ತಿರುವನಂತಪುರಂ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಆರಂಭಿಸಿರುವ ಭಾರತ್ ಜೋಡೋ ಯಾತ್ರೆಗೆ (Bharat Jodo Yatra) 2,000 ರೂ. ದೇಣಿಗೆ (Donation) ನೀಡುವಂತೆ ತರಕಾರಿ ವ್ಯಾಪಾರಿ (Vegetable Shop) ಬಳಿ ಕಾಂಗ್ರೆಸ್ ಕಾರ್ಯಕರ್ತರು ಜಗಳವಾಡಿರುವ ಘಟನೆ ಕೇರಳದ ಕೊಲ್ಲಂ (Kerala’s Kollam) ಜಿಲ್ಲೆಯಲ್ಲಿ ನಡೆದಿದೆ.
Advertisement
ಸ್ಥಳೀಯ ಪೊಲೀಸರೊಬ್ಬರು ತಿಳಿಸಿದ ಮಾಹಿತಿ ಪ್ರಕಾರ, ಕಾಂಗ್ರೆಸ್ ಕಾರ್ಯಕರ್ತರು ಭಾರತ್ ಜೋಡೋ ಯಾತ್ರೆಗೆ ದೇಣಿಗೆ ಸಂಗ್ರಹಿಸುತ್ತಿದ್ದರು. ಈ ವೇಳೆ ಕೊಲ್ಲಂನ ತರಕಾರಿ ಅಂಡಿಯೊಂದಕ್ಕೆ ತೆರಳಿ ಅಂಗಡಿ ಮಾಲೀಕನೊಂದಿಗೆ 2,000 ರೂ. ದೇಣಿಗೆ ನೀಡುವಂತೆ ಕೇಳಿದ್ದಾರೆ. ಅಂಗಡಿ ಮಾಲೀಕ ನಾನು 500 ರೂ. ಕೊಡುವುದಾಗಿ ತಿಳಿಸಿದ್ದಾನೆ. ಈ ವೇಳೆ ಅಂಗಡಿ ಮಾಲೀಕ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಅಂಗಡಿಯ ತೂಕದ ಯಂತ್ರಕ್ಕೆ ಹಾನಿ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದರಲ್ಲಿ ವರದಿಯಾಗಿದೆ. ಇದನ್ನೂ ಓದಿ: ಮೊಬೈಲ್ ಕದಿಯಲು ಹೋಗಿ ಕಳ್ಳನ ಫಜೀತಿ – 10 ಕಿ.ಮೀ ಕಿಟಕಿಯಲ್ಲಿ ಜೋತಾಡ್ಕೊಂಡು ಬಂದ
Advertisement
Advertisement
ಅಲ್ಲದೆ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು, ದೃಶ್ಯಾವಳಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಂಗಡಿ ಮಾಲೀಕರ ಬಳಿ ಬಂದು ದೇಣಿಯಾಗಿ 2,000 ರೂ. ಕೊಡುವಂತೆ ಕೇಳಿದ್ದಾರೆ. ಇದಕ್ಕೆ ಅಂಗಡಿ ಮಾಲೀಕರು ಒಪ್ಪದೆ ತಾವು 500 ರೂ. ಕೊಡುವುದಾಗಿ ತಿಳಿಸಿದ್ದಾರೆ. ಬಳಿಕ ಜಗಳ ಆರಂಭಗೊಂಡಿದ್ದು, ಕಾಂಗ್ರೆಸ್ ಕಾರ್ಯಕರ್ತರು ಏರು ಧ್ವನಿಯಲ್ಲಿ ಅಂಗಡಿ ಮಾಲೀಕನಿಗೆ ದಮ್ಕಿ ಹಾಕಿದ್ದಾರೆ. ಇದನ್ನೂ ಓದಿ: ಶಸ್ತ್ರಾಸ್ತ್ರಗಳನ್ನು ತ್ಯಜಿಸಿ – ಉಗ್ರರಿಗೆ ಗುಲಾಂ ನಬಿ ಆಜಾದ್ ಮನವಿ
Advertisement
Kerala | Vegetable shop owner threatened by Congress workers for not contributing Rs 2000 in fund collection for 'Bharat Jodo Yatra' in Kollam
(Photo source: Screenshot from viral video) pic.twitter.com/vzQaRWqwiB
— ANI (@ANI) September 16, 2022
ಘಟನೆಯ ಬಳಿಕ ಅಂಗಡಿ ಮಾಲೀಕ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಇನ್ನೊಂದು ಪ್ರತಿದೂರು ದಾಖಲಿಸಿದ್ದಾರೆ.
ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿದ್ದು, ಯಾತ್ರೆಯು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ. ಯಾತ್ರೆಯು 3,500 ಕಿ.ಮೀ ದೂರವನ್ನು ಕ್ರಮಿಸುತ್ತಿದ್ದು 12 ರಾಜ್ಯಗಳನ್ನು ಹಾದುಹೋಗಲಿದೆ.