ಬಿಗ್ ಬಾಸ್ ಮನೆಗೆ ಭವ್ಯಾ (Bhavya Gowda) ಮತ್ತು ಯಮುನಾ (Yamuna Srinidhi) ಕಾಲಿಟ್ಟಿದ್ದಾರೆ. ಮೊದಲ ಇಬ್ಬರೂ ಸ್ವರ್ಧಿಗಳಾಗಿರುವ ಭವ್ಯಾ ಮತ್ತು ಯಮುನಾಗೆ ದೊಡ್ಮನೆಯ ಸ್ವರ್ಗಕ್ಕೆ ಎಂಟ್ರಿ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ:ಡೆಲಿವರಿ ಬಳಿಕ ಮಗನ ಜೊತೆಗಿನ ಫೋಟೋ ಹಂಚಿಕೊಂಡ ಪ್ರಣೀತಾ ಸುಭಾಷ್
ಭವ್ಯಾ ಮೊದಲ ಸ್ವರ್ಧಿಯಾಗಿದ್ರೆ, ಎರಡನೇ ಸ್ವರ್ಧಿಯಾಗಿ ಬಿಗ್ ಬಾಸ್‌ಗೆ (Bigg Boss Kannada 11) ಎಂಟ್ರಿ ಕೊಟ್ಟಿದ್ದಾರೆ. ಮೊದಲ ಎರಡು ಸ್ಪರ್ಧಿಗಳಾಗಿರುವ ಕಾರಣ ಇಬ್ಬರೂ ಸೀದಾ ದೊಡ್ಮನೆಯ ಸ್ವರ್ಗಕ್ಕೆ ಕಾಲಿಡಲು ಅವಕಾಶ ನೀಡಲಾಗಿದೆ. ಭವ್ಯಾ ಮತ್ತು ಯಮುನಾ ಅವರು ಬಿಗ್ ಬಾಸ್ ಮನೆಯ ಅದ್ಧೂರಿತನ ನೋಡಿ ಸಂಭ್ರಮಿಸಿದ್ದಾರೆ.
ಜೊತೆಗೆ ಇಬ್ಬರಿಗೂ ವಿಶೇಷ ಅಧಿಕಾರವನ್ನು ಕೊಟ್ಟಿದ್ದಾರೆ. ಬರುವ ಸ್ಪರ್ಧಿಗಳು ನಡೆ, ನುಡಿ ನೋಡಿ ಅವರು ಸ್ವರ್ಗಕ್ಕೆ ಹೋಗಬೇಕೋ? ನರಕಕ್ಕೆ ಎಂದು ಅಭಿಪ್ರಾಯ ತಿಳಿಸಬೇಕು. ಇನ್ನೂ ಇಬ್ಬರೂ ಕೂಡ ಗಟ್ಟಿ ಸ್ಪರ್ಧಿಗಳಾಗಿದ್ದು, ದೊಡ್ಮನೆಯ ಆಟ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.
ಅಂದಹಾಗೆ, ಮೋಕ್ಷಿತಾ ಪೈ, ಭವ್ಯಾ ಗೌಡ, ಚೈತ್ರಾ ಕುಂದಾಪುರ, ಅನುಷಾ ರೈ, ಧರ್ಮ ಕೀರ್ತಿರಾಜ್, ಉಗ್ರಂ ಮಂಜು, ಧನರಾಜ್ ಆಚಾರ್, ಐಶ್ವರ್ಯಾ ಸಿಂದೋಗಿ, ಯಮುನಾ ಶ್ರೀನಿಧಿ, ತ್ರಿವಿಕ್ರಮ್, ಶಿಶಿರ್ ಶಾಸ್ತ್ರಿ, ಗೋಲ್ಡ್ ಸುರೇಶ್, ಗೌತಮಿ, ಮಾನಸಾ, ರಂಜಿತ್ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಾಗಿದೆ. ಅಧಿಕೃತವಾಗಿ ಇನ್ನೂ ಅನಾವರಣ ಆಗಬೇಕಿದೆ.