– ನಾನ್ ವೆಜ್ ಎಂದರೆ ಇಷ್ಟ
– ಲಂಡನ್‍ನಲ್ಲಿ ಕೆಲಸ ಮಾಡುತ್ತಿದ್ದಾಗ 3 ಲಕ್ಷ ರೂ. ಸಂಬಳ ಪಡೆಯುತ್ತಿದ್ದೆ
– ಲಂಡನ್‍ನಲ್ಲಿ ಕೆಲಸ ಮಾಡುತ್ತಿದ್ದಾಗ 3 ಲಕ್ಷ ರೂ. ಸಂಬಳ ಪಡೆಯುತ್ತಿದ್ದೆ
ನವದೆಹಲಿ: ಬುದ್ಧಿವಂತ ಹಾಗೂ ಪ್ರೀತಿಸುವ ಹುಡುಗಿ ಸಿಕ್ಕರೇ ನಾನು ಮದುವೆ ಆಗುತ್ತೇನೆ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ತಿಳಿಸಿದರು.
ಸದ್ಯ ಭಾರತ್ ಜೋಡೋ ಯಾತ್ರೆ (Bharat Jodo Yatra) ಕಾಶ್ಮೀರದಲ್ಲಿದೆ. ಈ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿದ 52 ವರ್ಷದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಮದುವೆಯ ಬಗ್ಗೆ ಹಾಗೂ ತಾವು ಮದುವೆ ಆಗುವ ವಧು ಹೇಗೆ ಇರಬೇಕು ಎನ್ನುವುದರ ಕುರಿತು ಸಂಕ್ಷಿಪ್ತವಾಗಿ ಮತ್ತೊಮ್ಮೆ ತಿಳಿಸಿದ್ದಾರೆ.
Advertisement
Rahul Gandhi ji’s Chit-chat on marriage with Kamiya Jani of curly tales. pic.twitter.com/IGABLIerbu
— Nitin Agarwal (@nitinagarwalINC) January 22, 2023
Advertisement
ಸರಿಯಾದ ಹುಡುಗಿ ಸಿಕ್ಕರೆ ನಾನು ಮದುವೆ ಆಗುತ್ತೇನೆ. ಬುದ್ಧಿವಂತೆ ಹಾಗೂ ಪ್ರೀತಿಸುವ ಹುಡುಗಿಯಾಗಿದ್ದಾರೆ ಸಾಕು. ನನ್ನ ಹೆತ್ತವರು ಪ್ರೀತಿಸುವುದನ್ನು ಹತ್ತಿರದಿಂದ ನೋಡಿದ್ದರಿಂದ ನನಗೆ ಹೆಚ್ಚು ನಿರೀಕ್ಷೆಗಳಿವೆ ಎಂದು ಹೇಳಿದ್ದಾರೆ.
Advertisement
ಈ ವೇಳೆ ಸಂದರ್ಶಕಿ ಹಾಗಾದರೆ ಈ ಸಂದೇಶವನ್ನು ಎಲ್ಲ ಹುಡುಗಿಯರೂ ಪಡೆಯುತ್ತಿದ್ದಾರೆ ಎಂದಾಗ ರಾಹುಲ್ ಗಾಂಧಿ ಅವರು, ನೀವು ಈಗ ನನ್ನನ್ನು ತೊಂದರೆಯಲ್ಲಿ ಸಿಲುಕಿಸಿದ್ದೀರಿ ಎಂದು ನಕ್ಕಿದ್ದಾರೆ.
Advertisement
ಇದೇ ವೇಳೆ ರಾಹುಲ್ ಗಾಂಧಿ ತಮ್ಮ ಇಷ್ಟದ ತಿಂಡಿಯ ಬಗ್ಗೆಯೂ ತಿಳಿಸಿದ್ದು, ನಾನ್‍ವೆಜ್ ಆಹಾರವೆಂದರೆ ತುಂಬಾ ಇಷ್ಟ. ಚಿಕನ್ ಟಿಕ್ಕಾ, ಸೀಖ್ ಕಬಾಬ್ ಮತ್ತು ಆಮ್ಲೆಟ್‌ಗಳೆಂದರೆ ತುಂಬಾ ಇಷ್ಟ. ಆದರೆ ಖಾರವನ್ನು ಅಷ್ಟು ಇಷ್ಟಪಡುವುದಿಲ್ಲ. ಜೊತೆಗೆ ಹಲಸು ಹಾಗೂ ಬಟಾಣಿಯನ್ನು ತಿನ್ನುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಸೈನ್ಸ್ ಓದಲು ಇಷ್ಟವಿಲ್ಲ- ಕಾಲೇಜಿನಲ್ಲೇ ಪಿಯು ವಿದ್ಯಾರ್ಥಿನಿ ನೇಣಿಗೆ ಶರಣು
ಇದೇ ವೇಳೆ ತಮ್ಮ ಮೊದಲ ಸಂಬಳದ ಬಗ್ಗೆಯೂ ಮಾತನಾಡಿ, 24 ಅಥವಾ 25 ವರ್ಷದವನಾಗಿದ್ದಾಗ ಲಂಡನ್‍ನ ಸ್ಟ್ರಾಟಜಿ ಕನ್ಸಲ್ಟಿಂಗ್ ಕಂಪನಿಯಲ್ಲಿ ಕೆಲಸ ಮಾಡಿದ್ದಕ್ಕಾಗಿ ಹೇಳಿಕೊಂಡಿದ್ದಾರೆ. ಸುಮಾರು 3,000 ಪೌಂಡ್‍ಗಳನ್ನು (3,01,818 ರೂ.) ಗಳಿಸಿದ್ದೇನೆ ಎಂದು ವಿವರಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯರ ಆಡಳಿತಾವಧಿಯಲ್ಲಿ 35 ಸಾವಿರ ಕೋಟಿ ರೂ. ಅವ್ಯವಹಾರ: ಸುಧಾಕರ್
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k