ಬೆಂಗಳೂರು: ಕರ್ನಾಟಕದಲ್ಲಿ (Karnataka) ಭಾರತ್ ಜೋಡೋ ಯಾತ್ರೆ (Bharat Jodo Yatra) ಸೆಪ್ಟೆಂಬರ್ 30 ರಿಂದ ಆರಂಭ ಆಗಿದೆ. ಇಷ್ಟು ದಿನ ಬೇರೆ ಬೇರೆ ಕಡೆ ಸಂವಾದ ಮಾಡುತ್ತಿದ್ದ ರಾಗಾ (Rahul Gandhi) ಇವತ್ತು ಜರ್ನಲಿಸ್ಟ್ ಜೊತೆ ಅನೌಪಚಾರಿಕ ಚರ್ಚೆ ಮಾಡಿದ್ದಾರೆ. ಅದು ಫೋಟೋ ಶೂಟ್‌ಗೆ ಅಂತಾ ಫಿಕ್ಸ್ ಆಗಿದ್ದ ಶೆಡ್ಯೂಲ್‌ನಲ್ಲಿ 15 ನಿಮಿಷ ನಗು ನಗುತ್ತಾ ತೂರಿಬಂದ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
Advertisement
ಅದರಲ್ಲಿ ವಿಶೇಷ ಎನಿಸಿದ್ದು, ರಾಹುಲ್ ಗಾಂಧಿ ಅವರ ಸ್ಟ್ರೆಂಥ್ ಬಗ್ಗೆ ಕೇಳಿದ ಪ್ರಶ್ನೆ ಮತ್ತು ರಾಹುಲ್ ಅದಕ್ಕೆ ಕೊಟ್ಟ ಉತ್ತರ. ಭಾರತ್ ಜೋಡೋ ಯಾತ್ರೆ ಆರಂಭಕ್ಕೆ ಆ ಶಕ್ತಿ ಎಲ್ಲಿಂದ ಬಂತು? ಅದರ ಗುಟ್ಟೇನು? ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ, ರಾಹುಲ್ ಸ್ವಲ್ಪ ನಕ್ಕು, ನಾನು ವನ್ ವರ್ಡ್ನಲ್ಲಿ ಹೇಳ್ತೀನಿ ಅಂತ ಹೇಳಿ ಸ್ವಲ್ಪ ವಿರಾಮ ಕೊಟ್ಟರು. ಬಳಿಕ ಮತ್ತೆ ನಕ್ಕ ರಾಹುಲ್, ಶಿವ.. ಶಿವ.. ನನ್ನ ಶಕ್ತಿ ಶಿವ ಎಂದರು.
Advertisement
Advertisement
ತಕ್ಷಣ ನಿಮಗೆ ಆಧ್ಯಾತ್ಮದಲ್ಲಿ ಆಸಕ್ತಿ ಇದೆಯಾ ಎಂಬ ಮರು ಪ್ರಶ್ನೆ ಹಾಕಿದಾಗ, ಆಧ್ಯಾತ್ಮ, ಧಾರ್ಮಿಕತೆ ಬಗ್ಗೆ ಬೇರೆ ಬೇರೆ ವ್ಯಾಖ್ಯಾನಗಳನ್ನು ಕೊಡುತ್ತಾರೆ. ಆ ಬಗ್ಗೆ ನನಗೆ ಆಸಕ್ತಿ ಇಲ್ಲ. ಆದರೆ ನಾನು ಶಿವನನ್ನು ನಂಬುತ್ತೇನೆ ಎಂದು ಹೇಳಿ ರಾಹುಲ್ ನಸುನಕ್ಕರು.
