ನವದೆಹಲಿ: ಬೀದರ್ ಮೂಲದ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ 41 ಕರ್ನಾಟಕದ ವಿದ್ಯಾರ್ಥಿಗಳು ರೊಮೆನಿಯಾನಿಂದ ತಾಯ್ನಾಡಿಗೆ ಮರಳಿ ಬರುತ್ತಿರುವ ಖುಷಿಗೆ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಎಂದು ಘೋಷಣೆ ಕೂಗಿ ದೇಶಾಭಿಮಾನ ಮೆರೆದಿದ್ದಾರೆ.
Advertisement
ನಗರದ ಶಶಾಂಕ್ ಹಾಗೂ ವಿವೇಕ್ ತಾಯ್ನಾಡಿಗೆ ಆಗಮಿಸಿದ್ದು ಅವರ ಪೋಷಕರಲ್ಲಿದ್ದ ಆತಂಕ ದೂರವಾಗಿದೆ. ನಿನ್ನೆ ಯುದ್ಧಭೂಮಿ ಖಾರ್ಕಿವ್‍ನ ಪಿಶಾಚಿನ್ ಎಂಬ ಸ್ಥಳದಿಂದ ಸತತ 45 ಗಂಟೆಗಳ ಕಾಲ ಪ್ರಯಾಣ ಮಾಡಿ ಕನ್ನಡಿಗರು ರೊಮೆನಿಯಾ ತಲುಪಿದ್ದರು. ಇದನ್ನೂ ಓದಿ: ಏಕಾಂಗಿಯಾಗಿ ಉಕ್ರೇನ್ ಗಡಿಗೆ ಪ್ರಯಾಣಿಸಿದ 11 ವರ್ಷದ ಬಾಲಕ
Advertisement
Advertisement
ಸದ್ಯ ಕನ್ನಡಿಗರು ದೆಹಲಿಯ ಕರ್ನಾಟಕ ಭವನದಲ್ಲಿ ವಿಶ್ರಾಂತಿ ಪಡೆಯಲಿದ್ದು ಕೊರೊನಾ ಟೆಸ್ಟ್ ರಿಪೋರ್ಟ್ ಬಂದ ಬಳಿಕ ಬೀದರ್ ಮೂಲದ ಇಬ್ಬರು ವಿದ್ಯಾರ್ಥಿಗಳು ಜಿಲ್ಲೆ ಕಡೆ ಪ್ರಯಾಣ ಮಾಡಲಿದ್ದಾರೆ. ಶಶಾಂಕ್ ಮತ್ತು ವಿವೇಕ್ ಇಂದು ಸಂಜೆ ದೆಹಲಿಯಿಂದ ಹೈದರಾಬಾದ್ ಅಥವಾ ಬೆಂಗಳೂರಿಗೆ ಬರುವ ಸಾದ್ಯತೆ ಇದೆ. ಇದನ್ನೂ ಓದಿ: ಬಿಹಾರ ವರನ ಕೈ ಹಿಡಿದ ಜರ್ಮನಿ ಮಹಿಳೆ