ಮೈಸೂರು: ಚಾಮರಾಜನಗರ ಹಿಂದುಳಿದ ಜಿಲ್ಲೆಯಗಿದ್ದು, ಅಲ್ಲಿ ಬಿಜೆಪಿ (BJP) ಮಾಡಿರುವ ಅಭಿವೃದ್ಧಿ ನೋಡಿಕೊಂಡು ಬನ್ನಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭೇಟಿಗೆ ಸಂಸದ ಪ್ರತಾಪ್ ಸಿಂಹ (Pratap Simha) ಲೇವಡಿ ಮಾಡಿದ್ದಾರೆ.
Advertisement
ಕಾಂಗ್ರೆಸ್ (Congress) ಭಾರತ್ ಜೋಡೋ ಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದರು, ಯಾತ್ರೆ ವೇಳೆ ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿಕೊಂಡು ಬನ್ನಿ. ಮತ ಪ್ರಚಾರಕ ಪ್ಯಾಸ್ಟರ್ ಭೇಟಿ ಮಾಡಿ ಆರಂಭವಾದ ಯಾತ್ರೆ ಇದು. ಜೀಸಸ್ (Jesus) ಒಬ್ಬನೇ ದೇವರು ಅನ್ನುವವನ ಭೇಟಿಯಿಂದ ಶುರುವಾದ ಯಾತ್ರೆ ಇದು. ಇದರಲ್ಲಿಯೇ ನಿಮ್ಮ ಉದ್ದೇಶ ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ – ಇಂದು, ನಾಳೆ ಅಂತರರಾಜ್ಯ ಸಂಚಾರಕ್ಕೆ ಬದಲಿ ಮಾರ್ಗ ಬಳಸಿ
Advertisement
Advertisement
ಜೋಡಿಸುವ ಯಾತ್ರೆ ಅಲ್ಲ ಇದು ಒಡೆಯುವ ಯಾತ್ರೆ. ರಾಜ್ಯಕ್ಕೆ ಬಂದಾಗ ಮಲೈ ಮಹದೇಶ್ವರ ದೇವಸ್ಥಾನಕ್ಕೆ ಹೋಗಿ ಬನ್ನಿ. ಯಡಿಯೂರಪ್ಪ (B S Yediyurappa) ಸರ್ಕಾರ ಕಾಲದಲ್ಲಿ ಅಲ್ಲಿನ ಕೆರೆಗಳಿಗೆ ನೀರು ತುಂಬಿಸಲಾಗಿದೆ. ಅವುಗಳನ್ನು ನೋಡಿಕೊಂಡು ಬನ್ನಿ. ಚಾಮರಾಜನಗರ (Chamarajanagar) ಹಿಂದುಳಿದ ಜಿಲ್ಲೆ ಅಲ್ಲಿ ಬಿಜೆಪಿ ಮಾಡಿರುವ ಅಭಿವೃದ್ಧಿ ನೋಡಿಕೊಂಡು ಬನ್ನಿ. ನಂಜನಗೂಡು ಬಂದಾಗ ರಿಂಗ್ ರಸ್ತೆ ನೋಡಿ. ಮೈಸೂರು ವಿಮಾನ ನಿಲ್ದಾಣ (Mysuru Airport) ನೋಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ರೇಸ್‍ನಲ್ಲಿ ಖರ್ಗೆ – ಕಡೆಯ ಹಂತದಲ್ಲಿ ಕಣಕ್ಕಿಳಿಯುವ ಸಾಧ್ಯತೆ
Advertisement
ಇನ್ನು ಐದು ವರ್ಷದ ನಂತರ ಮತ್ತೆ ಯಾತ್ರೆ ಮಾಡಿ. ಆಗ ಬಸ್‍ನಲ್ಲಿ ಬರುವುದು ಬೇಡ ಜೆಟ್‍ನಲ್ಲಿ ಬನ್ನಿ. ಅಂತಹ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿರುತ್ತೇವೆ. ಮೈಸೂರಿಗೆ ಬಂದಾಗ ಪ್ಯಾಸ್ಟರ್ ಬದಿಗಿಟ್ಟು ಚಾಮುಂಡಿ ತಾಯಿಗೆ ನಮಸ್ಕರಿಸಿ. ದಸರಾದಲ್ಲಿ ಭಾಗಿಯಾಗಿ ಮೋದಿ (Narendra Modi) ಹೈವೇ ಮೈಸೂರು-ಬೆಂಗಳೂರು ರಸ್ತೆ ನೋಡಿ. ನಾವು ಮಾಡಿರುವ ಅಭಿವೃದ್ಧಿ ಕಾರ್ಯ ನೋಡುತ್ತಾ ನಿಮ್ಮ ಯಾತ್ರೆ ಮುಂದುವರಿಸಿ ಎಂದು ರಾಹುಲ್‍ಗೆ ಪ್ರತಾಪ್ ಸಿಂಹ ಸಲಹೆ ನಿಡಿದ್ದಾರೆ.