ಹಾಸನ: ಹಳ್ಳಿ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ ಇಂಜಿನಿಯರ್, ಹೆಂಡ್ತಿ, ಮಕ್ಕಳು ಸಾಕಲು ಆಗದೆ ರೇವಣ್ಣ ಅವರ ಬಳಿ ಬಂದು ದಮ್ಮಯ್ಯ ಅಂದು ಬಿಬಿಎಂಪಿಗೆ ಹಾಕಿಸಿಕೊಂಡು ಕೆಲಸ ಮಾಡಿದ್ದರು. ಆದರೆ ಅವರ ಮಗ ಇವತ್ತು ಶಾಸಕನಾಗಿ ಏಳನೇ ಕ್ಲಾಸ್ ಓದಿದವರು ಎಂದು ರೇವಣ್ಣನ (Revanna) ಬಗ್ಗೆ ಮಾತನಾಡ್ತಾನೆ ಎಂದು ಶಾಸಕ ಪ್ರೀತಂಗೌಡ (Preetham gowda) ವಿರುದ್ಧ ಭವಾನಿ ರೇವಣ್ಣ (Bhavani Revanna) ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಹಾಸನ (Hassan) ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಬ್ಬ ಶಾಸಕರು ಕೆಲವು ವಿಷಯಗಳಲ್ಲಿ ರೇವಣ್ಣ ಅವರನ್ನು ತಳ್ಳಿ ಹಾಕುತ್ತಾರೆ. ಎಲ್ಲವನ್ನೂ ನಾನೇ ಕಟ್ಟಿದೆ, ಎಲ್ಲವನ್ನೂ ನಾನೇ ಮಾಡ್ದೆ, ನನ್ನಿಂದಲೇ ಈ ಕೆಲಸ ಆಗಿದ್ದು ಎಂದು ಕೊಚ್ಚಿಕೊಳ್ಳುತ್ತಾರೆ. ಆ ಮಾತು ಅವರಿಗೆ ಎಷ್ಟು ಸರಿ ಅಂತ ಗೊತ್ತಿಲ್ಲ, ಅವರು ವಿದ್ಯಾವಂತರೋ, ಅವಿದ್ಯಾವಂತರೋ ಗೊತ್ತಿಲ್ಲ ಎಂದು ಪ್ರೀತಂಗೌಡ ವಿರುದ್ಧ ಕಿಡಿಕಾರಿದರು.
Advertisement
Advertisement
ಹಾಸನ ಜಿಲ್ಲೆ ಇಷ್ಟೊಂದು ಕೆಲಸ ಆಗಿದ್ದರೇ ರಸ್ತೆಯಲ್ಲಿ ಹೋಗುವ ಎಂತಹ ಅವಿದ್ಯಾವಂತನು ಕೂಡ ಇದು ರೇವಣ್ಣ ಅವರು ಮಾಡಿರುವ ಕೆಲಸ ಎಂದು ತೋರಿಸುತ್ತಾನೆ. ಆ ರೋಡ್‍ನಲ್ಲಿ ಓಡಾಡುವಂತಹ ಶಾಸಕರಿಗೆ ಈ ಬಿಲ್ಡಿಂಗ್ ಯಾರು ಕಟ್ಟಿಸಿದ್ದು ಅಂತ ಗೊತ್ತಾಗುವುದಿಲ್ಲವಾ ಎಂದು ಕುಟುಕಿದರು. ಇದನ್ನೂ ಓದಿ: ಕಾಂತಾರ ಎಫೆಕ್ಟ್ : ರಿಯಲ್ ಕಾಂತಾರಗೆ ಇಂದು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
Advertisement
7ನೇ ಕ್ಲಾಸ್ ಓದಿದವರು ಎಂದು ರೇವಣ್ಣ ಅವರನ್ನು ಖಂಡಿಸುತ್ತಾರೆ. ರೇವಣ್ಣ ಅವರ ವಿದ್ಯಾಭ್ಯಾಸನ ಜನರಿಗೆ ತೋರಿಸಿಕೊಂಡು ಕೆಲಸ ಮಾಡಬೇಕಾ? 8ನೇ ತರಗತಿ ಪಾಸ್ ಆಗಿರುವವರ ಹತ್ರನೇ ಅವರ ಅಪ್ಪ ಇಂಜಿನಿಯರ್ ಆಗಿದ್ದರೂ, ಬಂದು ದಮ್ಮಯ್ಯ ಅಂತ ಕೈಮುಗುದ್ರು ಬಿಬಿಎಂಪಿಗೆ ವರ್ಗಾವಣೆ ಮಾಡಿಸಿಕೊಂಡರು ಎಂದು ಹರಿಹಾಯ್ದರು.
Advertisement
ಇದೇ ವೇಳೆ ಪತಿ ರೇವಣ್ಣ ಅವರನ್ನು ಭವಾನಿ ಹಾಡಿ ಹೊಗಳಿದರು. ರೇವಣ್ಣ ಅವರು 365 ದಿನಗಳಲ್ಲಿ 50ದಿನ ಮೀಟಿಂಗ್‍ಗಾಗಿ ಬೆಂಗಳೂರಿನಲ್ಲಿ ಉಳಿತಾರೆ, ಮೀಟಿಂಗ್ ಇಲ್ಲ ಅಂದರೆ ಬೆಂಗಳೂರಿಗೆ ಹೋಗ್ತಾನೆ ಇರಲಿಲ್ಲ. ಉಳಿದ ದಿನಗಳಲ್ಲಿ ಸಮಯ ವ್ಯರ್ಥ ಮಾಡದೆ ಹಳ್ಳಿ ಹಳ್ಳಿಗೆ ಹೋಗಿ ಅಭಿವೃದ್ಧಿ ಕೆಲಸ ಮಾಡುತ್ತಾರೆ. ಹೊಳೆನರಸೀಪುರ ತಾಲೂಕಿನ 24 ಹಾಸ್ಟೆಲ್‍ಗಳ ಉಸ್ತುವಾರಿ ನಾನೇ ನೋಡುತ್ತಿದ್ದೇನೆ ಎಂದರು. ಇದನ್ನೂ ಓದಿ: ಗಡಿಜಿಲ್ಲೆಯಲ್ಲಿ ಮಧ್ಯರಾತ್ರಿ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