Advertisement
ಈ ನಡುವೆ ಕರ್ನಾಟಕದ ಕಲರ್ ಫುಲ್ ಪಾಲಿಟಿಕ್ಸ್ ರಾಹುಲ್‌ಗೆ ಇಷ್ಟ ಆಗಿದೆ ಎನ್ನೋದು ಅವರ ಮಾತುಗಳಿಂದಲೇ ಸ್ಪಷ್ಟವಾಯಿತು. ಕರ್ನಾಟಕದ ರಾಜಕಾರಣವೇ ಬೇರೆ, ಕೇರಳ ರಾಜಕಾರಣವೇ ಬೇರೆ. ಕರ್ನಾಟಕದಲ್ಲೂ ಒಳ್ಳೆಯ ಲೀಡರ್‌ಗಳು ಇದ್ದಾರೆ. ಜಾತಿ ಪಾಲಿಟಿಕ್ಸ್ ಕೂಡ ಇದೆ, ಅದನ್ನು ಇಲ್ಲ ಎನ್ನಲಾಗುವುದಿಲ್ಲ ಎಂದು ರಾಹುಲ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇದನ್ನೂ ಓದಿ: SC, ST ಮೀಸಲಾತಿ ವಿಚಾರದಲ್ಲಿ ಸರ್ಕಾರ ದಿಟ್ಟ ನಿರ್ಧಾರ: ಬೊಮ್ಮಾಯಿ
ಬಳಿಕ ತಮ್ಮ ಹವ್ಯಾಸದ ಬಗ್ಗೆ ಕೇಳಿದಾಗ, ಡೈಲಿ ವಾಕಿಂಗ್ ಮಾಡ್ತಾ ಇದೀನಿ ಅಲ್ವಾ? ಎಂದು ನಗೆಚಟಾಕಿಯಿಟ್ಟರು. ನಾನು ವಾಕ್ ಮಾಡ್ತೀನಿ. ಸ್ವಲ್ಪ ವ್ಯಾಯಾಮ ಮಾಡುವ ಅಭ್ಯಾಸ ಇದೆ. ಮಾರ್ಷಲ್ ಆರ್ಟ್ಸ್ ಹವ್ಯಾಸ ಇದೆ. ಬುಕ್ ಓದುತ್ತೇನೆ ಎಂದು ತಿಳಿಸಿದರು.
ಜೋಡೋ ಯಾತ್ರೆ ಬಳಿಕ ಯಾವಾಗ ವಾಪಸ್ ಕರ್ನಾಟಕಕ್ಕೆ ಬರ್ತೀರಾ ಎಂದು ಕೇಳಿದಾಗ, ನೀವು ಕರೆದಾಗ ಬರ್ತೀನಿ. ನಿಮ್ಮ ಮನೆಗೆ ಕರೆಯಿರಿ ಎಂದು ಹೇಳಿ ರಾಹುಲ್ ನಕ್ಕರು. ಅಷ್ಟೇ ಅಲ್ಲ, ಕಾಶ್ಮೀರದ ತನಕ ನಮ್ಮ ಜೊತೆ ಬನ್ನಿ, ಹೋಗೋಣ. ನಾನು ನಿಮ್ಮನ್ನು ಸ್ವಾಗತಿಸುತ್ತೇನೆ ಎಂದು ರಾಗಾ ಮಾಧ್ಯಮ ಪ್ರತಿನಿಧಿಗಳಿಗೆ ಆಹ್ವಾನ ಕೊಟ್ಟರು.
ಸುಮಾರು 15 ನಿಮಿಷದಲ್ಲಿ ಚುಟುಕಾಗಿ ಕೆಲ ವಿಚಾರಗಳನ್ನು ತಿಳಿಸಿದ ರಾಹುಲ್, ಕರ್ನಾಟಕದಲ್ಲಿ ಪೊಲಿಟಿಕಲ್ ಲಾಭ ನಿರೀಕ್ಷೆ ಮಾಡಿದ್ದೀರಾ ಅಂತಾ ಪ್ರಶ್ನೆ ಕೇಳಿದಾಗ ಉತ್ತರಿಸಲಿಲ್ಲ. ನಮ್ಮ ಸ್ಟೇಟ್ ಲೀಡರ್ಸ್ ಅದನ್ನು ಕೇಳ್ತಾರೆ. ಭಾರತ್ ಜೋಡೋ ದ್ವೇಷ, ಅಸೂಯೆಗಳನ್ನು ಹೋಗಲಾಡಿಸಿ ಜೋಡಿಸುವ ಕೆಲಸ ಮಾಡ್ತಿದೆ ಎಂದಷ್ಟೇ ಹೇಳಬಲ್ಲೆ ಎಂದರು. ಇದನ್ನೂ ಓದಿ: ಬ್ಯಾನ್ ಆದ್ರೂ ಸಕ್ರಿಯವಾಗಿದ್ಯಾ PFI?- ಬೇಟೆ ಮುಂದುವರಿಸಿದ ಮಂಗಳೂರು ಪೊಲೀಸರು