ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವಣ ಜಂಗಿಕುಸ್ತಿ ಇಲ್ಲಿಗೆ ನಿಲ್ಲುವಂತೆ ಕಾಣುತ್ತಿಲ್ಲ. ಪ್ರಸಕ್ತ ಅಧಿವೇಶನದಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯ ಭ್ರಷ್ಟಾಚಾರದ ಕುರಿತು ದಾಖಲೆ ಬಿಡುಗಡೆ ಮಾಡ್ತೀನಿ ಎಂಬ ಬಾಂಬನ್ನು ಮಾಜಿ ಸಿಎಂ ಕುಮಾರಸ್ವಾಮಿ ಸಿಡಿಸಿದ್ದಾರೆ.
ಭ್ರಷ್ಟಾಚಾರದ ಬಗ್ಗೆ ಸಿದ್ದರಾಮಯ್ಯ ಪದೇ ಪದೇ ಮಾತಾಡ್ತಾರೆ. ಆದರೆ ಅವರ ಅವಧಿಯಲ್ಲಿಯೂ ಭ್ರಷ್ಟಾಚಾರ ಅಗಿದೆ. ಸಿದ್ದರಾಮಯ್ಯನವರ ನಿಜ ಬಣ್ಣವನ್ನು ನಾನು ಬಯಲು ಮಾಡ್ತೀನಿ ಅಂದ್ರು. ಸಿದ್ದರಾಮಯ್ಯ ಅವಧಿಯಲ್ಲಾದ ಹಣ ಲೂಟಿ, ಭ್ರಷ್ಟಾಚಾರದ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡ್ತೀನಿ. ಅದಕ್ಕೆ ಆಡಳಿತ ಪಕ್ಷ, ವಿಪಕ್ಷ ಕಾಂಗ್ರೆಸ್ ಉತ್ತರ ಕೊಡಬೇಕು ಅಂತ ತಿಳಿಸಿದ್ರು.
ಇತ್ತ ಮುಂದಿನ ಚುನಾವಣೆಯಲ್ಲಿ ಬಾದಾಮಿ ತೊರೆದು, ಚಾಮರಾಜಪೇಟೆಯಿಂದ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಕಣಕ್ಕಿಳಿಯೋದು ಬಹುತೇಕ ಖಚಿತವಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಪರವಾದ ಒಲವಿದೆ. ಹೀಗಾಗಿ ರಾಜ್ಯದ ಜನರ ಸೇವೆಗಾಗಿ ಕ್ಷೇತ್ರ ಬಿಟ್ಟುಕೊಡ್ತಿದ್ದೇನೆ ಎಂದು ಜಮೀರ್ ಅಹ್ಮದ್ ಸ್ಪಷ್ಟಪಡಿಸಿದ್ದಾರೆ. ನನಗೆ ರಾಜ್ಯ ಮುಖ್ಯ, ರಾಜ್ಯಕ್ಕೋಸ್ಕರ ಕ್ಷೇತ್ರ ತ್ಯಾಗ ಮಾಡ್ತಿದ್ದೇನೆ. ನನಗೆ ಯಾವ ಕ್ಷೇತ್ರಾನೂ ಬೇಡವೇ ಬೇಡ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾಲ್ಕನೇ ದಿನ ಹೈಕೋರ್ಟ್‍ನಲ್ಲಿ ಹಿಜಬ್ ವಿಚಾರಣೆ – ಅರ್ಜಿದಾರರ ಪರವಾಗಿ ವಕೀಲ ಕಾಮತ್ ಪ್ರಬಲ ವಾದ
ಈ ಮಧ್ಯೆ ಮಾಜಿ ಸಿಎಂ ಎಚ್ಡಿಕೆ ಹೇಳಿಕೆ ಸಂಬಂಧ ಉಂಟಾಗಿದ್ದ ಗೊಂದಲಕ್ಕೆ ಮತ್ತೆ ದೇವೇಗೌಡರು ತೆರೆ ಎಳೆದಿದ್ದಾರೆ. ಚಾಮುಂಡೇಶ್ವರಿಯಿಂದ ಕುಮಾರಸ್ವಾಮಿ ಸ್ವರ್ಧೆ ಮಾಡೊಲ್ಲ. ಬೇರೆ ಅಭ್ಯರ್ಥಿ ನಿಲ್ಲಿಸಿ ಕುಮಾರಸ್ವಾಮಿ ಹೋರಾಟ ಮಾಡ್ತಾರೆ. ಕುಮಾರಸ್ವಾಮಿ, ರಾಮನಗರ, ಚನ್ನಪಟ್ಟಣ ಬಿಟ್ಟು ಹೋಗೊಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕುಮಾರಸ್ವಾಮಿ ಚನ್ನಪಟ್ಟಣ ಬಿಟ್ಟು ಅವ್ರು ಹೋಗೊಲ್ಲ ಅನ್ನೋದು ನನ್ನ ಭಾವನೆ ಅಂದ್ರು.
ಅತ್ತ, ಹಾಸನ ಕ್ಷೇತ್ರಕ್ಕೆ ನಮ್ಮ ಕುಟುಂಬದವರು ಬರುವುದು ಊಹಾಪೋಹ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಮೂಲಕ ಭವಾನಿ ರೇವಣ್ಣ ಸ್ಪರ್ಧೆಯನ್ನು ಕುಮಾರಸ್ವಾಮಿ ಅಲ್ಲಗಳೆದಿದ್ದಾರೆ.