ಬಿಗ್ ಬಾಸ್ ಮನೆಯ (Bigg Boss Kannada 11) ಆಟ ಇನ್ನೇನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ. ಈ ವಾರ ಫ್ಯಾಮಿಲಿ ರೌಂಡ್‌ನಿಂದ ಜಾಲಿ ಮೂಡ್‌ನಲ್ಲಿದ್ದ ಸ್ಪರ್ಧಿಗಳಿಗೆ ಸುದೀಪ್ ಶಾಕ್ ಕೊಟ್ಟಿದ್ದಾರೆ. ಎಂದಿನಂತೆ ಭಾನುವಾರದ ಎಪಿಸೋಡ್‌ನಲ್ಲಿ ಸುದೀಪ್ ಈ ವಾರವು ಸ್ಪರ್ಧಿಗಳಿಗೆ ಚಟುವಟಿಕೆ ಒಂದನ್ನು ಕೊಟ್ಟಿದ್ದಾರೆ. ಅದುವೆ ಈ ಬಿಗ್ ಬಾಸ್ ಮನೆಯಲ್ಲಿ ಯಾರು ಡೇಂಜರ್, ಯಾರು ಜೋಕರ್? ಎಂದು ಮನೆ ಮಂದಿಗೆ ಕಿಚ್ಚ ಕೇಳಿದ್ದಾರೆ. ಈ ವೇಳೆ, ಕಿಚ್ಚನ ಮುಂದೆ ತ್ರಿವಿಕ್ರಮ್ (Trivikram) ಡೇಂಜರ್ ಎಂದು ಹೇಳಿದ್ದಾರೆ.
ಹೌದು, ಈ ಜರ್ನಿಯಲ್ಲಿ ನೀವು ಯಾರು ಅಂತ ಇನ್ನೊಬ್ಬರಿಗೆ ಗೊತ್ತಾಗುತ್ತೆ ಎಂದು ಹೇಳಿದ್ದಾರೆ. ಒಂದು ಬೋರ್ಡ್ ಮೇಲೆ ಸ್ಪರ್ಧಿಗಳು ಈ ಮನೆಯಲ್ಲಿ ಯಾರು ಡೇಂಜರ್? ಯಾರು ಜೋಕರ್? ಹಾಗೂ ಯಾರು ಕಾಂಪಿಟೆಟರ್? ಅಂತ ಬರೆಯಲಾಗಿದೆ. ಅದರಂತೆ ಈ ಮನೆಯಲ್ಲಿರೋ ಸ್ಪರ್ಧಿಗಳಿಗೆ ಏನೇನೂ ಹೋಗುತ್ತೆ ಅಂತ ಬಾಣದ ಮೂಲಕ ಚುಚ್ಚಬೇಕು. ಅದರಂತೆ ಭವ್ಯಾ ಗೌಡ ಅವರು ‘ಡೇಂಜರ್’ ಜಾಗಕ್ಕೆ ತ್ರಿವಿಕ್ರಮ್ ಫೋಟೋವನ್ನು ಅಂಟಿಸಿದ್ದಾರೆ. ತ್ರಿವಿಕ್ರಮ್ ಡೇಂಜರ್ ಎಂದು ಭವ್ಯಾ ಹೇಳಿದ್ದಾರೆ.
View this post on Instagram
ಉಳಿದಂತೆ ರಜತ್ ಹಾಗೂ ಹನುಮಂತ ಚೈತ್ರಾಗೆ ಜೋಕರ್ ಪಟ್ಟ ಕೊಟ್ಟಿದ್ದಾರೆ. ಚೈತ್ರಕ್ಕಾಗೆ ನಾನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಅಂತ ಹನುಮಂತ ಹೇಳಿದ್ದಾರೆ. ಬಳಿಕ ಮಾತಾಡಿ ರಜತ್ ಅವರು ಚೈತ್ರಾ ಅವರು ಬಂದು 14 ವಾರ ಆಗಿದೆ. ಇಲ್ಲಿತನಕ ಅವರು ಇಷ್ಟು ಸಂಪಾದನೆ ಮಾಡಿದ್ದಾರೆ ಎಂದು ಈ ಚಟುವಟಿಕೆಯಿಂದ ತಿಳಿಯುತ್ತಿದೆ. ಹೀಗಾಗಿ ಅವರನ್ನು ಜೋಕರ್ ತರ ನೋಡುತ್ತಿದ್ದೇನೆ ಅಂತ ಹೇಳಿದ್ದಾರೆ.
ರಜತ್ ಮಾತಿಗೆ ಕೂಡಲೇ ಮಾತಾಡಿದ ಚೈತ್ರಾ ಕುಂದಪುರ, ಅದೇ ಜೋಕರ್ ಆಸ್ಕರ್ ಗೆದ್ದಿದ್ದನ್ನು ನಾನು ಕೇಳಿದ್ದೀನಿ, ಹೀಗಾಗಿ ಇವರುಗಳ ಅಭಿಪ್ರಾಯ ನನಗೆ ದೊಡ್ಡದು ಅಂತ ಅನಿಸುವುದೇ ಇಲ್ಲ ಅಂತ ಹೇಳಿದ್ದಾರೆ. ಬೇಕಾದ್ರೇ ಚೈತ್ರಾ ಆಸ್ಕರ್ ಗೆದ್ದುಕೊಳ್ಳಲಿ, ನಾನು ಬಿಗ್ ಬಾಸ್ ಕಪ್ ಗೆದ್ದುಕೊಂಡು ಮನೆಗೆ ಹೋಗುತ್ತೇನೆ ಅಂತ ರಜತ್ ಠಕ್ಕರ್ ಕೊಟ್ಟಿದ್ದಾರೆ.