ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಶಕ್ತಿದೇವತೆ ಗ್ರಾಮದೇವಿಗೆ ಸಂಬಂಧಪಟ್ಟ ಧಾರ್ಮಿಕ ಜಾಗದಲ್ಲಿ ಪುರಸಭೆ ನಡೆಸುತ್ತಿರುವ ಕಾಮಗಾರಿಗಳನ್ನು ವಿರೋಧಿಸಿ ಇಂದು ಹಳಿಯಾಳ ಬಂದ್‌ಗೆ (Haliyal Bandh) ಹಿಂದೂ ಸಂಘಟನೆಗಳು ಕರೆ ನೀಡಿದ್ದು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.
ಹಳಿಯಾಳದಲ್ಲಿ ಇಂದು ನಗರವನ್ನು ಬಂದ್ ಮಾಡಿ ಪ್ರತಿಭಟನೆ ಹೊರಟಿದ್ದ ಹಿಂದೂ (Hindu) ಕಾರ್ಯಕರ್ತರು ಈದ್ಗಾ ಮೈದಾನದ (Idgah Maidan) ಎದುರು ಇರುವ ಗ್ರಾಮದೇವಿ ಗದ್ದುಗೆ ಜಾಗಕ್ಕೆ ನುಗ್ಗಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು (Police) ಹಾಗೂ ಹಿಂದೂ ಕಾರ್ಯಕರ್ತರ ನಡುವೆ ನೂಕಾಟ ತಳ್ಳಾಟ ನಡೆದು ಭದ್ರತೆ ನಡುವೆಯೇ ಬ್ಯಾರಿಕೇಡ್ ಕಿತ್ತೆಸೆದಿದ್ದಾರೆ. ದೇವಿಯ ಗದ್ದುಗೆ ಇಡುವ ಸ್ಥಳದಲ್ಲಿ ಪುರಸಭೆಯಿಂದ ನಿರ್ಮಾಣವಾಗುತ್ತಿದ್ದ ನೆಲಹಾಸಿನ ಸಿಮೆಂಟ್ ಬ್ಲಾಕ್‌ಗಳನ್ನು ಕಿತ್ತುಹಾಕಿ ಈದ್ಗಾ ಮೈದಾನದ ಎದುರು ಹಿಂದೂ ಕಾರ್ಯಕರ್ತರು ಭಗವಾಧ್ವಜ (Bhagwa Flag) ಹಾರಿಸಿದ್ದಾರೆ.
Advertisement
ಪ್ರತಿಭಟನೆ ಹಿನ್ನೆಲೆಯಲ್ಲಿ ಹಳಿಯಾಳದಲ್ಲಿ144 ಸೆಕ್ಷನ್ (144 Section) ಜಾರಿ ಮಾಡಿ ತಹಶೀಲ್ದಾರ್ ಪ್ರಕಾಶ ಗಾಯಕ್‌ವಾಡ್ ಆದೇಶ ಹೊರಡಿಸಿದ್ದಾರೆ. ಹಳಿಯಾಳ ನಗರದ ಮರಡಿಗುಡ್ಡ ಸಮೀಪ ಒಂದು ಕಿ. ಮೀ. ಅಂತರದಲ್ಲಿ ಫೆಬ್ರವರಿ 17 ರವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಇದನ್ನೂ ಓದಿ: ದಾವೂದಿ ಬೋಹ್ರಾ ಸಮುದಾಯದ ಶಿಕ್ಷಣ ಸಂಸ್ಥೆಯನ್ನು ಉದ್ಘಾಟಿಸಿದ ಮೋದಿ
Advertisement
Advertisement
ಏನಿದು ವಿವಾದ?
ಹಳಿಯಾಳ ನಗರದ ಈದ್ಗಾ ಮೈದಾನದ ಎದುರು ಇರುವ ಸರ್ಕಾರಿ ಜಾಗದಲ್ಲಿ ತಲೆತಲಾಂತರದಿಂದ ಗ್ರಾಮದೇವಿಯ ಗದ್ದುಗೆ ಇಟ್ಟು ವರ್ಷಕ್ಕೊಮ್ಮೆ ಜಾತ್ರೆ ನಡೆಸಲಾಗುತ್ತಿತ್ತು. ಆದರೆ ಕೆಲ ತಿಂಗಳ ಹಿಂದೆ ಪುರಸಭೆ ಅಧ್ಯಕ್ಷ ಅಜರ್ ಬಸರಿಗದ್ದೆ ಅವರು ಈ ಸ್ಥಳದ ಎದುರು ಇರುವ ಈದ್ಗಾ ಮೈದಾನಕ್ಕೆ ನಮಾಜ್ ಮಾಡಲು ಬರುವವರಿಗೆ ಸಹಾಯವಾಗಲು ನೆಲಹಾಸನ್ನು ಹಾಕಲು, ಗಾರ್ಡನ್ ನಿರ್ಮಿಸಲು ಕಾಮಗಾರಿ ಮಂಜೂರು ಮಾಡಿಸಿದ್ದರು. ಈ ನಿರ್ಧಾರಕ್ಕೆ ಗ್ರಾಮದೇವಿ ದೇವಸ್ಥಾನದ ಟ್ರಸ್ಟ್‌ನವರು ಇದು ದೇವರ ಗದ್ದುಗೆ ಇಡುವ ಸ್ಥಳವಾಗಿದ್ದು ಹಾಗೆಯೇ ಬಿಡುವಂತೆ ಮನವಿ ಮಾಡಿದ್ದರು. ಆದರೆ ಈ ಮನವಿಗೆ ಸ್ಪಂದಿಸದ ಪುರಸಭೆ ಕಾಮಗಾರಿ ಮುಂದುವರೆಸಿತ್ತು.
Advertisement
ಪುರಸಭೆ ನಿರ್ಧಾರವನ್ನು ಖಂಡಿಸಿ ಹಳಿಯಾಳದ ವಿವಿಧ ಸಂಘಟನೆಗಳು ಪ್ರತಿಭಟನೆಯಾಗಿ ಹಳಿಯಾಳ ನಗರ ಬಂದ್‌ಗೆ ಕರೆಕೊಟ್ಟಿದ್ದವು. ಸಾವಿರಾರು ಹಿಂದೂ ಕಾರ್ಯಕರ್ತರು ಏಕಾಏಕಿ ಸೇರಿದ್ದರಿಂದ ಬಂದ್ ಗಲಾಟೆಗೆ ತಿರುಗಿ ಈದ್ಗಾ ಮೈದಾನದೆದುರು ನುಗ್ಗಿದ ಕಾರ್ಯಕರ್ತರು ಸಿಮೆಂಟ್ ಬ್ಲಾಕ್ ತೆಗೆದು ಭಗವಾಧ್ವಜವನ್ನು ಹಾರಿಸಿದರು.
ಸ್ಥಳೀಯವಾಗಿ 150 ಪೊಲೀಸರನ್ನು ಹಾಗೂ ಎರಡು ಕೆಎಸ್‌ಆರ್‌ಪಿ ತುಕಡಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದ್ದು ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k