ಕನ್ನಡ ಕಿರುತೆರೆಯಲ್ಲಿ ‘ಗೀತಾ’ ಸೀರಿಯಲ್ ಮೂಲಕ ಮೋಡಿ ಮಾಡಿರುವ ಜೋಡಿ ಭವ್ಯಾ- ಧನುಷ್ ಗೌಡ (Dhanush Gowda) ಇದೀಗ ತಮ್ಮ ಬಗೆಗಿನ ಗಾಸಿಪ್ ಬಗ್ಗೆ ಮಾತನಾಡಿದ್ದಾರೆ. ಧರ್ಮಸ್ಥಳಕ್ಕೆ ಓಡಿ ಹೋಗಿ ಮದುವೆಯಾಗಿದ್ದಾರೆ (Wedding) ಎಂಬ ಸುದ್ದಿಗೆ ಈ ಜೋಡಿ ಸ್ಪಷ್ಟನೆ ನೀಡಿದೆ. ಗೀತಾ ಮತ್ತು ವಿಜಯ್ ರಿಯಲ್ ಲೈಫ್‌ನಲ್ಲೂ ಲವ್ (Love) ಮಾಡ್ತಿದ್ದಾರಾ? ಎಂಬ ಅಭಿಮಾನಿಗಳ ಪ್ರಶ್ನೆಗೆ ಈಗ ಕ್ಲ್ಯಾರಿಟಿ ನೀಡಿದ್ದಾರೆ.
ತಮ್ಮ ಬಗೆಗಿನ ಕೇಳಿರುವ ಸುದ್ದಿ ಬಗ್ಗೆ ‘ಗೀತಾ’ (Geetha Serial) ಸೀರಿಯಲ್ ಜೋಡಿ ಪ್ರತಿಕ್ರಿಯೆ ನೀಡಿದೆ. ನಾವಿಬ್ಬರೂ ಲವ್ ಮಾಡ್ತಿದ್ದೀವಿ. ಮದುವೆಯಾಗಿ ಈಗಾಗಲೇ ಮಕ್ಕಳಾಗಿದೆ. ಮಕ್ಕಳ ನಾಮಕರಣ ಮಾಡಿದ್ದೀವಿ. ಧರ್ಮಸ್ಥಳಕ್ಕೆ ಓಡಿ ಹೋಗಿ ಮದುವೆ ಆಗಿದ್ದೀವಿ ಅಂತಾ ಕೇಳಿದ್ದೀವಿ. ನಾವು ಕೇಳಿರುವ ಕೆಟ್ಟ ಗಾಸಿಪ್‌ನಲ್ಲಿ ಇದೊಂದು ಎಂದಿದ್ದಾರೆ.
ನಿಮ್ಮ ಮಗಳಿಗೆ ಮದುವೆ ಆಗಿದೆಯಂತೆ ಎಂದು ಕೆಲವರು ನಮ್ಮ ತಾಯಿಗೆ ಕರೆ ಮಾಡಿ ಕೇಳಿದ್ದರು. ನಮ್ಮಿಬ್ಬರ ಮನೆಯಲ್ಲೂ ನಮ್ಮ ಸ್ನೇಹಕ್ಕೆ ಬೆಂಬಲ ಇದೆ. ನಿಮಗೆ ನಿಮ್ಮ ಫ್ರೆಂಡ್‌ಶಿಪ್ ಬಗ್ಗೆ ನಂಬಿಕೆ ಇದ್ಯಾ? ಸಾಕು ಎಲ್ಲರನ್ನೂ ಮೆಚ್ಚಿಸುವ ಅವಶ್ಯಕತೆಯಿಲ್ಲ. ನಿಮಗೆ ನೀವು ಏನು ಅಂತಾ ಗೊತ್ತಿದ್ರೆ ಸಾಕು ಎಂದು ನಮ್ಮಿಬ್ಬರ ಕುಟುಂಬ ನಮಗೆ ಸಾಥ್ ನೀಡಿದ್ರು ಎಂದು ‘ಗೀತಾ’ ನಟಿ ಭವ್ಯಾ (Bhavya Gowda) ಮಾತನಾಡಿದರು. ಇದನ್ನೂ ಓದಿ:ಕಪ್ಪು ಸೀರೆಯುಟ್ಟು ಮಿಂಚಿದ ನಟಿ ಸಮಂತಾ
ಇಲ್ಲದ ಈ ಕೆಟ್ಟ ಸುದ್ದಿ ವೈರಲ್ ಆದಾಗ, ಗೀತಾ ಸೀರಿಯಲ್ ಶುರುವಿನಲ್ಲಿ ವಿಜಯ್ ಜೊತೆ 8 ತಿಂಗಳು ಮಾತನಾಡೋದನ್ನೇ ಬಿಟ್ಟಿದ್ದೆ ಎಂದು ಭವ್ಯಾ ಹೇಳಿದರು. ನಮ್ಮ ಇಬ್ಬರಿಗೂ ವೈಯಕ್ತಿಕ ಬದುಕಿದೆ. ಈ ತರಹದ ಸುದ್ದಿ ನಮ್ಮ ಜೀವನಕ್ಕೂ ಹಾನಿ ಮಾಡುತ್ತೆ. ಕಡೆಗೆ ನಾವಿಬ್ಬರೂ ಕುಳಿತು ಮಾತನಾಡಿದ್ವಿ. ನಮ್ಮ ಇಬ್ಬರೂ ಲವ್ ಫಿಲಿಂಗ್ಸ್ ಇಲ್ಲ ಅಂದ ಮೇಲೆ ಬೇರೆ ಅವರಿಗೆ ಕ್ಲ್ಯಾರಿಟಿ ಕೊಡುವ ಅಗತ್ಯವಿಲ್ಲ ಎಂದು ಡಿಸೈಡ್ ಮಾಡಿ ಫ್ರೆಂಡ್‌ಶಿಪ್ ಮುಂದುವರೆಸಿದ್ವಿ. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಅಷ್ಟೇ ಎಂದು ನಟಿ ಭವ್ಯಾ- ಧನುಷ್ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಲವ್ ಮತ್ತು ಮದುವೆ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.