ಭರೂಚ್: ಇಂದು ಗುಜರಾತಿನಲ್ಲಿ ವಿಧಾನಸಭೆಗೆ ಮೊದಲ ಹಂತದ ಮತದಾನ ಭರದಿಂದ ಸಾಗುತ್ತದೆ. ಆದರೆ ವಿಶೇಷ ಎಂದರೆ ಇಂದು ಮದುವೆಯಾಗಬೇಕಿದ್ದ ನವ ಜೋಡಿಗಳು ಮದುವೆಗೂ ಮುಂಚೆ ಮತಗಟ್ಟೆಗೆ ಆಗಮಿಸಿ ತಮ್ಮ ಮತದಾನದ ಹಕ್ಕನ್ನ ಚಲಾಯಿಸುವುದರ ಮೂಲಕ ಸುದ್ದಿಯಾಗಿದ್ದಾರೆ.
ಮತದಾನ ಮಾಡಲು ಹಿಂದೇಟು ಹಾಕುವವರಿಗೆ ಈ ವಧು-ವರ ಮಾದರಿಯಾಗಿದ್ದಾರೆ. ಗುಜರಾತಿನ ಭರೂಚ್ ಜಿಲ್ಲೆಯಲ್ಲಿ ಇಂದು ಈ ಜೋಡಿಯ ಮದುವೆ ನಿಶ್ಚಯವಾಗಿತ್ತು. ಆದ್ರೆ ಮದುವೆಗೂ ಮುನ್ನ ವಧು ವರ ಬಹುಮಲಿ ಕಟ್ಟಡದಲ್ಲಿನ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ಇನ್ನೂ ವಿಶೇಷವೆಂದರೆ ವಧು-ವರರು ಮದುವೆಯ ಬಟ್ಟೆಯಲ್ಲೇ, ಕೈ ಕೈ ಹಿಡಿದು ಜೊತೆಯಾಗಿ ಬಂದು ಮತ ಚಲಾಯಿಸಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.
Advertisement
Advertisement
ಈ ಜೋಡಿ ಮತದಾನ ಮಾಡಿ ಬಳಿಕ ಮಾತನಾಡಿದ್ದು, “ಇಂದು ನಾನು ಮದುವೆಯಾಗುತ್ತಿದ್ದೇನೆ. ಆದರೆ ಇದು ದೊಡ್ಡ ಚುನಾವಣೆಯಾಗಿರುವುದರಿಂದ, ನಾನು ಇಲ್ಲಿಗೆ ಬಂದು ಮತ ಚಲಾಯಿಸಿದ್ದೇನೆ. ಭಾರತದ ಪ್ರಜೆಯಾಗಿ ಮತ ಚಲಾಯಿಸುವುದು ನನ್ನ ಕರ್ತವ್ಯ ಮತ್ತು ಜವಾಬ್ದಾರಿ” ಎಂದು ವರ ಹೇಳಿದರು.
Advertisement
ನನ್ನ ಮದುವೆ ದಿನವೇ ಮತ ಚಲಾಯಿಸಿರುವುದು ಸಂತೋಷವಾಗಿದೆ. ಇದರಿಂದ ನಮ್ಮ ಮದುವೆಯ ದಿನ ಮತ್ತಷ್ಟು ವಿಶೇಷ ಎನಿಸಿದೆ ಎಂದು ವಧು ಖುಷಿಯನ್ನು ಹಂಚಿಕೊಂಡರು.
Advertisement
ಗುಜರಾತ್‍ನ ಒಟ್ಟು 182 ಕ್ಷೇತ್ರಗಳಲ್ಲಿ ದಕ್ಷಿಣ ಗುಜರಾತ್, ಕಚ್ ಹಾಗೂ ಸೌರಾಷ್ಟ್ರದಲ್ಲಿ 89 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ರಾಜ್ಯದ ಉಳಿದ ಭಾಗಗಳಲ್ಲಿ 93 ಸ್ಥಾನಗಳಿಗೆ ಡಿಸೆಂಬರ್ 14 ರಂದು ಮತದಾನ ನಡೆಯಲಿದೆ. ಡಿಸೆಂಬರ್ 18 ರಂದು ಮತ ಎಣಿಕೆ ನಡೆಯಲಿದೆ.
A couple reaches polling booth in Bharuch's Bahumali building to cast their votes before their wedding ceremony #GujaratElection2017 pic.twitter.com/laEvfU75Zl
— ANI (@ANI) December 9, 2017
A couple in Bharuch cast their votes before their wedding ceremony #GujaratElection2017 pic.twitter.com/TuXxKDpkK0
— ANI (@ANI) December 9, 2017