ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿಗೆ (BJP) ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯೋದಕ್ಕೆ ಯಾವ ನೈತಿಕತೆಯೂ ಇಲ್ಲ. 40 ಪರ್ಸೆಂಟ್‍ನಲ್ಲಿ ಈಗಿನ ಸರ್ಕಾರ ಮುಳುಗಿದೆ. ಇದನ್ನು ಪ್ರಶ್ನೆ ಮಾಡೋಕೆ ಕಾಂಗ್ರೆಸ್‍ಗೂ (Congress) ಹಕ್ಕಿಲ್ಲ. ಭ್ರಷ್ಟಾಚಾರ ಅವರದ್ದೇ ಕೂಸು ಎಂದು ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಆಮ್ ಆದ್ಮಿ ಪಾರ್ಟಿ ಉಪಾಧ್ಯಕ್ಷ ಭಾಸ್ಕರ್ ರಾವ್ (Bhaskar Rao) ಹರಿಹಾಯ್ದರು.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಇಂದು ಭಾರತೀಯ ಜನತಾ ಪಾರ್ಟಿಯವರ ಬಳಿ ಇರುವಷ್ಟು ಹಣ ಯಾರ ಬಳಿನೂ ಇಲ್ಲ. ಹಣದಲ್ಲಿ ನಾವು ಅವರಿಗೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ಆದರೆ ನಮ್ಮಲ್ಲಿ ಪ್ರಾಮಾಣಿಕತೆ ಇದೆ. ಒಳ್ಳೆತನದಿಂದ ನಾವು ಜನರ ಮನಸ್ಸು ಗೆಲ್ಲುತ್ತೇವೆ ಎಂದು ತಿಳಿಸಿದರು.
Advertisement
Advertisement
ಇಡಿ (ED), ಸಿಬಿಐಗೆ ಒಳಗಾದವರನ್ನು ನಮ್ಮ ಪಾರ್ಟಿಗೆ ಕರೆದುಕೊಳ್ಳಲ್ಲ. ನಾವು ಡಾಕ್ಟರ್, ವಕೀಲರನ್ನ ಪಕ್ಷಕ್ಕೆ ಕರೆದುಕೊಳ್ಳುತ್ತೇವೆ. ಈ ಮೂಲಕ 2023 ರ ಚುನಾವಣೆಯಲ್ಲಿ ಎಲ್ಲ ಕಡೆ ಸ್ಪರ್ಧೆ ಮಾಡುತ್ತೇವೆ. ಕರ್ನಾಟಕ (Karnataka) ಚುನಾವಣೆಗೆ (Election) ನಮ್ಮ ನಾಯಕರು ಬರ್ತಾರೆ. ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆ ಬಹಳ ಟಫ್‍ಯಿದೆ. ನಾವು ಗುಜರಾತ್‍ನಲ್ಲಿ (Gujarat) ಗೆದ್ರೆ ನ್ಯಾಷನಲ್ ಪಾರ್ಟಿ ಆಗುತ್ತೇವೆ. ಈ ಹಿನ್ನೆಲೆಯಲ್ಲಿ ನಾವು ಗುಜರಾತ್‍ನಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಎಲ್ಲೇ ಸ್ಪರ್ಧಿಸಿದರೂ ಸೋಲುತ್ತಾರೆ : ಈಶ್ವರಪ್ಪ
Advertisement
Advertisement
ಪಿಎಸ್‍ಐ (PSI) ಹಗರಣ ವಿಚಾರವಾಗಿ ಮಾತನಾಡಿದ ಅವರು, ಇವರು ಕಂಪ್ಯೂಟರ್ ಸಿಸ್ಟಮ್ ಹಾಳು ಮಾಡಿದ್ದಾರೆ. ಇವರೇ ನೈತಿಕವಾಗಿ ಕುಸಿದಿದ್ದಾರೆ. ಯಾವ ಸಿಸ್ಟಮ್ ಬಂದ್ರೆ ಏನೂ. ಇದನ್ನು ತಗೀತಾ ಹೋದ್ರೆ ಹಿಂದಿನ ಸರ್ಕಾರದಲ್ಲೂ ಇದೆ. ಇದೀಗ ಶಿಕ್ಷಣ ನೇಮಕಾತಿ ಹಗರಣ ಹೊರಬಂದಿದೆ. ಪರೀಕ್ಷೆ ವ್ಯವಸ್ಥೆ ಬದಲಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಕಾಂತಾರ ಎಫೆಕ್ಟ್- ದೈವನರ್ತಕರಿಗೆ ಸರ್ಕಾರದಿಂದ ಗುಡ್ ನ್ಯೂಸ್