ಹಾಸನ: ಪ್ರಜ್ವಲ್, ಸೂರಜ್‍ಗೆ ರಾಜಕೀಯವಾಗಿ ಜನ್ಮಕೊಟ್ಟ ಜಿಲ್ಲೆ ಹಾಸನ. ಸಾಯುವವರೆಗೂ ಈ ಜಿಲ್ಲೆಗಾಗಿ ಕೆಲಸ ಮಾಡುವ ಆಸೆ ನನಗಿದೆ ಎಂದು ಭವಾನಿ ರೇವಣ್ಣ ತಿಳಿಸಿದ್ದಾರೆ.
Advertisement
ಸೂರಜ್ ರೇವಣ್ಣ ಗೆಲುವಿನ ನಂತರ ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಮಾದರಿಯಾಗಿ ಈ ಚುನಾವಣೆ ಫಲಿತಾಂಶ ಬಂದಿದೆ. ರಾಜ್ಯದಲ್ಲೇ ಹೆಚ್ಚು ಲೀಡ್ ಪಡೆದಿರುವುದು ಸೂರಜ್ ರೇವಣ್ಣ. ಅವರ ಗೆಲುವಿಗೆ ಶಾಸಕರು, ಸಂಸದರು, ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಕಾರಣರಾಗಿದ್ದಾರೆ. ನಮ್ಮ ಕುಟುಂಬದವರು ಎಂದುಕೊಂಡು ಹೋರಾಟ ಮಾಡಿದ್ದಾರೆ ಎಂದು ಮಗನ ಗೆಲುವಿನ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಗೆಲುವು
Advertisement
Advertisement
ಶಾಸಕ ಬಾಲಕೃಷ್ಣ 1500ಕ್ಕೂ ಹೆಚ್ಚು ಮತದಿಂದ ಗೆಲ್ಲುತ್ತಾರೆ ಎಂದು ಮೊದಲೇ ಹೇಳಿದ್ದರು. ದೇವರು ಅವರ ಬಾಯಿಂದ ನುಡಿಸಿದ್ದರು ಅಂತ ಕಾಣುತ್ತೆ. ಪ್ರತಿ ಶಾಸಕರಿಗೂ, ಸೂರಜ್ ರೇವಣ್ಣಗೆ ಮತಹಾಕಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಜ್ವಲ್, ಸೂರಜ್ ಅವರಿಗೂ ರಾಜಕೀಯವಾಗಿ ಜನ್ಮಕೊಟ್ಟ ಜಿಲ್ಲೆ ಹಾಸನವಾಗಿದೆ. ಸಾಯುವವರೆಗೂ ಈ ಜಿಲ್ಲೆಗಾಗಿ ಕೆಲಸ ಮಾಡುವ ಆಸೆ ನನಗಿದೆ. ನಾನು ಸಾಯುವವರೆಗೂ ಜಿಲ್ಲೆಯ ಜನರ ಜೊತೆ ಇರುತ್ತೇನೆ. ನಾನು ಹಾಸನದಿಂದ ಎಂಎಲ್‍ಎಗೆ ಸ್ಪರ್ಧಿಸುವ ಬಗ್ಗೆ ಈಗ ಯಾವುದೇ ಚರ್ಚೆಯಿಲ್ಲ ಎಂದು ಭವಾನಿ ರೇವಣ್ಣ ತಿಳಿಸಿದ್ದಾರೆ. ಇದನ್ನೂ ಓದಿ: ಗೆಲುವಿಗೆ ಕಾರಣರಾದ ನನ್ನ ತಾಯಿಯ ತ್ಯಾಗಕ್ಕೆ ಧನ್ಯವಾದ : ಸೂರಜ್ ರೇವಣ್ಣ