ಗಾಂಧಿನಗರ: ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ- ಕಾಲೇಜುಗಳಲ್ಲಿ ಭಗವದ್ಗೀತೆ ಕಡ್ಡಾಯ ಮಾಡಲು ಗುಜರಾತ್ ಸರ್ಕಾರ ಮುಂದಾಗಿದೆ.
Bhagavad Gita, in Std 6th to 8th, should be introduced in the form of story and recitation in the textbooks. In Std 9th to 12th, Bhagavad Gita should be introduced in the form of story and recitation in the first language textbook: Gujarat Education Minister Jitu Vaghani
— ANI (@ANI) March 17, 2022
Advertisement
ಆರನೇ ತರಗತಿಯಿಂದ 12ನೇ ತರಗತಿವರೆಗೂ ಹಿಂದೂ ಧರ್ಮಗ್ರಂಥ ಭಗವದ್ಗೀತೆಯನ್ನು ಬೋಧಿಸುವುದು, ಪಠಣ ಮಾಡಲಾಗುತ್ತದೆ. ಭಗವದ್ಗೀತೆ ಎನ್ನುವುದು ಕೇವಲ ಗ್ರಂಥವಲ್ಲ. ಅದೊಂದು ಜೀವನ ವಿಧಾನ. ನಮ್ಮ ಸಂಸ್ಕೃತಿಯ ಪ್ರತೀಕ. ಇದು ಎಲ್ಲರಿಗೂ ಗೊತ್ತಾಗುವುದು ಅತ್ಯಗತ್ಯ ಎಂದು ಶಿಕ್ಷಣ ಸಚಿವ ಜಿತು ವಘಾನಿ ತಿಳಿಸಿದ್ದಾರೆ. ಇದನ್ನೂ ಓದಿ: 5 ನಿಮಿಷ ಚಾರ್ಜ್ ಮಾಡಿದ್ರೆ 600 ಕಿ.ಮೀ ಸಂಚಾರ – ಹೈಡ್ರೋಜನ್ ಎಲೆಕ್ಟ್ರಿಕ್ ಕಾರು ಬಿಡುಗಡೆ
Advertisement
The main literature/study material (Printed, Audio – Visual) for Std. 6 to 12 should be provided: Gujarat Education Minister Jitu Vaghani pic.twitter.com/q5KIwlsyVo
— ANI (@ANI) March 17, 2022
Advertisement
ಭಗವದ್ಗೀತೆಯಿಂದ ಕಲಿಯುವುದು ಬೇಕಾದಷ್ಟಿದೆ. ಹೀಗಾಗಿ ಶಾಲೆಗಳಲ್ಲಿ ಅಳವಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಎಲ್ಲರ ಮನೆಯಲ್ಲಿ ಭಗವದ್ಗೀತೆ ಇರಬೇಕು ಮತ್ತು ಪಠಣ ನಡೆಸಬೇಕು. ಕೆಲವೇ ದಿನಗಳಲ್ಲಿ ಇನ್ನಷ್ಟು ರಾಜ್ಯಗಳ ಶಾಲೆಗಳಲ್ಲಿ ಭಗವದ್ಗೀತೆ ಪಠಣವನ್ನು ಜಾರಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.