ಬೆಂಗಳೂರು: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆಕೊಟ್ಟಿರುವ ಭಾರತ್ ಬಂದ್ ಗೆ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಇರೋದ್ರಿಂದ ವ್ಯಾಪಕ ಬೆಂಬಲ ಸಿಗುವ ಸಾಧ್ಯತೆಗಳಿವೆ. ಈಗಾಗಲೇ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಂದ್ ಗೆ ಸಂಪೂರ್ಣ ಬೆಂಬಲ ನೀಡಲಿದ್ದೇವೆ ಅಂತಾ ಹೇಳಿದ್ದು ಸಾರಿಗೆ ನಿಗಮಗಳು ಕೂಡ ಭಾರತ್ ಬಂದ್ ಗೆ ಬೆಂಬಲ ಸೂಚಿಸಿವೆ. ಸರ್ಕಾರವೇ ಬಂದ್ ಗೆ ಬೆಂಬಲ ಕೊಡೋದ್ರಿಂದ ಬೆಂಗಳೂರಿನಲ್ಲಿ ಬಂದ್ ಬಿಸಿ ಹೇಗಿರಲಿದೆ? ಭಾರತ್ ಬಂದ್ ದಿನ ಏನಿರುತ್ತೆ? ಏನಿರಲ್ಲ ಎಂಬುದರ ಮಾಹಿತಿ ಇಲ್ಲಿದೆ.
ಬಂದ್‍ಗೆ ಬೆಂಬಲ ಕೊಟ್ಟ ಸಂಘಟನೆಗಳು:
1. ಬಿಎಂಟಿಸಿ, ಕೆ.ಎಸ್.ಆರ್.ಟಿ.ಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳಿಂದಲೂ ಬೆಂಬಲ. ಬಂದ್ ದಿನ ಬಸ್ ಇರಲ್ಲ.
2. ಕೆಲ ಆಟೋ ಯೂನಿಯನ್ ನಿಂದ ಬೆಂಬಲ
3. ಓಲಾ ಉಬರ್ ಸಂಘದಿಂದ ಸಂಪೂರ್ಣ ಬೆಂಬಲ
4. ಚಿತ್ರ ಪ್ರದರ್ಶನ ಬಂದ್ ಸಾಧ್ಯತೆ.
5. ಕನ್ನಡ ರಕ್ಷಣಾ ವೇದಿಕೆ ನಾರಾಯಣಗೌಡ ಬಣದಿಂದ ಬೆಂಬಲ (ಕೇಂದ್ರ ಸರ್ಕಾರ ಸ್ವಾಮ್ಯದ ಕಚೇರಿಯ ಮುಂದೆ ಪ್ರತಿಭಟನೆ)
6. ಕನ್ನಡ ಒಕ್ಕೂಟ ವಾಟಾಳ್ ನಾಗರಾಜ್ ರಿಂದ ಬೆಂಬಲ
7. ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಆಯಾಯ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದು, ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಪ್ರಕಟ.
Advertisement
Advertisement
ಬಂದ್‍ಗೆ ‘ಕೈ’ ಕೊಟ್ಟ ಸಂಘಟನೆಗಳು:
1. ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡದ ಕ್ಯಾಮ್ಸ್. (ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಪ್ರಕಟ ಸಾಧ್ಯತೆ)
2. ಲಾರಿ ಸಂಘದ ಬೆಂಬಲ ಇಲ್ಲ.
3. ಖಾಸಗಿ ಟ್ಯಾಕ್ಸಿಗಳ ಬೆಂಬಲ ಇಲ್ಲ.
4. ಕೆಲ ಆಟೋ ಯೂನಿಯನ್ ಬೆಂಬಲ ಇಲ್ಲ.
5. ಮೆಟ್ರೋ ಸಂಚಾರ.
6. ಬ್ಯಾಂಕ್ ಗಳು ಕಾರ್ಯನಿರ್ವಹಿಸುವ ಸಾಧ್ಯತೆ.
Advertisement
ಗೊಂದಲದಲ್ಲಿರುವವರು:
1. ಹೋಟೆಲ್ ಮಾಲೀಕರ ಸಂಘದಿಂದ ಬಂದ್‍ಗೆ ಬೆಂಬಲ ಕೊಡಬೇಕೋ? ಬೇಡೆವೋ? ಎಂಬುದರ ಬಗ್ಗೆ ಭಾನುವಾರ ಸಂಜೆ ಅಂತಿಮ ನಿರ್ಧಾರ
2. ಖಾಸಗಿ ಬಸ್ ಗಳಿಂದ ಇನ್ನು ಅಂತಿಮ ನಿರ್ಧಾರ ಪ್ರಕಟವಾಗಿಲ್ಲ.
Advertisement
ಈ ಮಧ್ಯೆ ಇಂದು ಕಾಂಗ್ರೆಸ್ ಯುವ ಮೋರ್ಚದಿಂದ ಮೌರ್ಯ ಸರ್ಕಲ್ ನಲ್ಲಿ ತೈಲ ದರ ಏರಿಕೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಯಿತು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಕೂಡ ಪ್ರತಿಭಟನೆ ಯಲ್ಲಿ ಪಾಲ್ಗೊಂಡು, ಬೆಲೆ ಏರಿಕೆ ತಡೆಯುವಲ್ಲಿ ಕೇಂದ್ರ ವಿಫಲವಾಗಿದೆ ಅಂತಾ ಕಿಡಿಕಾರಿದರು. ಇದೇ ವೇಳೆ ಸೋಮವಾರ ನಡೆಯುವ ಬಂದ್‍ಗೆ ಬೆಂಬಲ ಕೊಡುವಂತೆ ವಾಹನ ಸವಾರರಿಗೆ ಮನವಿ ಮಾಡಿದರು. ಕನ್ನಡ ಒಕ್ಕೂಟ ನಾಗೇಶ್ ಬಣದಿಂದ ಬನ್ನಪ್ಪ ಪಾರ್ಕ್ ನಲ್ಲಿ ತೈಲ ಬೆಲೆ ವಿರೋಧಿಸಿ ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಡಿಸೇಲ್ ನ್ನು ತಲೆಯ ಮೇಲೆ ಹೊತ್ತುಕೊಂಡು ಪ್ರತಿಭಟನೆ ಮಾಡಿದರು.
ಸೋಮವಾರ ಭಾರತ್ ಬಂದ್ ಕರ್ನಾಟಕದಲ್ಲಿ, ಬೆಂಗಳೂರಿನಲ್ಲಿ ಸಕ್ಸಸ್ ಆಗೋದು ಬಹುತೇಕ ಖಚಿತವಾಗಿದೆ. ಬಂದ್ ದಿನ ಮೋದಿ ಸರ್ಕಾರದ ವಿರುದ್ಧ ಪುರಭವನದ ಮುಂದೆ ಬೃಹತ್ ಹೋರಾಟಕ್ಕೆ ಸಮ್ಮಿಶ್ರ ಸರ್ಕಾರ ರೆಡಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=u9AYRhmlwlo