ಬೆಂಗಳೂರು: ಕನ್ನಡ ಸಿನಿ ಪ್ರಿಯರಿಗೆ ಈ ವಾರ ಡಬ್ಬಲ್ ಧಮಾಕ ಲಭಿಸಲಿದೆ. ಕನ್ನಡ ಬಹು ನಿರಿಕ್ಷೀತ ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಮೊದಲ ಎರಡು ಸಿನಿಮಾಗಳಲ್ಲಿ ಭಾರಿ ಯಶ್ಸಸನ್ನು ಗಳಿಸಿರುವ ನಟ ದ್ರುವ ಸರ್ಜಾ ಅಭಿನಯದ `ಭರ್ಜರಿ’ ಸಿನಿಮಾ ಬಿಡುಗಡೆಯಾಗುತ್ತಿದೆ. ಇತ್ತ ಕನ್ನಡ ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ `ಕ್ರ್ಯಾಕ್’ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡುವ ನಿರಿಕ್ಷೇಯಲ್ಲಿದ್ದಾರೆ. ಈ ಎರಡು ಚಿತ್ರಗಳು ಮಾಸ್ ಹಾಗೂ ಕ್ಲಾಸ್ ಅಭಿಮಾನಿಗಳಲ್ಲಿ ಉತ್ತಮ ಭಾವನೆಯನ್ನು ಮೂಡಿಸಿವೆ.
ಭರ್ಜರಿ:
ಕನ್ನಡ ಚಿತ್ರ ರಂಗಕ್ಕೆ ಅದ್ದೂರಿಯಾಗಿ ಪ್ರವೇಶದ ಪಡೆದ ನಟ ಧ್ರುವ ಹಲವು ವರ್ಷಗಳ ನಂತರ ಮತ್ತೆ ಭರ್ಜರಿಯಾಗಿ ಬರುತ್ತಿದ್ದಾರೆ. ಈ ಚಿತ್ರವು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 250 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
Advertisement
ಚಿತ್ರದಲ್ಲಿ ಧ್ರುವ ಸರ್ಜಾ ಮೂವರು ನಾಯಕಿಯರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಡಿಂಪಲ್ ಕ್ವಿನ್ ಖ್ಯಾತಿಯ ರಚಿತಾ ರಾಮ್, ಹರಿಪ್ರಿಯಾ ಮತ್ತು ವೈಶಾಲಿ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರಕ್ಕೆ ಬಹುದ್ದೂರ್ ಖ್ಯಾತಿಯ ಚೇತನ್ ಕುಮಾರ್ ನಿರ್ದೇಶನವಿದ್ದು, ವಿ. ಹರಿಕೃಷ್ಣ ಸಂಗೀತವನ್ನು ಸಂಯೋಜಿಸಿದ್ದಾರೆ.
Advertisement
ಭರ್ಜರಿ ಸಿನಿಮಾ ಬಿಡುಗಡೆಯ ಮತ್ತೋಂದು ವಿಶೇಷವೆಂದರೆ ಬೆಂಗಳೂರಿನ ರೆಕ್ಸ್ ಮತ್ತು ಊರ್ವಶಿ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಕಾಣುತ್ತಿದೆ. ಈ ಎರಡು ಚಿತ್ರ ಮಂದಿರಗಳಲ್ಲಿ ಕಳೆದ 20 ವರ್ಷಗಳಿಂದ ಕನ್ನಡದ ಯಾವುದೇ ಸಿನಿಮಾವು ಬಿಡುಗಡೆಗೊಂಡಿಲ್ಲ. ಚಿತ್ರವು ಆರ್.ಎಸ್. ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗಿದೆ.
Advertisement
ಕ್ರ್ಯಾಕ್:
ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿರುವ ನಟ ವಿನೋದ್ ಪ್ರಭಾಕರ್ ನಟನೆಯ ಕ್ರ್ಯಾಕ್ ಸಿನಿಮಾ ಬಿಡುಗಡೆಗೊಳ್ಳುತ್ತಿದೆ. ಈ ಸಿನಿಮಾ ಬೆಂಗಳೂರಿನ ಅನುಪಮ ಚಿತ್ರ ಮಂದಿರ ಸೇರಿದಂತೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ನಟ ವಿನೋದ್ ಈ ಚಿತ್ರದಲ್ಲಿ ಮತ್ತೊಮ್ಮೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Advertisement
ಚಿತ್ರಕ್ಕೆ ರಾಮ್ ನಾರಾಯಣ್ ನಿರ್ದೇಶನವಿದ್ದು, ಶಮಿತಾ ಮಲ್ನಾಡ್ ಸಂಗೀತವನ್ನು ನೀಡಿದ್ದಾರೆ. ಚಿತ್ರದಲ್ಲಿ ವಿಶೇಷವಾಗಿ ಆರ್.ಎಕ್ಸ್.ಸೂರಿ ಖ್ಯಾತಿಯ ಆಕಾಂಕ್ಷಾ ನಾಯಕಿಯಾಗಿ ಅಭಿನಯಿಸಿದ್ದಾರೆ.