದಕ್ಕೂ ಒಂದು ಬ್ಯಾರಿಕೇಡ್ ಇರಬೇಕು. ನೀನು ಇರೋದು ತಪ್ಪು ಎನ್ನುತ್ತಿಲ್ಲ. ವೈಯಕ್ತಿಕವಾಗಿ ಹೇಗೆ ಆಟ ಆಡಬೇಕು ಎಂಬುದನ್ನು ಯೋಚನೆ ಮಾಡು. ಗೇಮ್ ಕಡೆ ಫೋಕಸ್ ಮಾಡು. ಬೇರೆ ಅವರಿಗೆ ಸಲಹೆ ಕೇಳಬಾರದು. ನೀನೇ ನಿರ್ಧಾರ ತೆಗೆದುಕೊಳ್ಳಬೇಕು. ನೀನು ನಿರ್ಧಾರ ತೆಗೆದುಕೊಳ್ಳಲು ಅಪ್ರಬುದ್ಧ ಎಂದು ಕಾಣಿಸಬಾರದು ಎಂದರು.
Advertisement
ಭವ್ಯಾಗೆ ಅಕ್ಕ ದಿವ್ಯಾ ಕೊಟ್ಟಿರುವ ಟಿಪ್ಟ್ ನೋಡಿ ಪ್ರೇಕ್ಷಕರು, ತ್ರಿವಿಕ್ರಮ್‌ನಿಂದ ದೂರ ಇರು ಎಂದು ಪರೋಕ್ಷವಾಗಿ ಸೂಚನೆ ಕೊಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.