ಚಂಡೀಗಢ: ಅರುಣಾಚಲ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಪ್ರಾಣ ಕಳೆದುಕೊಂಡ ಯೋಧ ಸುಬೇದಾರದ ಹರ್ದೀಪ್ ಸಿಂಗ್ ಅವರ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗದ ಜೊತೆಗೆ 1 ಕೋಟಿ ರೂ. ಪರಿಹಾರ ನೀಡುವುದಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಘೋಷಿಸಿದ್ದಾರೆ.
Advertisement
ಅರುಣಾಚಲ ಪ್ರದೇಶದ ಜೆಸಿಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಹುತಾತ್ಮ ಯೋಧರನ್ನು ಅಗಲಿದ ಕುಟುಂಬಕ್ಕೆ ಸಂತಾಪ ಸೂಚಿಸಿದ ಭಗವಂತ್ ಮಾನ್ ಅವರು, ಹರ್ದೀಪ್ ಸಿಂಗ್ ಅವರು ದೇಶದ ಏಕತೆಯನ್ನು ರಕ್ಷಿಸಲು ಅತ್ಯಂತ ಸಮರ್ಪಣಾಭಾವವನ್ನು ಪ್ರದರ್ಶಿಸಿದ್ದಾರೆ ಮತ್ತು ಅವರ ತ್ಯಾಗ ಇತರ ಸೈನಿಕರಿಗೆ ದೇಶ ಭಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಬದ್ಧತೆಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಲಯಾಳಿ ಯೂಟ್ಯೂಬರ್ ರಿಫಾ ಮೆಹ್ನು ದುಬೈನಲ್ಲಿ ಅನುಮಾನಾಸ್ಪದ ಸಾವು
Advertisement
AAP Punjab Govt led by CM @BhagwantMann announces ₹1 Crore ex-gratia & a govt job for a family member of Martyr Subedar Hardeep Singh from Hoshiarpur, who lost his life while patrolling in Arunachal Pradesh
CM @BhagwantMann also extended his condolences to the bereaved family???????? pic.twitter.com/YtnHhoOKih
— AAP (@AamAadmiParty) May 8, 2022
Advertisement
ಪಂಜಾಬ್‍ನ (ಪಟಿಯಾಲಾ) ಸುಬೇದಾರ್ ಹರ್ದೀಪ್ ಸಿಂಗ್ ಹೋಶಿಯಾರ್‍ಪುರ ಜಿಲ್ಲೆಯ ಗರ್‍ಡಿವಾಲಾ ತೆಹಸಿಲ್‍ನ ಬರಂಡಾ ಗ್ರಾಮದವರಾಗಿದ್ದು, ಪತ್ನಿ ರವೀಂದರ್ ಕೌರ್, ಓರ್ವ ಪುತ್ರಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ. ಇದನ್ನೂ ಓದಿ: ನಡುರಸ್ತೆಯಲ್ಲಿ ಗೂಂಡಾಗಳಿಂದ 15 ಬಾರಿ ಫೈರಿಂಗ್ – ಇಬ್ಬರಿಗೆ ಗಾಯ