‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ 70ನೇ ದಿನದತ್ತ ಮುನ್ನುಗ್ಗುತ್ತಿದೆ. ಶೋಭಾ ಶೆಟ್ಟಿ (Shobha Shetty) ಎಲಿಮಿನೇಷನ್ ನಂತರ ಕಳೆದ ವಾರ ಯಾರ ಎಲಿಮಿನೇಷನ್ ಕೂಡ ನಡೆದಿಲ್ಲ. ಈ ವಾರ 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಯಾರಿಗೆ ಈ ವಾರ ಮನೆಯಿಂದ ಗೇಟ್ ಪಾಸ್ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.
Advertisement
ಸ್ಪರ್ಧಿಗಳು ಅಳಿವು- ಉಳಿವಿಗಾಗಿ ಜಟಾಪಟಿ ನಡೆಯುತ್ತಿದೆ. ಸದ್ಯ ಈ ವಾರ ಕ್ಯಾಪ್ಟನ್ ಗೌತಮಿ ಕಡೆಯಿಂದ ಮೋಕ್ಷಿತಾ ಅವರು ನೇರವಾಗಿ ನಾಮಿನೇಟ್ ಆದರೆ, ಮನೆಯ ಸದಸ್ಯರಿಂದ ಒಟ್ಟು 7 ಮಂದಿ ನಾಮಿನೇಟ್ ಆಗಿದ್ದಾರೆ. ಅದರಲ್ಲಿ ಭವ್ಯಾ ಕೂಡ ಇದ್ದಾರೆ. ಒಟ್ಟು ಈ ಎಂಟು ಮಂದಿಯಲ್ಲಿ ಭವ್ಯಾ ಮತ್ತು ಮೋಕ್ಷಿತಾ ಅವರೇ ಅತೀ ಹೆಚ್ಚು ಬಾರಿ ನಾಮಿನೇಟ್ ಆಗಿರುವುದು. ಉಳಿದಂತೆ, ಚೈತ್ರಾ ಕುಂದಾಪುರ (Chaithra Kundapura), ತ್ರಿವಿಕ್ರಮ್, ಶಿಶಿರ್, ಧನರಾಜ್ ಆಚಾರ್, ರಜತ್ ಕಿಶನ್, ಹನುಮಂತ ಲಮಾಣಿ (Hanumantha Lamani) ಇದ್ದಾರೆ.
Advertisement
Advertisement
ಈ ಎಂಟು ಮಂದಿಯಲ್ಲಿ ಈ ವಾರ ಯಾರು ಹೊರಗೆ ಹೋಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಕಳೆದ ವಾರ ಯಾರೂ ಎಲಿಮಿನೇಟ್ ಆಗಿಲ್ಲ. ಹಾಗಾಗಿ, ಈ ವಾರ ಡಬಲ್ ಎಲಿಮಿನೇಷನ್ ಮಾಡಿದರೂ ಅಚ್ಚರಿ ಇಲ್ಲ. ವಿಶೇಷವೆಂದರೆ, ಪದೇಪದೇ ನಾಮಿನೇಟ್ ಆಗುತ್ತಿದ್ದ ಗೋಲ್ಡ್ ಸುರೇಶ್ ಈ ಬಾರಿ ನಾಮಿನೇಷನ್‌ನಿಂದ ಸೇಫ್ ಆಗಿದ್ದಾರೆ.