ಆ ನೋವು ಎಂದಿಗೂ ಕಮ್ಮಿಯಾಗಲ್ಲ- ವೈಯಕ್ತಿಕ ವಿಚಾರದ ಬಗ್ಗೆ ಭಾವನಾ ಭಾವುಕ

Public TV
2 Min Read
bhavana menon

ಹುಭಾಷಾ ನಟಿ ಭಾವನಾ ಮೆನನ್ (Bhavana Menon) ಅವರು ಕನ್ನಡ, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಾಡುವ ತಂದೆಯ ಅನುಪಸ್ಥಿತಿ ಬಗ್ಗೆ ಜಾಕಿ ಭಾವನಾ ಮಾತನಾಡಿದ್ದಾರೆ. ತಂದೆ ಜೊತೆಗಿನ ನೆನಪುಗಳನ್ನ ನಟಿ ಮೆಲುಕು ಹಾಕಿದ್ದಾರೆ.

Bhavana Menon 1

ನಟಿ ಭಾವನಾ ಮಾತನಾಡಿ, ನನ್ನ ತಂದೆಯ (Father) ಸಾವಿನ ನೋವು ಯಾವಾಗಲೂ ಹಾಗೆಯೇ ಇರುತ್ತದೆ. ಹೊರಗೆ ಎಷ್ಟೇ ಖುಷಿಯಾಗಿದ್ದರೂ ಒಳಗಿನ ನೋವು ಹಾಗೆಯೇ ಇದೆ. ಇಷ್ಟು ವರ್ಷ ಕಳೆದರೂ ಆ ದುಃಖದಿಂದ ಹೊರಬರಲು ಸಾಧ್ಯವಾಗಿಲ್ಲ. ಜೀವನ ಸಂಪೂರ್ಣವಾಗಿ ಬದಲಾಗಿದೆ. ಆದರೆ ನನ್ನ ತಂದೆ ಇಲ್ಲ ಎಂಬುದು ನನ್ನನ್ನು ಯಾವಾಗಲೂ ಕಾಡುತ್ತದೆ. ಈ ಕಾಡುವಿಕೆ ಕೆಲವೊಮ್ಮೆ ಹೆಚ್ಚಿರುತ್ತದೆ, ಕೆಲವೊಮ್ಮೆ ಕಡಿಮೆ. ಆದರೆ, ಆ ನೋವು ಇಂದಿಗೂ ಹಾಗೆಯೇ ಇದೆ ಎಂದಿದ್ದಾರೆ.

bhavana menon

ಭಾವನಾ ಅವರ ತಂದೆಯ ಹೆಸರು ಬಾಲಚಂದ್ರ. ಅವರು 2015ರಲ್ಲಿ ನಿಧನ ಹೊಂದಿದರು. ಆಗ ಅವರಿಗೆ 59 ವರ್ಷ ವಯಸ್ಸಾಗಿತ್ತು. ಬಾಲಚಂದ್ರ ಅವರಿಗೆ ಅನಾರೋಗ್ಯ ಕಾಡಿದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಿರಲಿಲ್ಲ. ತಂದೆಯ ಬಗ್ಗೆ ಅವರು ಯಾವಾಗಲೂ ಪ್ರೀತಿ ವ್ಯಕ್ತಪಡಿಸುತ್ತಾ ಇರುತ್ತಾರೆ. ಅವರು ಈ ಮಟ್ಟಕ್ಕೆ ಬೆಳೆಯಲು ತಂದೆ ಕಾರಣ ಎಂದು ಅವರು ಹಲವು ಬಾರಿ ವೇದಿಕೆಗಳಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ವಿಶ್ವಕಪ್ ವೀಕ್ಷಣೆಗೆ ಗೋಲ್ಡನ್ ಟಿಕೆಟ್ ಪಡೆದ ರಜನಿಕಾಂತ್

2001ರಲ್ಲಿ ‘ನಮ್ಮಲ್’ ಸಿನಿಮಾ ಮೂಲಕ ಎಂಟ್ರಿ ಕೊಟ್ಟ ನಟಿ ಭಾವನಾ, ಬ್ಯಾಕ್ ಟು ಬ್ಯಾಕ್ 6 ಸಿನಿಮಾಗಳಲ್ಲಿ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡರು. ಬಳಿಕ ಪರಭಾಷೆಗಳಲ್ಲೂ ನಟಿಸಿದರು. ಪುನೀತ್ (Puneeth Rajkumar) ನಟನೆಯ ಜಾಕಿ (Jackie Film)  ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದರು. ಬಳಿಕ ಮೈತ್ರಿ, ರೊಮಿಯೋ, ಟೋಪಿವಾಲ, ಭಜರಂಗಿ 2 (Bhajarangi 2) ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು.

ಬಳಿಕ 2018ರಲ್ಲಿ ಕನ್ನಡದ ನಿರ್ಮಾಪಕ ನವೀನ್ (Producer Naveen) ಜೊತೆ ಭಾವನಾ ಪ್ರೀತಿಸಿ ಮದುವೆಯಾದರು.

Share This Article