-ಮಲ್ಲೇಶ್ವರಂ, ಯಶವಂತಪುರದಲ್ಲಿ ಬಸ್‍ಗಳ ಮೇಲೆ ಕಲ್ಲು ತೂರಾಟ
ಬೆಂಗಳೂರು: ಇಂದು ಮತ್ತು ನಾಳೆ ಬಂದ್ ಹಿನ್ನೆಲೆಯಲ್ಲಿ ಭಾರತ್ ಬಂದ್ ಘೋಷಣೆಯಾಗಿದೆ. ಇಂದು ಬೆಳಗ್ಗಿನ ಜಾವ ಎಂದಿನಂತೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಆರಂಭಿಸಿದೆ. ಮೆಜೆಸ್ಟಿಕ್ ನಿಲ್ದಾಣದಿಂದ ಬಸ್ ಗಳು ಹೊರಟ್ಟಿದ್ದು, ಬಂದ್ ತೀವ್ರತೆ ನೋಡಿಕೊಂಡು ಅಧಿಕಾರಿಗಳು ಮುಂದೆ ಕ್ರಮ ತೆಗೆದುಕೊಳ್ಳಲಿದ್ದಾರೆ. ಇತ್ತ ಮೆಜೆಸ್ಟಿಕ್ ಸುತ್ತಮುತ್ತಲಿರುವ ಹೋಟೆಲ್ ಗಳು ತೆರೆದಿವೆ.
ನಸುಕಿನ ಜಾವ ಬಸ್ ಸಂಚಾರವಿದ್ದರೂ, 11 ಗಂಟೆಯ ನಂತರ ಬಸ್ ಗಳ ಓಡಾಟ ಸಂಪೂರ್ಣ ಸ್ತಬ್ಧವಾಗುವ ಸಾಧ್ಯತೆಗಳಿವೆ. ಕೆಎಸ್‍ಆರ್ ಟಿಸಿ, ವಾಯುವ್ಯ, ನೈರುತ್ಯ, ಈಶಾನ್ಯ ಸಾರಿಗೆ ಬಸ್‍ಗಳ ಓಡಾಟ ಸ್ತಬ್ಧವಾಗಿದೆ. ನಮ್ಮ ಮೆಟ್ರೋ ಸೌಲಭ್ಯವಿರಲಿದೆ. ಮಲ್ಲೇಶ್ವರಂನಲ್ಲಿ ಡಿಪೋ 9ರ ಬಸ್ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.
Advertisement
Advertisement
ಖಾಸಗಿ ಶಾಲೆಗಳು ಮುನ್ನೇಚ್ಚರಿಕೆ ಕ್ರಮವಾಗಿ ಎರಡು ದಿನ ರಜೆ ಘೋಷಣೆ ಮಾಡಿಕೊಂಡಿವೆ. ಬಂದ್ ಹಿನ್ನೆಲೆಯಲ್ಲಿ ಒಂದು ಕಡೆ ಬಸ್ ಗಳ ಸಂಚಾರ ಆರಂಭವಾಗಿದ್ದರೂ, ಪ್ರಯಾಣಿಕರು ಮಾತ್ರ ಕಾಣಿಸುತ್ತಿಲ್ಲ. ದೂರದ ಊರುಗಳಿಂದ ಸಿಲಿಕಾನ್ ಸಿಟಿಗೆ ಬಂದ ಜನರು ಲಭ್ಯವಿರುವ ಬಸ್ ಸೌಲಭ್ಯದ ಸಹಾಯದಿಂದ ತಮ್ಮ ನಿಗದಿತ ಸ್ಥಳ ತಲುಪಲು ಪ್ರಯತ್ನಿಸುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv