ಮಂಡ್ಯ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್(KC Venugopal) ಕ್ಲಾಸ್ ತೆಗೆದುಕೊಳ್ಳುತ್ತಿದ್ದಂತೆ ಭಾರತ್ ಜೋಡೋ ಪಾದಯಾತ್ರೆ ಮುಗಿಯುವ ಮೊದಲೇ ಸ್ಥಳದಿಂದ ಚಾಮರಾಜನಗರ ಶಾಸಕ ಜಮೀರ್ ಅಹ್ಮದ್ ಕಾಲ್ಕಿತ್ತಿದ್ದಾರೆ.
ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಜಮೀರ್ ಅಹ್ಮದ್ ಇಂದಿನ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಜಮೀರ್ ಅಹ್ಮದ್‌ಗೆ ಇಂದು ಕೆಪಿಸಿಸಿ 5 ಸಾವಿರ ಮಂದಿಯನ್ನು ಕರೆ ತರುವ ಟಾರ್ಗೆಟ್ ನೀಡಿತ್ತು.
Advertisement
Advertisement
ಕೆಪಿಸಿಸಿ ಸೂಚನೆ ನೀಡಿದ್ದರೂ 4-5 ಕಾರಿನಲ್ಲಿ ಜಮೀರ್ ಬೆಂಬಲಿಗರ ಜೊತೆ ಆಗಮಿಸಿದ್ದರು. ಕಡಿಮೆ ಸಂಖ್ಯೆಯ ಬೆಂಬಲಿಗರ ಜೊತೆ ಆಗಮಿಸಿದ್ದನ್ನು ವೇಣುಗೋಪಾಲ್‌ಗೆ ರಾಜ್ಯದ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ಇದನ್ನೂ ಓದಿ: ಹೇ.. ಇದು ಬೆಂಗಳೂರು ಅಲ್ಲ – ನಲಪಾಡ್‌ಗೆ ಮಂಡ್ಯ ಕಾರ್ಯಕರ್ತನಿಂದ ತರಾಟೆ
Advertisement
ವಿಚಾರ ಗೊತ್ತಾಗಿ ವೇಣುಗೋಪಾಲ್ ಜಮೀರ್ ಬಳಿ, ಎಷ್ಟು ಜನರನ್ನು ಕರೆ ತಂದಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಕಡಿಮೆ ಜನ ಬಂದಿದ್ದಕ್ಕೆ ಜಮೀರ್ ಸಮಜಾಯಿಷಿ ಕೊಡಲು ಮುಂದಾದಾಗ ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ವೇಣುಗೋಪಾಲ್ ಬಯ್ಯುತ್ತಿದ್ದಂತೆ ಪಾದಯಾತ್ರೆ ಮುಗಿಯುವ ಮೊದಲೇ ಸ್ಥಳದಿಂದ ಜಮೀರ್ ಕಾಲ್ಕಿತ್ತಿದ್ದಾರೆ.
Advertisement
ಪ್ರತಿದಿನ ಶಾಸಕರಿರುವ ಕ್ಷೇತ್ರಗಳಿಗೆ 5 ಸಾವಿರ ಜನರನ್ನು ಕರೆ ತರುವಂತೆ ಕೆಪಿಸಿಸಿ ಟಾರ್ಗೆಟ್ ನೀಡಿದೆ ಎನ್ನಲಾಗುತ್ತಿದೆ.