‘ನಮ್ಮ ಮೆಟ್ರೋ’ಗೆ ತಟ್ಟಿದ ಭಾರತ್ ಬಂದ್ ಬಿಸಿ..?

Public TV
1 Min Read
Namma Metro

ಬೆಂಗಳೂರು: ಭಾರತ್ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ. ಮೆಟ್ರೋ ಸಂಚಾರ ಬೆಳಗ್ಗೆ 6 ಗಂಟೆಯಿಂದ ಆರಂಭವಾಗಿದ್ದು, 10 ಗಂಟೆಯ ನಂತರ ನಿಲ್ಲಿಸಲು ಸೂಚಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಮೊದಲು ಬಸ್ ಗಳಿಲ್ಲದೇ ಪ್ರಯಾಣಿಕರಿಗೆ ಮೆಟ್ರೋನೇ ಆಶ್ರಯ. ಹಾಗಾಗಿ ಮೆಟ್ರೋ ಸಂಚಾರ ಸ್ಥಗಿತಗೊಳಿಸದಂತೆ ಬಿಎಂಆರ್ ಸಿಎಲ್ ಎಂಡಿ ಸೂಚನೆ ನೀಡಿದ್ದರು. ಆದ್ರೆ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಯ ನಂತರ ಟಿಕೆಟ್ ವಿತರಿಸದಂತೆ ಮೆಟ್ರೋ ಅಧಿಕಾರಿಗಳು ಸಿಬ್ಬಂದಿಗೆ ಮೌಖಿಕ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ನಮ್ಮ ಮೆಟ್ರೋ ಸಂಚಾರ ನಿಂತರೆ ಇಡೀ ಬೆಂಗಳೂರು ನಗರ ಸ್ತಬ್ಧವಾಗಲಿದೆ.

METRO 1

ನಗರದಲ್ಲಿ ಆಟೋಗಳ ಸಂಚಾರವಿದ್ದು, ಆದ್ರೆ ಚಾಲಕರು ಹಗಲು ದರೋಡೆಗೆ ನಿಂತಿದ್ದಾರೆ. ಬೆಂಗಳೂರು ನಗರದ ಕೆಲವೆಡೆ ಖಾಸಗಿ ವಾಹನಗಳ ಸಂಚರಿಸುತ್ತಿದ್ದರೂ, ಪ್ರಯಾಣಕರಿಂದ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ. ಇದೂವರೆಗೂ ಬೆಂಗಳೂರಿನ ಯಾವುದೇ ಡಿಪೋಗಳಿಂದ ಬಸ್ ಗಳು ರಸ್ತೆಗೆ ಇಳಿದಿಲ್ಲ.

ದೇಶದಲ್ಲಿ ಈ ಮೊದಲು 12 ಅಥವಾ 15 ದಿನಕ್ಕೊಮ್ಮೆ ತೈಲದರ ಪರಿಷ್ಕರಣೆ ಆಗುತ್ತಿತ್ತು. ಆದರೆ ಜೂನ್ 15, 2017ರಿಂದ ಪ್ರತಿದಿನ ಪರಿಷ್ಕರಣೆ ಆಗುತ್ತಿದೆ. ಅದರಂತೆ, ಆಗಸ್ಟ್ 31ರಿಂದ ಇವತ್ತಿನ ವರಗೆ ನಿರಂತರವಾಗಿ 12 ದಿನಗಳಲ್ಲಿ ಲೀಟರ್ ಪೆಟ್ರೋಲ್ ಗೆ ಬರೋಬ್ಬರಿ 3 ರೂಪಾಯಿ ಹಾಗೂ ಡೀಸೆಲ್ ಲೀಟರ್‍ಗೆ ಎರಡೂವರೆ ರೂಪಾಯಿ ದುಬಾರಿಯಾಗಿದೆ.

namma metro 1

ದೇಶವ್ಯಾಪಿ ಸಾವಿರಾರು ಸಂಘಟನೆಗಳು ಬೆಂಬಲ ಸೂಚಿಸಿವೆ. ಅಂದಹಾಗೆ, ಮೇ 2014ರಲ್ಲಿ ಮೋದಿ ಸರ್ಕಾರ ಬಂದಾಗಿನಿಂದ ತೈಲದರದ ಮೇಲಿನ ಅಬಕಾರಿ ಸುಂಕ 12 ಬಾರಿ ಹೆಚ್ಚಾಗಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಶೇ.211.7ರಷ್ಟು ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕ ಬರೋಬ್ಬರಿ ಶೇ. 443.06ರಷ್ಟು ಹೆಚ್ಚಾಗಿದೆ. 414 ರೂಪಾಯಿ ಇದ್ದ ಗ್ಯಾಸ್ ಸಿಲಿಂಡರ್ ದರ 754 ರೂಪಾಯಿಗೆ ದುಪ್ಪಟ್ಟಾಗಿದೆ ಅಂತ ಕಾಂಗ್ರೆಸ್ ಅರೋಪಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *