ತುಮಕೂರು: ಬಿಜೆಪಿ (BJP)-ಕಾಂಗ್ರೆಸ್ (Congress) ನಡುವೆ ಪೋಸ್ಟರ್ (Poster) ವಾರ್ ಶುರುವಾಗಿದೆ. ಕಾಂಗ್ರೆಸ್‍ನ ಪೇ ಸಿಎಂ ಅಭಿಯಾನಕ್ಕೆ ಬಿಜೆಪಿ, ರಾಹುಲ್ ಗಾಂಧಿ (Rahul Gandhi) ಭಾರತ್ ಜೋಡೋ (Bharat Jodo Yatra) ಪಾದಯಾತ್ರೆಯಲ್ಲಿ ಪೋಸ್ಟರ್ ವಾರ್ ಶುರು ಮಾಡಿದ್ದು, ಮತ್ತೊಂದು ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ.
ರಾಜ್ಯದಲ್ಲಿ ಪೋಸ್ಟರ್ ವಾರ್ ದಿನೇ ದಿನೇ ದೊಡ್ಡದಾಗುತ್ತಿದೆ. ಕಾಂಗ್ರೆಸ್‍ನ ಪೇ ಸಿಎಂ (PayCm) ಅಭಿಯಾನಕ್ಕೆ ಬಿಜೆಪಿ ಟಕ್ಕರ್ ಕೊಡುವ ಕೆಲಸ ನಿರಂತರವಾಗಿ ಮಾಡುತ್ತಿದೆ. ರಾಹುಲ್‍ಗಾಂಧಿ ಯಾತ್ರೆಯಲ್ಲಿ ಕಾಂಗ್ರೆಸ್ ವಿರೋಧಿ ಪೋಸ್ಟರ್‌ಗಳು ಮಂಡ್ಯ ಬಳಿಕ ಚಿಕ್ಕನಾಯಕನಹಳ್ಳಿಯಲ್ಲೂ ರಾರಾಜಿಸುತ್ತಿವೆ. ಸಿದ್ದರಾಮಯ್ಯರನ್ನು (Siddaramaiah) ಹಿಂದೂ ವಿರೋಧಿ ಎಂದು ಬಿಂಬಿಸಲಾಗಿದೆ. ರಾಜು, ಕುಟ್ಟಪ್ಪನ ಸ್ವಾಗತದ ರೀತಿಯ ಪೋಸ್ಟರ್ ಹಾಕಲಾಗಿದೆ. ಸಿದ್ದರಾಮಯ್ಯನವರೇ ನಾನು ರಾಜು, ಕಾಂಗ್ರೆಸ್‍ನಿಂದಲೇ ನನ್ನ ಕೊಲೆ ಆಗಿದ್ದು. ಪಿಎಫ್‍ಐ (PFI), ಎಸ್‍ಡಿಪಿಐ (SDPI) ಮೇಲಿನ ನಿಮ್ಮ ಪ್ರೀತಿಗೆ ಅವರ ಮೇಲಿನ ಪ್ರಕರಣಗಳನ್ನು ಕೈಬಿಟ್ಟಿದ್ದಕ್ಕೆ ನಾನು ಕೊಲೆಯಾದೆ. ಈ ಹೆಗ್ಗಳಿಕೆ ನಿಮಗೇ ಸಲ್ಲಲಿ ಎಂದು ಪೋಸ್ಟರ್‌ಗಳಲ್ಲಿ ಬರೆಯಲಾಗಿದೆ. ಇದನ್ನೂ ಓದಿ: ರಾಹುಲ್‌ಗಾಂಧಿ ಪೋಸ್ಟರ್‌ಗೆ `ಚಪ್ಪಲಿ ಎಸೆಯಿರಿ’ ಆಂದೋಲನಕ್ಕೆ ಕರೆ ಕೊಟ್ಟ ಬಿಜೆಪಿ ನಾಯಕ
ಬಿಜೆಪಿಯ ಪೋಸ್ಟರ್ ಕೀಟಲೆಗೆ ಕಾಂಗ್ರೆಸ್ ಕೆಂಡಾಮಂಡಲವಾಗಿದೆ. ಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ಹೇಡಿಗಳು ಮಾಡುವ ಕೃತ್ಯ ಎಂದು ಟೀಕಿಸಿದ್ದಾರೆ. ಮಾಜಿ ಡಿಸಿಎಂ ಪರಮೇಶ್ವರ್ ಕೂಡ ಕಿಡಿಕಾರಿದ್ದು, ಬಿಜೆಪಿಗೆ ಭಾರತ್ ಜೋಡೋ ಪಾದಯಾತ್ರೆ ನೋಡಿ ಭಯ ಶುರುವಾಗಿದೆ. ಹೀಗಾಗಿ ಇಂತಹ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿದ್ದ ದೇವರ ಮೊಸಳೆ ಬಬಿಯಾ ಇನ್ನಿಲ್ಲ
Live Tv
[brid partner=56869869 player=32851 video=960834 autoplay=true]