ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ಒವೆಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಅಭಿಮಾನಿಗಳು ವಿಶೇಷ ರೀತಿಯಲ್ಲಿ ಚಿಯರ್ ಮಾಡಿದ್ದು, ಕ್ರೀಡಾಂಗಣ ಟಾಪ್ ರೂಫ್ ಮೇಲೆ ನಿಂತು ಹಾಡು ಹಾಡುವ ಮೂಲಕ ಬೆಂಬಲ ನೀಡಿದ್ದಾರೆ.
ಓವೆಲ್ ಕ್ರೀಡಾಂಗಣದಲ್ಲಿ ವಿಶೇಷ ಸೌಲಭ್ಯವಿದ್ದು, ಕ್ರೀಡಾಂಗಣದ ಮೇಲೆರಿ ಸುತ್ತಲಿನ ಸೌಂದರ್ಯವನ್ನು ಸವಿಯುವ ಅವಕಾಶವಿದೆ. ಇದರಂತೆ ಭಾರತ್ ಆರ್ಮಿ ಹೆಸರಿನ ಯುವಕರ ಗುಂಪು ಟೀಂ ಇಂಡಿಯಾ ಆಟಗಾರರಿಗೆ ಬೆಂಬಲ ನೀಡಿ ಸಂಭ್ರಮಿಸಿದೆ.
Advertisement
ಯುವಕರ ಗುಂಪು ಟೀಂ ಇಂಡಿಯಾ ವಿದೇಶದಲ್ಲಿ ಯವುದೇ ಪ್ರವಾಸ ಕೈಗೊಂಡರೂ ಅಲ್ಲಿಗೆ ತೆರಳಿ ಟೀಂ ಇಂಡಿಯಾ ಬೆಂಬಲ ನೀಡುತ್ತದೆ. ಈ ಕುರಿತು ವಿಡಿಯೋವನ್ನು ಬಿಸಿಸಿಐ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ. ಅಲ್ಲದೇ ಭಾರತ್ ಆರ್ಮಿ ಅಡಿಲೇಡ್ ಒವೆಲ್ ಕ್ರೀಡಾಂಗಣದ ಮೇಲಿನಿಂದ ಚಿಯರ್ ಮಾಡಿದೆ ಎಂದು ತಿಳಿಸಿದ್ದಾರೆ.
Advertisement
SPECIAL: Bhuvi surprises Bharat Army with a kind gesture at the Adelaide Oval
Watch on as the Bharat Army sings a song for @BhuviOfficial ???????????? pic.twitter.com/9hG3fThrHQ
— BCCI (@BCCI) December 5, 2018
Advertisement
ಕೆಲ ದಿನಗಳ ಹಿಂದೆ ಭಾರತ ಆರ್ಮಿ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಅವರಿಗೆ ಹಾಡೊಂದನ್ನು ಹಾಡಿ ಸಮರ್ಪಿಸಿತ್ತು. ಆ ವಿಡಿಯೋವನ್ನು ಕೂಡ ಬಿಸಿಸಿಐ ಟ್ವೀಟ್ ಮಾಡಿತ್ತು.
Advertisement
ಉಳಿದಂತೆ ಆಸೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದ ಆಟದ ಮುಕ್ತಾಯದ ವೇಳೆಗೆ ಟೀಂ ಇಂಡಿಯಾ ಬೌಲರ್ ಆರ್ ಅಶ್ವಿನ್ ರ ಬೌಲಿಂಗ್ ದಾಳಿಯಿಂದ ಆಸೀಸ್‍ಗೆ ತಿರುಗೇಟು ನೀಡಿದ್ದು, ಪಂದ್ಯದಲ್ಲಿ 50 ರನ್ ನೀಡಿರುವ ಅಶ್ವಿನ್ 3 ವಿಕೆಟ್ ಪಡೆದು ಮಿಂಚಿದ್ದಾರೆ. ಇತ್ತ ಹಿನ್ನಡೆಯಲ್ಲಿದ್ದ ತಂಡಕ್ಕೆ ಹೆಡ್ ಅರ್ಧ ಶತಕ ಸಿಡಿಸಿ ಆಸರೆಯಾಗಿದ್ದಾರೆ.
MUST ???????? Cheering for #TeamIndia from atop the Adelaide Oval ????????
Team India fanatics Bharat Army reached a new height as they climbed the Adelaide Oval rooftop to cheer for the Indian team – by @28anand
Full video here ▶️ https://t.co/610Znc4gDY #AUSvIND pic.twitter.com/B6lRdxYau1
— BCCI (@BCCI) December 7, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv