ಬಾಲಿವುಡ್ ಡ್ರಾಮಾ ಕ್ವೀನ್, ನಿರೂಪಕಿ ಮತ್ತು ಹಾಸ್ಯ ನಟಿ ಭಾರತಿ ಸಿಂಗ್ ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಏಪ್ರಿಲ್ 3ರಂದು ಭಾರತಿ ಸಿಂಗ್ ಹಾಗೂ ಹರ್ಷ್ ಲಿಂಬಾಣಿಯಾ ತಮ್ಮ ಮುದ್ದು ಮಗನನ್ನು ವೆಲ್‍ಕಮ್ ಮಾಡಿಕೊಂಡಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಕ್ಯಾಮೆರಾ ಕಣ್ಣಿಗೂ ಬಿದ್ದಿದ್ದರು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
- Advertisement -
ಇದೀಗ ಮಗುವಾದ 12 ದಿನಕ್ಕೇ ಭಾರತಿ ಸಿಂಗ್ ಕೆಲಸಕ್ಕೆ ಮರಳಿದ್ದು, ತಮ್ಮ ಮಗುವನ್ನು ನೆನಪಿಸಿಕೊಂಡು ತುಂಬಾ ಭಾವುಕರಾಗಿದ್ದಾರೆ. ಸಾಮಾನ್ಯವಾಗಿ ಮಗು ಜನಿಸಿದ ನಂತರ ಕನಿಷ್ಠ ಐದಾರು ತಿಂಗಳುಗಳ ಕಾಲ ತಾಯಂದಿರು ಮಗುವನ್ನು ಬಿಟ್ಟು ಎಲ್ಲೂ ಬರುವುದಿಲ್ಲ. ಆದರೆ ಭಾರತಿ ಸಿಂಗ್ ಹಸುಗೂಸಿಟ್ಟುಕೊಂಡು ಕೆಲಸಕ್ಕೆ ಮರಳಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ನಿರೂಪಕಿಯಾಗಿ ಭಾರತಿ ಸಿಂಗ್ ಕಾರ್ಯನಿರ್ವಹಿಸುತ್ತಿದ್ದು, ಸದ್ಯ ಅವರು ಈ ಕಾರ್ಯಕ್ರಮದ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಬೇಬಿ ಬಂಪ್ ಫೋಟೋಗೆ ಮಜವಾದ ಕ್ಯಾಪ್ಷನ್ ಕೊಟ್ಟ ಭಾರತಿ ಸಿಂಗ್
- Advertisement -
View this post on Instagram
- Advertisement -
ಈ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ‘ನಾನು ಇಂದು ತುಂಬಾ ಅಳುತ್ತಿದ್ದೆ. ಮಗುವಿಗೆ ಕೇವಲ 12 ದಿನಗಳಾಗಿವೆ. ಆದರೆ ಕೆಲಸ ಕೂಡ ಬಹಳ ಮುಖ್ಯವಾಗಿದೆ’ ಎಂದು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಡ್ರಾಮಾ ಕ್ವೀನ್ ಭಾರತಿ ಸಿಂಗ್ ಗಂಡನಿಗೆ 6 ಮಕ್ಕಳು ಬೇಕಂತೆ : ಹೆರಿಗೆ ನೋವಿನ ಕ್ಷಣಗಳನ್ನು ಹಂಚಿಕೊಂಡ ಹಾಸ್ಯ ಕಲಾವಿದೆ
- Advertisement -
ಈ ಮುನ್ನ ಭಾರತಿ ಸಿಂಗ್ ಅವರು ಗರ್ಭಿಣಿಯಾಗಿದ್ದಾಗಲೂ ಮಗುವಿಗೆ ಜನ್ಮ ನೀಡುವವರೆಗೂ ಕೆಲಸ ಮಾಡಿದ್ದರು. ನಂತರ ಡೆಲಿವರಿ ಸಮಯದಲ್ಲಿ ಭಾರತಿ ಸಿಂಗ್ ಬದಲಾಗಿ ಸುರಭಿ ಚಂದನಾ ಈ ಕಾರ್ಯಕ್ರಮ ಹೋಸ್ಟ್ ಮಾಡಿದ್ದರು. ಇದೀಗ ಮಗುವಾಗಿ 12 ದಿನಗಳಲ್ಲಿಯೇ ಭಾರತಿ ಸಿಂಗ್ ಮತ್ತೆ ಕೆಲಸಕ್ಕೆ ಮರಳಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.