ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಕಾರು (Electric Car) ಇ ವಿಟಾರಾ (e Vitara)ವನ್ನು 2025ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದೆ. ಈ ಕಾರಿನ ಬೆಲೆಯನ್ನು ಮಾರ್ಚ್ ತಿಂಗಳಲ್ಲಿ ಘೋಷಿಸಲಾಗುತ್ತದೆ.
Advertisement
ಇ ವಿಟಾರಾ 49kWh ಮತ್ತು 61kWh ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದೆ. BYD ಕಂಪನಿಯ LFP (ಲಿಥಿಯಂ ಐರನ್-ಫಾಸ್ಫೇಟ್) ‘ಬ್ಲೇಡ್’ ಸೆಲ್‌ಗಳನ್ನು ಈ ಬ್ಯಾಟರಿಗಳಲ್ಲಿ ಬಳಸಲಾಗಿದೆ. 49kWh ಮತ್ತು 61kWh ಬ್ಯಾಟರಿ ಪ್ಯಾಕ್‌ಗಳು ಕ್ರಮವಾಗಿ 143hp ಮತ್ತು 173hp ಶಕ್ತಿ ಉತ್ಪಾದಿಸುತ್ತವೆ. ಎರಡೂ ಬ್ಯಾಟರಿ ಪ್ಯಾಕ್‌ಗಳು 192.5Nm ಟಾರ್ಕ್ ಉತ್ಪಾದಿಸರುವ ಶಕ್ತಿ ಹೊಂದಿವೆ. ದೊಡ್ಡ ಬ್ಯಾಟರಿ ಪ್ಯಾಕ್ 500km ಗಿಂತ ಹೆಚ್ಚು MIDC-ರೇಟೆಡ್ ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳುತ್ತಿದೆ. ಇದನ್ನೂ ಓದಿ: ಭಾರತೀಯ ಆಟೋ ಕ್ಷೇತ್ರಕ್ಕೆ ಹಸಿರು ಬಲ – ಕೇಂದ್ರದ ಒತ್ತಾಸೆಯಿಂದ ಇವಿ ವಾಹನ ಮಾರಾಟ ಹೆಚ್ಚಳ: ಹೆಚ್‌ಡಿಕೆ
Advertisement
Advertisement
4,275 ಎಂಎಂ ಉದ್ದ, 1,800 ಎಂಎಂ ಅಗಲ, 1,635 ಎಂಎಂ ಎತ್ತರ, 2,700 ಎಂಎಂ ವೀಲ್‌ಬೇಸ್ ಮತ್ತು 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಈ ಎಲೆಕ್ಟ್ರಿಕ್ ಕಾರು 5.2 ಮೀಟರ್ ಟರ್ನಿಂಗ್ ರೇಡಿಯಸ್ ಹೊಂದಿದೆ. ಅತ್ಯಾಕರ್ಷಕ ಡಿಸೈನ್ ಹೊಂದಿರುವ ಈ ಕಾರು ಮುಂಬದಿ ಮತ್ತು ಹಿಂಬದಿಯಲ್ಲಿ 3 ಪಾಯಿಂಟ್ ಮ್ಯಾಟ್ರಿಕ್ಸ್ ಡೇ ಟೈಮ್ LED DRLs ಒಳಗೊಂಡಿರುವ LED ಹೆಡ್‌ಲ್ಯಾಂಪ್‌ಗಳು, ಎಡಬದಿಯಲ್ಲಿ ಚಾರ್ಜಿಂಗ್ ಪೋರ್ಟ್, 18 ಇಂಚಿನ ಏರೋಡೈನಾಮಿಕ್ ಅಲಾಯ್ ವೀಲ್‌ಗಳೊಂದಿಗೆ ಬರಲಿದೆ.
Advertisement
ಒಳಾಂಗಣ ವಿನ್ಯಾಸ ಕೂಡ ಆಕರ್ಷಕವಾಗಿದೆ. 24.04cm MID, 25.65cm ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವಯರ್ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಸನ್ ರೂಫ್, ವರ್ಟಿಕಲ್ ಏರ್ ವೆಂಟ್‌ಗಳು, ಆಂಬಿಯೆಂಟ್ ಲೈಟಿಂಗ್, ಮುಂಬದಿ ವೆಂಟಿಲೇಟೆಡ್ ಸೀಟ್‌ಗಳು, 10-ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್, ಸ್ಲೈಡಿಂಗ್ ಮತ್ತು ರಿಕ್ಲೈನಿಂಗ್ ಫಂಕ್ಷನ್ ಹೊಂದಿರುವ ಹಿಂಬದಿ ಸೀಟ್‌ಗಳು ಮತ್ತು ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್, ವಯರ್ಲೆಸ್ ಚಾರ್ಜರ್ ಹೊಂದಿದೆ. ಇ ವಿಟಾರಾ ADAS ಲೆವೆಲ್ 2 ನೊಂದಿಗೆ ಬರಲಿದ್ದು, 7 ಏರ್ ಬ್ಯಾಗ್, ಇಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 360 ಡಿಗ್ರಿ ಕ್ಯಾಮೆರಾ, ಮುಂಬದಿ ಮತ್ತು ಹಿಂಬದಿ ಪಾರ್ಕಿಂಗ್ ಸೆನ್ಸರ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, ಮುಂತಾದ ವೈಶಿಷ್ಟ್ಯಗಳನ್ನೂ ಈ ಕಾರು ಹೊಂದಿದೆ.
ಮಾರುತಿ ಸುಜುಕಿ ಇ ವಿಟಾರಾ ಮಹೀಂದ್ರಾ BE6, ಟಾಟಾ ಕರ್ವ್ ಇವಿ ಮತ್ತು ಎಂಜಿ ZS ಇವಿಗೆ ಪ್ರತಿಸ್ಪರ್ಧಿಯಾಗಲಿದೆ.