ದಿಸ್ಪುರ್: ಭಾರತ್ ಜೋಡೋ ಯಾತ್ರೆಯನ್ನು(Bharat Jodo Yatra )ಕಾಂಗ್ರೆಸ್ ಪಾಕಿಸ್ತಾನದಿಂದ ಆರಂಭಿಸಬೇಕಿತ್ತು ಎಂದು ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮಾ(Himanta Biswa Sarma) ಹೇಳಿದ್ದಾರೆ.
ಕಾಂಗ್ರೆಸ್(Congress) ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 1947ರಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಭಾರತ ವಿಭಜನೆಯಾಯಿತು. ಹೀಗಾಗಿ ಭಾರತದಲ್ಲಿ ಈ ಅಭಿಯಾನವನ್ನು ಆರಂಭಿಸುವ ಬದಲು ರಾಹುಲ್ ಗಾಂಧಿ ಪಾಕಿಸ್ತಾನದಲ್ಲಿ ಆರಂಭಿಸಿದರೆ ಉತ್ತಮವಾಗಿರುತ್ತಿತ್ತು ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಹಿಂಬದಿ ಸವಾರರಿಗೂ ಸೀಟ್‌ಬೆಲ್ಟ್ ಕಡ್ಡಾಯ, ತಪ್ಪಿದರೆ ದಂಡ
Advertisement
ಸ್ವತಂತ್ರಕ್ಕಾಗಿ ಭಾರತೀಯರನ್ನು ಒಗ್ಗೂಡಿಸುವ ಹಲವು ಚಳವಳಿಗಳು ಇತಿಹಾಸದಲ್ಲಿ ದಾಖಲಾಗಿವೆ.
ಈಗ ಮತ್ತೊಮ್ಮೆ ಐತಿಹಾಸಿಕ "ಭಾರತ ಐಕ್ಯತಾ ಯಾತ್ರೆ" ಆರಂಭಗೊಳ್ಳುತ್ತಿದೆ.
ಭಾರತದ ಭವ್ಯ ಭವಿಷ್ಯಕ್ಕಾಗಿ.
ಯಾತ್ರೆ ಆರಂಭಕ್ಕೂ ಮುನ್ನ @RahulGandhi ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು.#BharatJodoYatra pic.twitter.com/LatA7Z3dFy
— Karnataka Congress (@INCKarnataka) September 7, 2022
Advertisement
ಭಾರತ ಈಗ ಒಗ್ಗಟ್ಟಾಗಿದೆ. ಭಾರತದಲ್ಲಿ ಈ ಯಾತ್ರೆಯನ್ನು ಕೈಗೊಂಡರೆ ಏನು ಪ್ರಯೋಜನವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
Advertisement
150 ದಿನಗಳ ಕಾಲ ನಡೆಯಲಿರುವ ಭಾರತ್ ಜೋಡೋ ಯಾತ್ರೆಗೆ ಇಂದು ಚಾಲನೆ ಸಿಗಲಿದೆ. ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ 3,570 ಕಿ.ಮೀ ಪಾದಯಾತ್ರೆ ನಡೆಯಲಿದೆ.