ಮೈಸೂರು: ಭಾರತ್ ಜೋಡೋ ಯಾತ್ರೆಯಲ್ಲಿ(Bharat Jodo Yatra) ಭಾಗವಹಿಸಲು ರಾಜ್ಯಕ್ಕೆ ಆಗಮಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ಅವರ ಕೊಡಗು ಭೇಟಿ ಕೊನೆ ಕ್ಷಣದಲ್ಲಿ ರದ್ದಾಗಿದೆ.
ಮೈಸೂರಿನಿಂದ(Mysuru) ಹೆಲಿಕಾಪ್ಟರ್ ಮೂಲಕ ಕೊಡಗಿಗೆ ಬರಲು ಸಿದ್ಧತೆ ನಡೆಸಲಾಗಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಲ್ಯಾಂಡ್ ಆಗಲು ಕಷ್ಟವಾಗಬಹುದು ಎಂಬ ಕಾರಣಕ್ಕೆ ಹೆಲಿಕಾಪ್ಟರ್(Helicopter) ಪ್ರಯಾಣ ರದ್ದಾಗಿತ್ತು.
Advertisement
ಇದಾದ ಬಳಿಕ ರಸ್ತೆ ಮಾರ್ಗದ ಮೂಲಕ ಮಡಿಕೇರಿಯ ಕೂರ್ಗ್ ವೈಲ್ಡ್ ರೆಸಾರ್ಟ್‌ಗೆ ಬರುವ ಪ್ಲ್ಯಾನ್ ಮಾಡಲಾಗಿತ್ತು. ಆದರೆ ಆರೋಗ್ಯ ಸಮಸ್ಯೆ ಕಾರಣ ರಸ್ತೆ ಮಾರ್ಗದಲ್ಲಿ ದೂರ ಪ್ರಯಾಣಕ್ಕೆ ಸೋನಿಯಾ ಗಾಂಧಿ ಒಪ್ಪಿಗೆ ನೀಡಲಿಲ್ಲ. ಹೀಗಾಗಿ ಕೊನೆ ಕ್ಷಣದಲ್ಲಿ ರಸ್ತೆ ಪ್ರಯಾಣವೂ ರದ್ದಾಗಿದೆ. ಈಗ ಕಬಿನಿ(Kabini) ಬಳಿಯ ರೆಸಾರ್ಟ್‌ನಲ್ಲಿ ಸೋನಿಯಾ ಗಾಂಧಿ 2 ದಿನಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ. ಇದನ್ನೂ ಓದಿ: 29 ವರ್ಷಗಳ ನಂತ್ರ ವೈಷಮ್ಯ ಶಮನ – ವೀರಶೈವ, ದಲಿತರೊಂದಿಗೆ ರಾಹುಲ್ ಸಹಭೋಜನ
Advertisement
ಇಂದು ಮಧ್ಯಾಹ್ನ ಮೈಸೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸೋನಿಯಾ ಬಳಿಕ ಮೈಸೂರಿನ ವಿಂಡ್ ಫ್ಲವರ್ ಹೋಟೆಲಿಗೆ ತೆರಳಿದರು. 30 ನಿಮಿಷ ಹೋಟೆಲಿನಲ್ಲಿದ್ದ ಸೋನಿಯಾ ಗಾಂಧಿ ಬಳಿಕ ಕಬಿನಿಗೆ ಪ್ರಯಾಣಿಸಿದರು.
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಎರಡು ದಿನಗಳ ಕಾಲ ಸೋನಿಯಾ ಗಾಂಧಿ ಕಬಿನಿಯಲ್ಲಿಯೇ ಉಳಿಯುತ್ತಾರೆ. ಹವಮಾನ ವೈಪರೀತ್ಯದಿಂದಾಗಿ ಮಡಿಕೇರಿಗೆ ತೆರಳುತ್ತಿಲ್ಲ. ವಿಮಾನ ನಿಲ್ದಾಣದಿಂದ ಹೋಟೆಲಿಗೆ ಕಾರಿನಲ್ಲಿ ಬರುವಾಗ ಅವರ ಆರೋಗ್ಯ ವಿಚಾರಿಸಿದೆವು. ಅವರು ಆರೋಗ್ಯವಾಗಿರುವುದಾಗಿ ಹೇಳಿದ್ದಾರೆ. ಪಕ್ಷ ಸಂಘಟನೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ನಾನು ಕಬಿನಿಗೆ ತೆರಳುತ್ತಿಲ್ಲ ಎಂದು ತಿಳಿಸಿದರು