ಪಾಟ್ನಾ: ನಿತೀಶ್ ಕುಮಾರ್ (Nitish Kumar) ಯೂ-ಟರ್ನ್ ಹೊಡೆದು ಬಿಹಾರದ (Bihar) ಸಿಎಂ ಪಟ್ಟ ಅಲಂಕರಿಸಿದ ಬಳಿಕ ಕಾಂಗ್ರೆಸ್ ನಾಯಕರ ಭಾರತ್ ಜೋಡೋ ಯಾತ್ರೆ (Bharath Jodo Yatra) ಮೊದಲ ಬಾರಿಗೆ ಎಂಟ್ರಿ ಕೊಡಲಿದೆ.
ಭಾನುವಾರವಷ್ಟೇ ನಿತೀಶ್ ಕುಮಾರ್ ಬಿಜೆಪಿ ನೇತೃತ್ವದ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‌ಡಿಎ)ಗೆ ಮರಳಿ ಸಿಎಂ ಆದರು. ಇದಾದ ಬಳಿಕ ಅಂದರೆ ಇಂದು ಅಥವಾ ನಾಳೆ ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ಯಾತ್ರೆ ಬಿಹಾರಕ್ಕೆ ಪ್ರವೇಶಿಸಲು ನಿರ್ಧರಿಸಿದೆ. ಇದನ್ನೂ ಓದಿ: ಇನ್ನೊಂದೇ ವಾರದಲ್ಲಿ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ - ಬಿಜೆಪಿ ಸಚಿವರ ಗ್ಯಾರಂಟಿ
Advertisement
Advertisement
2020ರ ವಿಧಾನಸಭಾ ಚುನಾವಣಾ ಪ್ರಚಾರದ ನಂತರ ರಾಹುಲ್ ಗಾಂದಿಯವರು ಈ ರಾಜ್ಯಕ್ಕೆ ಇದೇ ಮೊದಲ ಬಾರಿ ಭೇಟಿ ನೀಡಲಿದ್ದಾರೆ. ಮುಸ್ಲಿಮರ ಪ್ರಾಬಲ್ಯ ಹೆಚ್ಚಿರುವ ಬಿಹಾರ್‌ದ ಕೀಶನ್ಗಂಜ್‌ನಿಂದ ಯಾತ್ರೆ ಪ್ರಾರಂಭವಾಗಲಿದೆ. ಪಕ್ಕದ ಜಿಲ್ಲೆಯಾಗಿರುವ ಪೂರ್ನಿಯಾದಲ್ಲಿ ದೊಡ್ಡ ರ‍್ಯಾಲಿಯನ್ನು ಕೈಗೊಂಡ ನಂತರ ರಾಹುಲ್ ಗಾಂಧಿ ಸಾರ್ವಜನಿಕರನ್ನು ಉದ್ದೇಶಿಸಿ ಸಭೆಯಲ್ಲಿ ಮಾತನಾಡಲಿದ್ದಾರೆ. ನಂತರ ಕತಿಹಾರ್‌ನಲ್ಲಿ ರ‍್ಯಾಲಿ ಮುಂದುವರಿಯಲ್ಲಿದೆ. ಇದನ್ನೂ ಓದಿ: I am a Hindu, ಆದ್ರೆ ಬಿಜೆಪಿಯವರು ಚುನಾವಣೆಗೋಸ್ಕರ ಪ್ರಚೋದನೆ ಕೊಡ್ತಿದ್ದಾರೆ: ಸಿಎಂ ಸಿಡಿಮಿಡಿ
Advertisement
Advertisement
ಮೂರು ದಿನಗಳಲ್ಲಿ ಬಿಹಾರದ ನಾಲ್ಕು ಜಿಲ್ಲೆಗಳಲ್ಲಿ ಯಾತ್ರೆ ನಡೆಯಲಿದ್ದು, ರಾಹುಲ್ ಗಾಂಧಿ ಗುರುವಾರ (ಫೆ.1) ಅರಾರಿಯಾ ಜಿಲ್ಲೆಯ ಮೂಲಕ ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾರೆ. ಕೆಲವು ದಿನಗಳು ಜಾರ್ಖಂಡ್ ಮೂಲಕ ಬಿಹಾರಕ್ಕೆ ಹಿಂದಿರುಗುತ್ತಾರೆ ಎನ್ನಲಾಗಿದೆ. ಇದನ್ನೂ ಓದಿ: ಪರೀಕ್ಷೆ ಆತಂಕ ಕಾಡ್ತಿದೆಯಾ? – ವಿದ್ಯಾರ್ಥಿಗಳಿಗೆ ಇಲ್ಲಿದೆ ಪ್ರಧಾನಿ ಮೋದಿಯ ಟಾಪ್-10 ಟಿಪ್ಸ್!
ಆರ್‌ಜೆಡಿ ಮುಖ್ಯಸ್ಥರಾದ ಲಾಲು ಯಾದವ್ ಜ.31 ರಂದು ಪೂರ್ನಿಯಾ ಅಥವಾ ಕತಿಹಾರ್‌ನಲ್ಲಿ ರ‍್ಯಾಲಿಗೆ ಬರುವ ಸಾಧ್ಯತೆಗಳಿವೆ. ಜೊತೆಗೆ ಸಿಪಿಐ(ಎಂಎಲ್) ಎಲ್‌ನ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ವಾಚಾರ್ಯ ಅವರನ್ನೂ ಪೂರ್ನಿಯಾದಲ್ಲಿ ನಡೆಯುವ ರ‍್ಯಾಲಿಗೆ ಆಹ್ವಾನಿಸಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಶಿಷ್ಟಾಚಾರಗೆಟ್ಟ ಮುಖ್ಯಮಂತ್ರಿ: ಹೆಚ್‌ಡಿಕೆ ವಾಗ್ದಾಳಿ
ಭಾರತ್ (ಇಂಡಿಯಾ) ಬ್ಲಾಕ್ ರಚನೆಗೆ ಕಾರಣವಾದ ವಿವಿಧ ವಿರೋಧ ಪಕ್ಷಗಳನ್ನು ಒಟ್ಟು ಗೂಡಿಸುವಲ್ಲಿ ನಿತೀಶ್ ಪ್ರಮುಖ ಪಾತ್ರ ವಹಿಸಿದ್ದರು. ಜೊತೆಗೆ ರಾಹುಲ್ ಗಾಂಧಿಯೊಂದಿಗೆ ವೇದಿಕೆ ಹಂಚಿಕೊಳ್ಳುತ್ತಾರೆ ಎಂಬ ನೀರಿಕ್ಷೆಯಿತ್ತು. ಆದರೆ ಈಗ ಅವರು ರಾಹುಲ್ ಗಾಂಧಿಗೆ ಶಾಕ್ ನೀಡಿದ್ದಾರೆ. ಇದನ್ನೂ ಓದಿ: ಹನುಮಧ್ವಜ ಸಂಘರ್ಷ; ಭುಗಿಲೆದ್ದ ಆಕ್ರೋಶ – ಮೈಸೂರು ಬ್ಯಾಂಕ್ ವೃತ್ತದಲ್ಲಿ ಭಾರೀ ಹೈಡ್ರಾಮಾ