ಟಾಲಿವುಡ್‌ನಲ್ಲಿ ಕಿಸ್ಸಿಕ್ ಬೆಡಗಿಗೆ ಕೈತಪ್ಪಿತು ಮತ್ತೊಂದು ಅವಕಾಶ

Public TV
1 Min Read
sreeleela 1 1

ಟಾಲಿವುಡ್‌ನ ಕಲಾವಿದರ ಕುಟುಂಬದಿಂದ ಬಂದ ನಟ ಅಖಿಲ್ ಅಕ್ಕಿನೇನಿ (Akhil Akkineni) ಸಿನಿಮಾ ರಂಗದಲ್ಲಿ ಮಾತ್ರ ಹೇಳಿಕೊಳ್ಳುವ ಮಟ್ಟಿಗೆ ಸಕ್ಸಸ್ ಕಾಣುತ್ತಿಲ್ಲ. ಅಣ್ಣ ನಾಗಚೈತನ್ಯ (Naga Chaitanya) ಕ್ಲಿಕ್ ಆಗಿದ್ದಾರೆ. ಆದರೆ ಅಖಿಲ್‌ಗೆ ಬ್ರೇಕ್ ಕೊಡುವ ಸಿನಿಮಾಗಳು ಸಿಗುತ್ತಿಲ್ಲ. 2023ರಲ್ಲಿ ತೆರೆಕಂಡ ಎಜೆಂಟ್ ಸಿನಿಮಾ ಭಾರೀ ಸೋಲು ಕಂಡಿತ್ತು. ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಅಖಿಲ್.

2023ರಲ್ಲಿ ತೆರೆಕಂಡ ಎಜೆಂಟ್ ಸಿನಿಮಾ ಅಖಿಲ್ ಕೆರಿಯರ್‌ಗೆ ಭಾರೀ ಆಘಾತ ತಂದೊಡ್ಡಿತ್ತು. ಬಳಿಕ ಇದೇ ವರ್ಷ ಜೂನ್ 6ರಂದು ಮುಂಬೈ ಮೂಲದ ನಟಿ ಝೈನಬ್ ರಾವ್ದ್ಜೀ ಜೊತೆ ಹಸೆಮಣೆ ಏರಿದ್ದರು. ವೈವಾಹಕ ಜೀವನಕ್ಕೆ ಕಾಲಿಟ್ಟ ಬಳಿಕ ಲೆನಿನ್ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಳ್ಳಲು ಪ್ಲ್ಯಾನ್‌ ನಡೆಸಿದ್ದಾರೆ.  ಇದನ್ನೂ ಓದಿ: ಅಲ್ಲು ಅರ್ಜುನ್ ಜೊತೆ ಪ್ರಶಾಂತ್ ನೀಲ್ ʻರಾವಣಂʼ

Bhagyashri Borse

ಈ ಸಿನಿಮಾದ ನಾಯಕಿಯಾಗಿ ಮೊದಲಿಗೆ ನಟಿ ಶ್ರೀಲೀಲಾ (Sreeleela) ಅವರನ್ನು ಆಯ್ಕೆ ಮಾಡಲಾಗಿತ್ತು ಚಿತ್ರತಂಡ. ಇದೀಗ ಈ ಸಿನಿಮಾದಿಂದ ಶ್ರೀಲೀಲಾಗೆ ಗೆಟ್‌ಪಾಸ್ ಕೊಡಲಾಗಿದೆಯಂತೆ. ಶ್ರೀಲೀಲಾ ಜಾಗಕ್ಕೆ ನಟಿ ಭಾಗ್ಯಶ್ರೀ ಬೋರ್ಸೆ ಅವರನ್ನು ಆಯ್ಕೆ ಮಾಡಲಾಗಿದೆ. ಈ ಮೊದಲು ಭಾಗ್ಯಶ್ರೀ ಯಾರಿಯಾನ್-2, ಚಂದು ಚಾಂಪಿಯನ್ ಚಿತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಕಬಿನಿ ಡ್ಯಾಂಗೆ ಶಿವಣ್ಣ ದಂಪತಿ ಭೇಟಿ

ಭಾಗ್ಯಶ್ರೀ ಬೋರ್ಸೆ ಸದ್ಯ ವಿಜಯ್ ದೇವರಕೊಂಡ (Vijay Devarakonda) ಅವರ ಕಿಂಗ್‌ಡಮ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಮತ್ತೆ ಟಾಲಿವುಡ್‌ನಲ್ಲಿ ಮತ್ತೊಂದು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಕಿಸ್ಸಿಕ್ ಬೆಡಗಿಗೆ ಮತ್ತೊಂದು ಅವಕಾಶ ಕೈತಪ್ಪಿದೆ.

Share This Article