-ಯಥಾಸ್ಥಿತಿ ಬಸ್ ಸಂಚಾರ
ಚಿಕ್ಕೋಡಿ: ದೇಶವ್ಯಾಪಿ ರೈತರು ನೀಡಿರುವ ಭಾರತ್ ಬಂದ್‍ಗೆ ಬೆಂಬಲವಿಲ್ಲ, ಎಂದಿನಂತೆ ರಾಜ್ಯದ ಎಲ್ಲಕಡೆಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಸಾರಿಗೆ ಬಸ್‍ಗಳು ಸಂಚಾರ ನಡೆಸಲಿವೆ ಎಂದು ಸಾರಿಗೆ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಇಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದಲ್ಲಿ ಸಾರಿಗೆ ಇಲಾಖೆ, ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ನೂತನ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥದ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸಿ, ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಾಯಿತು. pic.twitter.com/pOR2GpVyCG
— B Sriramulu (@sriramulubjp) September 25, 2021
ಚಿಕ್ಕೋಡಿ ಪಟ್ಟಣದಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥದ ಶೀಲಾನ್ಯಾಸ ನೆರವೇರಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಬೆಳೆಯುವ ಸಲುವಾಗಿ ಕಾಂಗ್ರೆಸ್ ಪಕ್ಷ ಸ್ವಾರ್ಥದ ರಾಜಕಾರಣ ಮಾಡುತ್ತಿದ್ದು, ರೈತರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದೆ. ರೈತರು ನೀಡಿರುವ ಭಾರತ ಬಂದ್‍ಗೆ ಸಾರಿಗೆ ಇಲಾಖೆ ಮತ್ತು ಸರ್ಕಾರದಿಂದ ಬೆಂಬಲವಿಲ್ಲ. ರಾಜ್ಯದ ಎಲ್ಲ ಕಡೆಗೂ ಸಾರಿಗೆ ಬಸ್‍ಗಳು ಸಂಚಾರ ನಡೆಸಲಿವೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಯಥಾಸ್ಥಿತಿಯಲ್ಲಿ ಬಸ್‍ಗಳನ್ನು ಆರಂಭಿಸಲಾಗುವುದು ಎಂದರು. ಇದನ್ನೂ ಓದಿ: ದೇಶಕ್ಕೆ 600 ವೈದ್ಯಕೀಯ ಕಾಲೇಜು, ಏಮ್ಸ್‌ನಂಥ 50 ಸಂಸ್ಥೆ ಬೇಕು: ನಿತಿನ್ ಗಡ್ಕರಿ
ರೈತರ ಹೆಸರು ಇಟ್ಟುಕೊಂಡು ತಮ್ಮ ಸ್ವಾರ್ಥಕ್ಕಾಗಿ ಸಾರ್ವಜನಿಕರಿಗೆ ತೊಂದರೆ ಕೊಡಬಾರದು. ಸರ್ಕಾರ ಮತ್ತು ಸಾರಿಗೆ ಇಲಾಖೆಯಿಂದ ಯಾವುದೇ ಕಾರಣಕ್ಕೂ ರೈತರು ಕರೆ ನೀಡಿದ್ದ ಬಂದ್ ಬೆಂಬಲಕ್ಕೆ ಸಹಕಾರವಿಲ್ಲ. ಸೆಪ್ಟೆಂಬರ್ 27ರದಂದು ಸಾರ್ವಜನಿಕ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಮೋದಿ ಸರ್ಕಾರದ ರೈತರಪರವಾಗಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ನಾಯಕರು ರೈತರನ್ನು ದಾರಿ ತಪ್ಪಿಸುವ ಕೆಲಸವನ್ನು ದೇಶ,ರಾಜ್ಯದಲ್ಲಿ ಮಾಡುತ್ತಿದ್ದಾರೆ. ಅಸಲಿ ರೈತರ ಬಿಜೆಪಿ ಜೊತೆಗೆ ಇದ್ದಾರೆ. ಬಿಳಿ ಬಟ್ಟೆ ಹಾಕಿ ರಾಜಕಾರಣ ಮಾಡುತ್ತಿರುವ ರೈತರು ನಿಜವಾದ ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ರೀರಾಮುಲು ಹೇಳಿದರು.