ಮುಂಬೈ: ಪುಣಾ ಮೂಲದ ಆಭರಣ ಸಂಸ್ಥೆಯೊಂದು 75 ವರ್ಷದ ಸ್ವಾತಂತ್ರ್ಯದ ನೆನಪಿಗಾಗಿ ವಿವಿಧ ರಾಜ್ಯಗಳ 7,500 ಸೈನಿಕರಿಗೆ ಉಂಗುರವನ್ನು ಉಡುಗೊರೆಯಾಗಿ ನೀಡಲು ಎಕಿ ಇಂಡಿಯಾ ಮಿಷನ್‍ನ್ನು ಪ್ರಾರಂಭಿಸಿದೆ.
ಸೈನಿಕರಿಗೆ ಕೊಡುವ ಈ ಉಂಗುರವನ್ನು ಬೆಳ್ಳಿ, ಬಂಗಾರ, ವಜ್ರ ಹಾಗೂ ಮಣ್ಣುಗಳನ್ನು ಮಿಶ್ರಣ ಮಾಡಿ ಮಾಡಲಾಗಿದೆ. ಭಾರತದ 75ನೇ ಸ್ವಾತಂತ್ರ್ಯದ ಭಾರತ್ ಕಾ ಅಮೃತ್ ಮಹೋತ್ಸವವನ್ನು ಗುರುತಿಸಲು ಈ ವರ್ಷ 7,500 ಸೈನಿಕರಿಗೆ ಕಮಿಟ್‍ಮೆಂಟ್ ರಿಂಗ್ಸ್ ಎಂಬ ಹೆಸರಿನಲ್ಲಿ ಉಂಗುರವನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
Advertisement
Advertisement
ಇದರ ಭಾಗವಾಗಿ, ಖಾಡ್ಕಿಯ ಪಾಶ್ರ್ವವಾಯು ಪುನರ್ವಸತಿ ಕೇಂದ್ರ (ಪಿಆರ್‌ಸಿ)ದಲ್ಲಿರುವ 88 ನಿವೃತ್ತ ಸೈನಿಕರಿಗೆ ಕಮಿಟ್‍ಮೆಂಟ್ ಉಂಗುರವನ್ನು ನೀಡಲಾಗಿದೆ. ಈ ಕುರಿತು ಬೋನಿಸಾ ಪಾಲುದಾರ ಸಂಕೇತ್ ಬಿಯಾನಿ ಮಾತನಾಡಿ, ಈ ವರ್ಷ 7,500ಕ್ಕೂ ಹೆಚ್ಚು ಸೈನಿಕರಿಗೆ ಉಂಗುರವನ್ನು ನೀಡುವ ಗುರಿಯನ್ನು ತಮ್ಮ ಕಂಪನಿ ಹೊಂದಿದೆ ಎಂದರು. ಇದನ್ನೂ ಓದಿ: ಉಕ್ಕಿ ಹರಿಯುವ ತುಂಗಭದ್ರಾ ನದಿಯಲ್ಲಿ ಪ್ರವಾಸಿಗರ ಮೋಜುಮಸ್ತಿ – ಮಿತಿಮೀರಿದ ಹುಚ್ಚಾಟ
Advertisement
Advertisement
ಉಂಗುರದ ವಿಶೇಷತೆ: ಈ ಉಂಗುರದಲ್ಲಿ ಮಿಶ್ರಣ ಮಾಡಿರುವ ಚಿನ್ನ, ಬೆಳ್ಳಿ, ವಜ್ರ ಹಾಗೂ ಮಣ್ಣು ದೇಶದ ಏಕತೆಯನ್ನು ಸೂಚಿಸುತ್ತದೆ. ಏಕ್ ಇಂಡಿಯಾ ರಿಂಗ್‍ನ ಬೆಳ್ಳಿ ನಮ್ಮನ್ನು ಶಾಂತವಾಗಿಡುತ್ತದೆ. ಬಂಗಾರವು ಇದು ಭಾರತವನ್ನು ಸಂಕೇತಿಸುತ್ತದೆ. ನಾವೆಲ್ಲರೂ ದೇಶದಲ್ಲಿ ವಜ್ರದಂತೆ ಇರಲು ವಜ್ರವನ್ನು ಸಹ ಉಂಗುರಕ್ಕೆ ಹಾಕಲಾಗಿದೆ. ಉಂಗುರವನ್ನು ಬೆಳ್ಳಿಯಿಂದ ಮಾಡಲಾಗಿದ್ದು, ಅದರ ಮೇಲೆ ಭಾರತ್ ಎಂದು ಬರೆಯಲಾಗಿದೆ. ಇದಕ್ಕೆ ಚಿನ್ನವನ್ನು ಲೇಪಿತಸಲಾಗಿದೆ. ಈ ಉಂಗುರವು ದೇಶದ ಏಕತೆಯ ಸಂಕೇತವಾಗಿದೆ. ಇದನ್ನೂ ಓದಿ: ಎಸಿಬಿ ವಿರುದ್ಧ ನ್ಯಾ. ಸಂದೇಶ್ ಮಾಡಿದ್ದ ಆರೋಪಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್