ಬೆಂಗಳೂರು: ಸೋಮವಾರ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ ನಿಂದ ಕರ್ನಾಟಕ ರಾಜ್ಯದಲ್ಲಿ ಮೂರುವರೆ ಸಾವಿರ ಕೋಟಿ ರೂ. ವ್ಯಾಪಾರ ನಷ್ಟವಾಗಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‍ಕೆಸಿಸಿಐ) ಹೇಳಿದೆ.
ಇನ್ನೂರು ಕೋಟಿ ರೂ. ನೇರವಾಗಿ ಲಾಸ್ ಆಗಿದ್ದರೆ, ಮೂವತ್ತು ಕೋಟಿ ರೂ. ಬರೀ ಪೆಟ್ರೋಲ್ ಬಂಕ್ ಗಳಿಂದ ಬರುವ ಆದಾಯ ನಷ್ಟವಾಗಿದೆ. ಕೈಗಾರಿಕೆಗಳಿಂದ ಬರುವ ನಿತ್ಯದ 160 ಕೋಟಿ ರೂ. ನಷ್ಟವಾಗಿದೆ ಎಫ್‍ಕೆಸಿಸಿಐ ಅಧ್ಯಕ್ಷರಾಗಿ ಸುಧಾಕರ್ ಎಸ್.ಶೆಟ್ಟಿ ಹೇಳಿದ್ದಾರೆ.
Advertisement
ಬಂದ್ ನಿಂದ ಯಾವ ಪ್ರಯೋಜನವೂ ಇಲ್ಲ. ರಾಜ್ಯ ಸರ್ಕಾರ ಕೂಡಲೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಇಳಿಸಲೇಬೇಕು. ಸೆಸ್ ಇಳಿಸಲು ಮೀನಾಮೇಷ ಎಣಿಸುವುದು ಬೇಡ. ಕೈಗಾರಿಕೆಗಳಿಗೆ ಸೇರಿದಂತೆ ಇಡೀ ವ್ಯಾಪಾರಿ ಸಮೂಹಕ್ಕೆ ಬಂದ್ ನಿಂದ ಭಾರೀ ನಷ್ಟವಾಗಿದೆ ಎಂದು ಅವರು ತಿಳಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv