ಬಾಲಿವುಡ್ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ ಕಥೆ ಬರೆದು ನಿರ್ದೇಶನ ಮಾಡಿರುವ ಲವ್ ಆ್ಯಂಡ್ ವಾರ್ ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸುವ ದಿನಾಂಕವನ್ನ ನಿಗದಿ ಮಾಡಿದೆ. ಅಂದಹಾಗೆ 2026ರ ಆಗಸ್ಟ್ 14ರಂದು ಸಿನಿಮಾ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಅತಿದೊಡ್ಡ ತಾರಾಗಣವಿದ್ದು, ಈ ಮೊದಲು ಅಂದುಕೊಂಡ ದಿನಾಂಕಕ್ಕೆ ಸಿನಿಮಾ ಬರುತ್ತಿಲ್ಲ.
2022ರಲ್ಲಿ ತೆರೆಕಂಡ ಬಯೋಗ್ರಫಿಕಲ್ ಕ್ರೈಮ್ ಡ್ರಾಮಾ ಸಿನಿಮಾ ಗಂಗೂಬಾಯಿ ಕಾತಿಯಾವಾಡಿ ಬಳಿಕ ಲವ್ & ವಾರ್ ಸಿನಿಮಾವನ್ನ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಆಲಿಯಾ ಭಟ್, ರಣಬೀರ್ ಕಪೂರ್, ವಿಕ್ಕಿ ಕೌಶಾಲ್ ಸೇರಿದಂತೆ ಅತಿದೊಡ್ಡ ತಾರಾಗಣ ಈ ಸಿನಿಮಾದಲ್ಲಿ ಇರಲಿದೆ.ಇದನ್ನೂ ಓದಿ: ಕಾಂತಾರ ಹೊಸ ದಾಖಲೆ – ಕರ್ನಾಟಕದಲ್ಲೇ 250 ಕೋಟಿ ಗಡಿ ದಾಟಿದ ಕಲೆಕ್ಷನ್!
ಲವ್ ಅಂಡ್ ವಾರ್ ವಿಭಿನ್ನ ರೀತಿಯ ಕಾನ್ಸೆಪ್ಟ್‌ನ ಸಿನಿಮಾವಾಗಿದ್ದು, ಸ್ವಾತಂತ್ರ್ಯ ದಿನಾಚಾರಣೆಯ ವಿಶೇಷವಾಗಿ ಚಿತ್ರವನ್ನ ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ. ಈ ಮೊದಲು ಈ ಸಿನಿಮಾ 2026ರ ಮಾರ್ಚ್ 20ಕ್ಕೆ ತೆರೆಗೆ ಬರುವ ಪ್ಲ್ಯಾನ್ ಮಾಡಲಾಗಿತ್ತು. ಆದರೆ ಮಾರ್ಚ್ 19, 2026ರಂದು ಯಶ್ ನಟನೆಯ ಟಾಕ್ಸಿಕ್ ಸಿನಿಮಾ ರಿಲೀಸ್ ಆಗಲಿದೆ. ಈ ಕಾರಣದಿಂದ ಬನ್ಸಾಲಿ ಡೇಟ್ ಪೋಸ್ಟ್‌ಪೋನ್ ಮಾಡಿಕೊಂಡಿದೆ.
ಇನ್ನೊಂದು ಕಡೆ ಮೂಲಗಳ ಪ್ರಕಾರ ಸಿನಿಮಾದ ಕೆಲ ದೃಶ್ಯಗಳನ್ನ ಇಟಲಿಯಲ್ಲಿ ಶೂಟ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ ಚಿತ್ರತಂಡ. ಹೀಗಾಗಿ ಲವ್ ಆ್ಯಂಡ್ ವಾರ್ ಸಿನಿಮಾವನ್ನ ಆಗಸ್ಟ್‌ನ ವೀಕೆಂಡ್‌ಗೆ ತೆರೆಗೆ ತರೋಕೆ ಸಿದ್ಧತೆ ಮಾಡಲಾಗಿದೆ ಎನ್ನಲಾಗ್ತಿದೆ.ಇದನ್ನೂ ಓದಿ: ದೊಡ್ಮನೆಯಲ್ಲಿ ಮಲ್ಲಮ್ಮ ಪ್ರಜ್ಞೆ ತಪ್ಪಿದ್ರಾ?


