ಭಾರತಮಾತೆ ವಿಧವೆಯಲ್ಲ – ಹಣೆಗೆ ಬೊಟ್ಟು ಇಡದ ಪತ್ರಕರ್ತೆಗೆ ಪ್ರತಿಭಟನಾಕಾರನಿಂದ ತರಾಟೆ

Public TV
2 Min Read
Sambhaji Bhide

ಮುಂಬೈ: ಮಹಿಳಾ ಪತ್ರಕರ್ತೆಯೊಬ್ಬರು ಹಣೆಗೆ ಬಿಂದಿ ಹಾಕದೇ ಇರುವ ಕಾರಣ ಅವರೊಂದಿಗೆ ಮಾತನಾಡಲು ಮಹಾರಾಷ್ಟ್ರದ (Maharashtra) ಕಾರ್ಯಕರ್ತ ಸಂಭಾಜಿ ಭಿಡೆ ( Sambhaji Bhide) ನಿರಾಕರಿಸಿದ್ದಾರೆ.

ದಕ್ಷಿಣ ಮುಂಬೈನಲ್ಲಿರುವ (South Mumbai) ರಾಜ್ಯ ಸಚಿವಾಲಯದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Chief Minister Eknath Shinde) ಅವರನ್ನು ಭೇಟಿಯಾದ ಬಳಿಕ ಹೊರಗೆ ಬರುತ್ತಿದ್ದ ಸಂಭಾಜಿ ಭಿಡೆ ಅವರು ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಅವರನ್ನು ಮಾತನಾಡಿಸಲು ಮುಂದಾದ ಪತ್ರಕರ್ತೆ ಜೊತೆಗೆ ಸಂಭಾಷಣೆ ನಡೆಸಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮ-ಲಕ್ಷ್ಮಣ ವಿಗ್ರಹಕ್ಕೆ ಮೀಸೆ ಬೇಕೇ ಬೇಕು: ಸಂಭಾಜಿ ಭಿಡೆ

ವೀಡಿಯೊವೊಂದರಲ್ಲಿ ಸಂಭಾಜಿ ಭಿಡೆ ಅವರು ಮರಾಠಿಯಲ್ಲಿ ಬೈಟ್ ತೆಗೆದುಕೊಳ್ಳಲು ಬರುವ ಮಹಿಳಾ ಪತ್ರಕರ್ತೆಗೆ, ತಮ್ಮ ಬೈಟ್ ತೆಗೆದುಕೊಳ್ಳಲು ಬರುವ ಮುನ್ನ ಬಿಂದಿಯನ್ನು ಇಡಬೇಕೆಂದು ಹೇಳಿ, ಆಕೆಯೊಂದಿಗೆ ಮಾತನಾಡಲು ನಿರಾಕರಿಸುತ್ತಾರೆ. ಜೊತೆಗೆ ಮಹಿಳೆಯನ್ನು ಭಾರತಮಾತೆಗೆ ಹೋಲಿಸಿ, ಭಾರತಮಾತೆ ಬಿಂದಿ ಇಡದೇ ವಿಧವೆಯಂತೆ ಕಾಣಿಸಿಕೊಳ್ಳಬಾರದು ಎಂದು ಹೇಳುವುದನ್ನು ಕಾಣಬಹುದಾಗಿದೆ.

ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಅವರು ಸಂಭಾಜಿ ಭಿಡೆ ಅವರ ಹೇಳಿಕೆಗೆ ವಿವರಣೆ ನೀಡುವಂತೆ ಕೋರಿ ನೋಟಿಸ್ ಜಾರಿ ಮಾಡಿದ್ದಾರೆ. ಈ ಹಿಂದೆ 2018ರಲ್ಲಿ ನಮ್ಮ ತೋಟದಲ್ಲಿ ಬೆಳೆದ ಮಾವಿನ ಹಣ್ಣನ್ನು ತಿಂದು ದಂಪತಿಯೊಬ್ಬರಿಗೆ ಗಂಡು ಮಕ್ಕಳು ಜನಿಸಿದ್ದಾರೆ ಎಂಬ ಹೇಳಿಕೆ ನೀಡುವ ಮೂಲಕ ಸಂಭಾಜಿ ಭಿಡೆ ಅವರು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಇದನ್ನೂ ಓದಿ: ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು – ಬಸ್ ಚಾಲಕನಿಗೆ ಸಾರ್ವಜನಿಕರಿಂದ ಥಳಿತ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *