ಚಂಡೀಗಢ: ಪಂಜಾಬ್ನಲ್ಲಿ (Punjab) ಗನ್ ಸಂಸ್ಕೃತಿ (Gun Culture) ವಿರುದ್ಧ ಭಗವಂತ್ ಮಾನ್ ನೇತೃತ್ವದ ಸರ್ಕಾರ ಪ್ರಮುಖ ಕ್ರಮವನ್ನು ಕೈಗೊಂಡಿದ್ದು, ರಾಜ್ಯದಲ್ಲಿ 813 ಬಂದೂಕುಗಳ ಪರವಾನಗಿಯನ್ನು ರದ್ದುಗೊಳಿಸಿದೆ.
ಭಗವಂತ್ ಮಾನ್ (Bhagwant Mann) ಸರ್ಕಾರವು ಲೂಧಿಯಾನ ಗ್ರಾಮಾಂತರದಿಂದ 87, ಶಹೀದ್ ಭಗತ್ ಸಿಂಗ್ ನಗರದಿಂದ 48, ಗುರುದಾಸ್ಪುರದಿಂದ 10, ಫರೀದ್ಕೋಟ್ನಿಂದ 84, ಪಠಾಣ್ಕೋಟ್ನಿಂದ 199, ಹೋಶಿಯಾಪುರದಿಂದ 47, ಕಪುರ್ತಲಾದಿಂದ 6, ಎಸ್ಎಎಸ್ ಕಸ್ಬಾದಿಂದ 235 ಮತ್ತು ಸಂಗ್ರೂರ್ನಿಂದ 16 ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ. ಅಮೃತಸರ ಕಮಿಷನರೇಟ್ನ 27 ಮತ್ತು ಜಲಂಧರ್ ಕಮಿಷನರೇಟ್ನ 11 ಮತ್ತು ಇತರ ಹಲವು ಜಿಲ್ಲೆಗಳ ಶಸ್ತ್ರಾಸ್ತ್ರ ಪರವಾನಗಿಯನ್ನು (Licence) ಸಹ ರದ್ದುಗೊಳಿಸಲಾಗಿದೆ. ಪಂಜಾಬ್ ಸರ್ಕಾರ ಇದುವರೆಗೆ 2,000 ಕ್ಕೂ ಹೆಚ್ಚು ಶಸ್ತ್ರಾಸ್ತ್ರ ಪರವಾನಗಿಗಳನ್ನು ರದ್ದುಗೊಳಿಸಿದೆ.
Advertisement
Advertisement
ಬಂದೂಕುಗಳನ್ನು ಇಟ್ಟುಕೊಳ್ಳುವವರು ನಿಯಮಗಳನ್ನು ಅನುಸರಿಸಬೇಕು. ಪಂಜಾಬ್ನಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು, ಧಾರ್ಮಿಕ ಸ್ಥಳಗಳು, ಮದುವೆ ಸಮಾರಂಭಗಳು ಅಥವಾ ಇತರ ಯಾವುದೇ ಕಾರ್ಯಕ್ರಮಗಳಲ್ಲಿ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಲು ಹಾಗೂ ಪ್ರದರ್ಶಿಸುವುದಕ್ಕೆ ನಿಷೇಧ ಹೇರಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
Advertisement
ಪಂಜಾಬ್ನಲ್ಲಿ ಒಟ್ಟು 3,73,053 ಶಸ್ತ್ರಾಸ್ತ್ರ ಪರವಾನಗಿಗಳಿವೆ. ಬಂದೂಕು ಸಂಸ್ಕøತಿಯನ್ನು ಕೊನೆಗಾಣಿಸಲು ನಿರಂತರವಾಗಿ ಕ್ರಮ ಕೈಗೊಳ್ಳುತ್ತಿರುವುದಾಗಿ ಪಂಜಾಬ್ ಸರ್ಕಾರ ಹೇಳಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಮೋದಿ ರೋಡ್ ಶೋ – ಸ್ವಾಗತಿಸಲು ನಿಂತಿದ್ದ ಅಭಿಮಾನಿಗಳಿಗೆ ಪ್ರಧಾನಿ ಪುಷ್ಪಾರ್ಚನೆ
Advertisement
ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆಯು ಗನ್ ಸಂಸ್ಕೃತಿಯ ಪರ-ವಿರೋಧ ಬಗ್ಗೆ ತೀವ್ರ ಚರ್ಚೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ನಿಯಂತ್ರಣ ಮಾಡಬೇಕು ಎಂಬುದು ಹೆಚ್ಚಾಗಿ ಕೇಳಿ ಬಂದಿತ್ತು. ಇದನ್ನೂ ಓದಿ: ಕಾಂಗ್ರೆಸ್ ಕೌರವರನ್ನು ಪಾಂಡವರಂತೆ ಸದೆಬಡಿಯುತ್ತೇವೆ: ಶ್ರೀರಾಮುಲು