LatestMain PostNational

ರಾಹುಲ್ ಗಾಂಧಿ ನೋಡಿ ಖುಷಿಯಿಂದ ಕೈ ಹಿಡಿದು ಕುಣಿದಾಡಿದ ಯುವತಿ

ತಿರುವನಂತಪುರಂ: ಯುವತಿಯೊಬ್ಬಳು ರಾಹುಲ್ ಗಾಂಧಿಯನ್ನು(Rahul Gandhi) ಭೇಟಿಯಾದಾಗ ಆನಂದಬಾಷ್ಪವನ್ನಿಟ್ಟಿದ್ದಾಳೆ. ನಂತರ ಆಕೆ ಖುಷಿಯಿಂದ ರಾಹುಲ್‌ ಗಾಂಧಿಯ ಕೈ ಹಿಡಿದು ಕುಣಿದಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೇರಳದಲ್ಲಿ (Kerala) ನಡೆದ ಕಾಂಗ್ರೆಸ್‍ನ ಭಾರತ್ ಜೋಡೋ ಯಾತ್ರೆಯ (Bharat Jodo Yatra) 18ನೇ ದಿನದ ಮರವಣಿಗೆ ಸಂದರ್ಭದಲ್ಲಿ ಕಾಂಗ್ರೆಸ್ (Congress) ಮುಖಂಡ ರಾಹುಲ್ ಗಾಂಧಿ ಹಾಗೂ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರು. ಪಂಡಿಕ್ಕಾಡ್ ಶಾಲಾ ಪಾಡಿಯಿಂದ ಆರಂಭವಾದ ಮೆರವಣಿಗೆ ವೇಳೆ ವಂಡೂರು ಜಂಕ್ಷನ್‍ನಲ್ಲಿ ಕೆಲಕಾಲ ವಿರಾಮ ತೆಗೆದುಕೊಳ್ಳಲಾಗಿತ್ತು. ಇದನ್ನೂ ಓದಿ: ಮೋದಿ ಸರ್ಕಾರದಿಂದ ಮಾತ್ರ ಕಠಿಣ ಕ್ರಮ ಸಾಧ್ಯ – NIAಗೆ ಯಶ್‍ಪಾಲ್ ಸುವರ್ಣ ಧನ್ಯವಾದ

ಈ ವೇಳೆ ಅಲ್ಲಿಗೆ ಬಂದ ಯುವತಿಯೊಬ್ಬಳು ರಾಹುಲ್ ಗಾಂಧಿ ಅವರನ್ನು ನೋಡಿ ಖುಷಿಯಿಂದ ಸಂಭ್ರಮಿಸಿದ್ದಾಳೆ. ಅವಳ ಉತ್ಸಾಹವನ್ನು ನೋಡಿ ಮುಗುಳ್ನಕ್ಕ ರಾಹುಲ್ ಗಾಂಧಿ ಅವಳನ್ನು ತಬ್ಬಿಕೊಂಡು ಸಮಾಧಾನ ಪಡಿಸಲು ಪ್ರಯತ್ನಿಸಿದರು. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲೀಗ `PAY MAYOR’ ಅಭಿಯಾನ

Live Tv

Leave a Reply

Your email address will not be published. Required fields are marked *

Back to top button