ನವದೆಹಲಿ: ಹುತಾತ್ಮ ಯೋಧರ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಆರಂಭವಾಗಿರುವ ‘ಭಾರತ್ ಕೇ ವೀರ್’ ಅಭಿಯಾನದ ಅಧಿಕೃತ ಗೀತೆಯನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಲೋಕಾರ್ಪಣೆ ಮಾಡಿದ್ದಾರೆ.
‘ಭಾರತ್ ಕೇ ವೀರ್’ ಅಭಿಯಾನದ ಗೀತೆಯನ್ನು ಬಾಲಿವುಡ್ ಗಾಯಕ ಕೈಲಾಶ್ ಖೇರ್ ಸಂಗೀತ ಸಂಯೋಜಿಸಿ, ಹಾಡಿದ್ದಾರೆ. ಗೀತೆ ಬಿಡುಗಡೆ ಸಮಾರಂಭದಲ್ಲಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಗೃಹ ಇಲಾಖೆಯ ರಾಜ್ಯ ಸಚಿವರಾದ ಕಿರಣ್ ರಿಜಿಜು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾಗವಹಿಸಿದ್ದರು. ಅಲ್ಲದೇ ಕಾರ್ಯಕ್ರಮದಲ್ಲಿ ಕೇಂದ್ರ ಸಶಸ್ತ್ರ ಪಡೆಯ ಮುಖ್ಯಸ್ಥರು ಹಾಜರಿದ್ದರು. ಗೀತೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವು ಗಣ್ಯರಿಂದ ಒಂದೇ ದಿನದಲ್ಲಿ 12.93 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ.
Advertisement
Advertisement
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್, ದೇಶದಲ್ಲಿ ಶಾಂತಿಯನ್ನು ಕಾಪಾಡಲು ಸೈನಿಕರು ತಮ್ಮ ಜೀವವನ್ನು ಮುಡಿಪಾಗಿಟ್ಟಿದ್ದಾರೆ, ಆದರೆ ಅವರ ಕುಟುಂಬಗಳಿಗೆ ನಾವು ಸಾಕಷ್ಟು ಸಹಾಯವನ್ನು ಮಾಡಲು ಸಾಧ್ಯವಾಗಿಲ್ಲ. ಇದು ಸತ್ಯ. ಎಲ್ಲಾ ಹುತಾತ್ಮ ಯೋಧರ ಕುಟುಂಬಗಳು ಕನಿಷ್ಠ ಒಂದು ಕೋಟಿ ರೂ. ಪಡೆಯಬೇಕು ಎಂದು ಹೇಳಿದರು.
Advertisement
ಈ ಅಭಿಯಾನದಲ್ಲಿ ಸಂಗ್ರಹವಾದ ಹಣವನ್ನು ಹುತಾತ್ಮರ ಕುಟುಂಬಕ್ಕೆ ಹಾಗೂ ಮಕ್ಕಳ ಶಿಕ್ಷಣಕ್ಕೆ ಮೀಸಲಿಡಲಾಗುತ್ತದೆ. ಅಲ್ಲದೇ `ಭಾರತ್ ಕೇ ವೀರ್’ ಗೀತೆಯನ್ನು ಡೌನ್‍ಲೋಡ್ ಮಾಡಿಕೊಂಡಾಗ ಬರುವ ಹಣವೂ ಸೈನಿಕರ ಕುಟಂಬದ ಕ್ಷೇಮಾಭಿವೃದ್ಧಿಗಾಗಿ ಬಳಸಲಾಗುತ್ತದೆ. ಮೃತ ಸೈನಿಕರ ಕುಟುಂಬಕ್ಕೆ ಕನಿಷ್ಠ 1 ಕೋಟಿ ರೂ. ನೆರವು ನೀಡುವುದಂತೆ ಮಾಡುವುದೇ ಈ ಅಭಿಯಾನದ ಉದ್ದೇಶವಾಗಿದೆ.
Advertisement
तुम हो तो हर पर्व है, तुम पे हमें गर्व है,
सीमायें जहाँ तक भी हैं, सुरक्षा ही बस धर्म है
भारत के वीरों सैनिकों !
Thank you @KailashKher ji for this beautiful rendition of #BharatKeVeer anthem pic.twitter.com/B5VaOrmCbe
— Rajnath Singh (@rajnathsingh) January 20, 2018
Akshayji, @akshaykumar you deserve a special mention and a big thank you for your efforts and continuous support to @BharatKeVeer https://t.co/zZwPZLonX1
— Rajnath Singh (@rajnathsingh) January 20, 2018
Words of gratitude by @akshaykumar to Smt. Rekha Devi, wife of Shaheed Jaswant Singh on behalf of indebted nation. The bold lady who always stood by the brave soldier empowering him to serve the nation through all odds. pic.twitter.com/Jc6WWHwYUF
— ????????CRPF???????? (@crpfindia) January 20, 2018