ಬೆಂಗಳೂರು: ಜ.8 ರಂದು ನಡೆಯಲಿರುವ ಭಾರತ್ ಬಂದ್‍ಗೆ ಬರೋಬ್ಬರಿ 46 ಸಂಘಟನೆಗಳು ಅನುಮತಿ ಕೇಳಿದ್ದು, ಅಷ್ಟು ಸಂಘಟನೆಗಳಿಗೆ ಷರತ್ತು ಬದ್ಧ ಅನುಮತಿಯನ್ನ ಬೆಂಗಳೂರು ಪೊಲೀಸರು ಪೊಲೀಸರು ನೀಡಿದ್ದಾರೆ.
ಭಾರತ್ ಬಂದ್ ವೇಳೆ ಮುಷ್ಕರವಷ್ಟೇ ಮಾಡಬೇಕು. ಯಾವುದೇ ಕಾರಣಕ್ಕೂ ಪ್ರತಿಭಟನಾ ಮೆರವಣಿಗೆಗೆ ಅವಕಾಶ ನೀಡಲ್ಲ. ಪ್ರತಿಭಟನೆಯ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿ ಕಾನೂನು ಸುವ್ಯವಸ್ಥೆ ಉಂಟು ಮಾಡಿದರೆ ಆಯೋಜಕರೆ ನೇರ ಹೊಣೆ. ಪ್ರತಿಭಟನೆಯ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟು ಮಾಡಿದರೆ ಅದರ ವೆಚ್ಚ ಬಂದ್ ಆಯೋಜಕರೆ ಭರಿಸಿಕೊಡ ಬೇಕೆಂಬ ಷರತ್ತುಗಳನು ಪೊಲೀಸರು ವಿಧಿಸಿದ್ದಾರೆ.
Advertisement
Advertisement
ಸಂಘಟನೆಗಳಿಂದ 15 ಲಕ್ಷ ರೂ. ಬೆಲೆ ಬಾಳು ಮುಚ್ಚಳಿಕೆಯ ಪತ್ರವನ್ನು ಪಡೆದಿರುವ ಪೊಲೀಸರು ಸಂಘಟನೆಗಳಿಗೆ ಅನುಮತಿಯನ್ನ ಕೊಟ್ಟಿದ್ದಾರೆ. ಪ್ರತಿಭಟನೆ ವೇಳೆ ಯಾವುದೇ ಅಂಗಡಿ ಮುಂಗಟ್ಟುಗಳನ್ನು ಒತ್ತಾಯ ಪೂರ್ವಕವಾಗಿ ಅಥವಾ ಮನವಿ ಮಾಡಿಕೊಂಡು ಮುಚ್ಚಿಸುವಂತ ಕೆಲಸ ಮಾಡಬಾರದು. ಮಾಡಿದರೆ ಅಂತವರ ವಿರುದ್ಧ ಕಠಿಣ ಕ್ರಮ ಜರಗಿಸುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಖಡಕ್ ಎಚ್ಚರಿಕೆಯನ್ನ ನೀಡಿದ್ದಾರೆ.
Advertisement
ನಾವು ಸಾರ್ವಜನಿಕರ ಅನುಕೂಲಕ್ಕಾಗಿ ಈ ಒಂದು ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿದೆ. ಮೆರವಣಿಗೆ ಮಾಡಿದರೆ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಟ್ರಾಫಿಕ್ ಕಿರಿಕಿರಿ ಉಂಟುಟಾಗುತ್ತದೆ. ಪರಿಣಾಂ ಪ್ರತಿಭಟನಾ ಮೆರವಣಿಗೆಗೆ ಅನುಮತಿ ನಿರಾಕರಿಸಲಾಗಿದೆ. ಅನುಮತಿಯನ್ನು ಉಲ್ಲಂಘಿಸಿ ಮೆರವಣಿಗೆಗೆ ಮುಂದಾದರೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 107 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.