ಧನ್ಯಾ ಹೊಸ ಸಿನಿಮಾಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್

Public TV
1 Min Read
dhanya ramkumar

‘ನಿನ್ನ ಸನಿಹಕೆ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಎಂಟ್ರಿ ಕೊಟ್ಟ ಡಾ.ರಾಜ್ ಕುಟುಂಬದ ಕುಡಿ ಧನ್ಯಾ ರಾಮ್‌ಕುಮಾರ್ (Dhanya Ramkuma) ಇದೀಗ ಡಿಫರೆಂಟ್ ಪಾತ್ರಗಳನ್ನ ಒಪ್ಪಿಕೊಳ್ಳುವ ಮೂಲಕ ಸದ್ದು ಮಾಡ್ತಿದ್ದಾರೆ. ಧನ್ಯಾ ಹೊಸ ಸಿನಿಮಾಗೆ ನಟ ಶ್ರೀಮುರಳಿ (Srimurali) ಸಾಥ್ ನೀಡಿದ್ದಾರೆ.

DHANYA RAMKUMAR

ಕಾಲಾಪತ್ಥರ್, ಹೈಡ್ & ಸೀಕ್, ದಿ ಜಡ್ಜ್‌ಮೆಂಟ್ ಸಿನಿಮಾಗಳು ಧನ್ಯಾ ಲಿಸ್ಟ್ನಲ್ಲಿದೆ. ಈ ಬೆನ್ನಲ್ಲೇ ಕಾಶಿ ನಿರ್ದೇಶನದ ‘ಎಲ್ಲಾ ನಿನಗಾಗಿ’ ಚಿತ್ರದಲ್ಲಿ ಹೊಸ ಪ್ರತಿಭೆ ರಾಹುಲ್‌ಗೆ (Rahul) ಧನ್ಯಾ ಜೋಡಿಯಾಗಿ ನಟಿಸುತ್ತಿದ್ದಾರೆ. ಡಿಫರೆಂಟ್ ಪಾತ್ರದಲ್ಲಿ ಧನ್ಯಾ ನಟಿಸಲಿದ್ದಾರೆ.

dhanya ramkumar 1

ನೈಜ ಕಥೆ ಆಧರಿಸಿದ ಸಿನಿಮಾವಾಗಿದೆ. ರಿಯಲ್ ಕಥೆಯನ್ನ ಸಿನಿಮಾ ಮಾಡಲು ನಿರ್ದೇಶಕ ಕಾಶಿ ರೆಡಿಯಾಗಿದ್ದಾರೆ. ಶ್ರೀಮುರಳಿ ಅವರ ಆಪ್ತ ರಾಹುಲ್ ಈ ಚಿತ್ರಕ್ಕೆ ನಾಯಕನಾಗಿ ಸೆಲೆಕ್ಟ್ ಆಗಿದ್ದು, ಕಥೆ ಕೇಳಿ ಶ್ರೀಮುರಳಿ ಮೆಚ್ಚಿದ್ದಾರೆ. ಈ ವೇಳೆ ನಾಯಕಿ ಹುಡುಕಾಟದಲ್ಲಿದ್ದ ಚಿತ್ರತಂಡಕ್ಕೆ ಶ್ರೀಮುರಳಿ ಅವರು ಧನ್ಯಾ ಅವರ ಹೆಸರನ್ನ ಸೂಚಿಸಿದ್ದರಂತೆ. ಕಥೆಗೆ ಧನ್ಯಾ ಸೂಟ್ ಆಗುವ ಕಾರಣ, ಧನ್ಯಾ ಅವರನ್ನೇ ನಾಯಕಿಯಾಗಿ ಫೈನಲ್ ಮಾಡಲಾಯಿತು. ಇದನ್ನೂ ಓದಿ:2ನೇ ಮಗುವಿನ ನಿರೀಕ್ಷೆಯಲ್ಲಿ ಅರ್ಜುನ್ ರಾಮ್‌ಪಾಲ್- ಗೇಬ್ರಿಯೆಲ್ಲಾ ಜೋಡಿ

dhanya ramkumar 2

‘ಎಲ್ಲಾ ನಿನಗಾಗಿ’ ಸಿನಿಮಾ ಟೈಟಲ್‌ನ ನಟ ಶ್ರೀಮುರಳಿ ಅವರಿಂದ ಅನಾವರಣ ಮಾಡಿದ್ದಾರೆ. ಬಳಿಕ ಚಿತ್ರತಂಡಕ್ಕೆ ಶ್ರೀಮುರಳಿ ಶುಭಹಾರೈಸಿದ್ದಾರೆ.  ಈ ವೇಳೆ ಚಿತ್ರತಂಡದ ಜೊತೆ ಪೂರ್ಣಿಮಾ ರಾಮ್‌ಕುಮಾರ್‌ ಕೂಡ ಭಾಗಿಯಾಗಿದ್ದರು. ಇನ್ನೂ ಎಂದೂ ಕಾಣಿಸಿಕೊಂಡಿರದ ವಿಭಿನ್ನ ಪಾತ್ರದಲ್ಲಿ ಧನ್ಯಾ ಕಾಣಿಸಿಕೊಳ್ತಿದ್ದಾರೆ. ಇದೇ ಮೇ 20ರಿಂದ 50 ದಿನಗಳ ಕಾಲ ಶೂಟಿಂಗ್ ನಡೆಯಲಿದೆ. ಮೊದಲ ಹಂತದ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆಯಲಿದೆ.

‘ನಿನ್ನ ಸನಿಹಕೆ’ ಎಂಬ ಲವ್‌ಸ್ಟೋರಿ ಚಿತ್ರದ ಮೂಲಕ ನಟಿ ಕಮಾಲ್ ಮಾಡಿದ್ದರು. ‘ಎಲ್ಲಾ ನಿನಗಾಗಿ’ ಎಂಬ ಭಿನ್ನ ಪ್ರೇಮಕಥೆಯ ಮೂಲಕ ರಾಹುಲ್- ಧನ್ಯಾ ಜೋಡಿ ಅದ್ಯಾವ ರೀತಿ ಮೋಡಿ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.

Share This Article