ಲಂಡನ್: ಎಸ್ಸೆಕ್ಸ್ ತಂಡದ ವಿರುದ್ಧ ನಡೆಯುತ್ತಿರುವ ಅಭ್ಯಾಸ ಪಂದ್ಯದ ಎರಡನೇ ದಿನದಾಟದ ಆರಂಭದ ವೇಳೆ ಟೀಂ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ ಹಾಗೂ ಹಾರ್ದಿಕ್ ಪಾಂಡ್ಯ ಅವರಿಗೆ ಸಂಪ್ರಾದಾಯಿಕ ಭಾಂಗ್ರಾ ನೃತ್ಯದ ಮೂಲಕ ಸ್ವಾಗತ ಮಾಡಲಾಯಿತು.
ಟೀಂ ಇಂಡಿಯಾ, ಎಸ್ಸೆಕ್ಸ್ ತಂಡದ ವಿರುದ್ಧ ಏಕೈಕ ಅಭ್ಯಾಸ ಪಂದ್ಯವನ್ನು ಆಡುತ್ತಿದ್ದು, ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಮುರುಳಿ ವಿಜಯ್ (53 ರನ್), ನಾಯಕ ಕೊಹ್ಲಿ (68), ಕೆಲ್ ರಾಹುಲ್ (58) ಆಕರ್ಷಕ ಅರ್ಧಶತಕದ ಬ್ಯಾಟಿಂಗ್ ನೆರವಿನಿಂದ 395 ರನ್ ಗಳಿಗೆ ಆಲೌಟ್ ಆಗಿದೆ. ಇದಕ್ಕೂ ಮುನ್ನ ಪಂದ್ಯದ ಆರಂಭದ ವೇಳೆ ಸಂಪ್ರಾದಾಯಿಕ ಶೈಲಿಯ ವೇಷಭೂಷಣ ತೊಟ್ಟಿದ್ದ ಕಲಾವಿದರು ಆಟಗಾರನ್ನು ಸ್ವಾಗತ ಮಾಡಿದ್ದು, ಈ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದೆ.
Advertisement
The two batters make their way to the ground with a traditional welcome by the locals.#ESSvIND pic.twitter.com/uqqPt9pOvl
— BCCI (@BCCI) July 26, 2018
Advertisement
ಎರಡನೇ ದಿನದಾಟ ಆರಂಭಿಸಿದ ದಿನೇಶ್ ಕಾರ್ತಿಕ್ (82 ರನ್) ಹಾಗೂ ಪಾಂಡ್ಯ (51 ರನ್) ಅರ್ಧಶತಕ ಸಿಡಿಸಿ ತಂಡದ ಮೊತ್ತ 300 ಗಡಿದಾಟಲು ನೆರವಾದರು. ಬಳಿಕ ಬಂದ ರಿಷಭ್ ಪಂತ್ ಬಿರುಸಿನ ಆಟವಾಡಿ 33 ರನ್ ಗಳಿಸಿದರು.
Advertisement
ಟೀಂ ಇಂಡಿಯಾ ಗುರಿ ಬೆನ್ನತ್ತಿದ್ದ ಎಸ್ಸೆಕ್ಸ್ ತಂಡ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 235 ರನ್ ಗಳಿಸಿದೆ. ಟೀಂ ಇಂಡಿಯಾ ಪರ ಉಮೇಶ್ ಯಾದವ್ ಹಾಗೂ ಇಶಾಂತ್ ಶರ್ಮಾ ತಲಾ 2 ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ 1 ವಿಕೆಟ್ ಪಡೆದಿದ್ದಾರೆ. ಎಸ್ಸೆಕ್ಸ್ ವಿರುದ್ಧದ ಪಂದ್ಯದ ಆರಂಭಕ್ಕೂ ಮುನ್ನವೇ ಕ್ರೀಡಾಂಗಣ ಪಿಚ್ ಕುರಿತು ಟೀಂ ಇಂಡಿಯಾ ಆಕ್ಷೇಪ ವ್ಯಕ್ತಪಡಿಸಿತ್ತು, ಇದರಿಂದ 4 ದಿನಗಳ ಪಂದ್ಯವನ್ನು 3 ದಿನಗಳಿಗೆ ಕಡಿತಗೊಳಿಸಲಾಯಿತ್ತು.