ವಾಷಿಂಗ್ಟನ್: ಹೀಂದೂ ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆಯನ್ನು (Bhagavad Gita) ಹಲವು ಮಂದಿ ವಿಮರ್ಷಿಸಿದ್ದಾರೆ. ಇತಿಹಾಸದುದ್ದಕ್ಕೂ ವಿವಿಧ ವ್ಯಾಖ್ಯಾನಗಳು ಮತ್ತು ವಿಶ್ಲೇಷಣೆಗಳಿಗೂ ಇದು ಒಳಪಟ್ಟಿದೆ. ಆದರೆ ಇತ್ತೀಚೆಗೆ ಪ್ರಸಿದ್ಧ ಸ್ಲೋವೇನಿಯನ್ ತತ್ವಜ್ಞಾನಿ (Philosopher) ಸ್ಲಾವೊಜ್ ಜಿಜೆಕ್ (Slavoj Zizek) ಅವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.
Slavoj Žižek, the most prominent communist philosopher in the world currently, calls Bhagavad Gita “one of the most obscene disgusting sacred books” and blames Bhagavad Gita for Nazi Heinrich Himmler allegedly using it to justify genocide of Jews pic.twitter.com/9lrIzJXetZ
— Sensei Kraken Zero (@YearOfTheKraken) November 7, 2023
Advertisement
ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ಹರಿದಾಡುತ್ತಿದೆ. ಅದರಲ್ಲಿ ಜಿಜೆಕ್ ಭಗವದ್ಗೀತೆಯನ್ನು ಹರಿದು ಹಾಕಿದ್ದು ಮಾತ್ರವಲ್ಲದೇ ಅದು ಅತ್ಯಂತ ಅಶ್ಲೀಲ ಹಾಗೂ ಅಸಹ್ಯಕರ ಪವಿತ್ರ ಪುಸ್ತಕಗಳಲ್ಲಿ ಒಂದಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಮಾತ್ರವಲ್ಲದೇ ಜರ್ಮನಿಯ ನಾಝಿ ರಾಜಕಾರಣಿ ಹೆನ್ರಿಕ್ ಹಿಮ್ಲರ್ ಯಹೂದಿಗಳ ಮೇಲಿನ ನರಹತ್ಯೆಯನ್ನು ಸಮರ್ಥಿಸಿಕೊಳ್ಳಲು ಭಗವದ್ಗೀತೆಯನ್ನು ಬಳಸಿದ್ದಾಗಿ ತತ್ವಜ್ಞಾನಿ ಹೇಳಿದ್ದಾರೆ.
Advertisement
Advertisement
ಭಗವದ್ಗೀತೆ 700 ಶ್ಲೋಕಗಳುಳ್ಳ ಹಿಂದೂಗಳ ಪವಿತ್ರ ಗ್ರಂಥ. ಅದರ ತಾತ್ವಿಕ ಆಳ ಮತ್ತು ಆಧ್ಯಾತ್ಮಿಕ ಬೋಧನೆಗಳಿಗೆ ಪೂಜ್ಯವಾಗಿದೆ. ಇದು ಮಹಾಭಾರತದಲ್ಲಿ ಬರುವ ಪಾತ್ರಗಳಾದ ಅರ್ಜುನ ಮತ್ತು ಭಗವಾನ್ ಶ್ರೀಕೃಷ್ಣನ ನಡುವಿನ ಸಂಭಾಷಣೆಯಾಗಿದೆ. ಇದರ ವಿಷಯಗಳು ಕರ್ತವ್ಯ (ಧರ್ಮ), ನೈತಿಕ ಸಂದಿಗ್ಧತೆಗಳು ಮತ್ತು ಆಧ್ಯಾತ್ಮಿಕ ಸಾಕ್ಷಾತ್ಕಾರದ ಹಾದಿಯ ಸುತ್ತ ಸುತ್ತುತ್ತವೆ. ಇದನ್ನೂ ಓದಿ: ಪ್ರಧಾನಿ ಮೋದಿ ಅತ್ಯುತ್ತಮ ನಾಯಕ – ಹಾಡಿ ಹೊಗಳಿದ ಅಮೆರಿಕ ಗಾಯಕಿ
Advertisement
ಜಿಜೆಕ್ ಅವರ ಈ ಹೇಳಿಕೆ ಕಳೆದ ಕೆಲ ದಿನಗಳ ಹಿಂದೆ ಭಾರೀ ವಿವಾದಕ್ಕೆ ಕಾರಣವಾದ ಒಪ್ಪೆನ್‌ಹೈಮರ್ (Oppenheimer) ಚಿತ್ರದಲ್ಲಿನ ದೃಶ್ಯಕ್ಕೆ ನೀಡಿದ ವಿವರಣೆಯಾಗಿದೆ. ಈ ಚಿತ್ರದಲ್ಲಿ ಪಾತ್ರಧಾರಿಗಳು ಭಗವದ್ಗೀತೆಯನ್ನು ಓದುವ ಸಂದರ್ಭ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದನ್ನು ತೋರಿಸಲಾಗಿದೆ. ಇದನ್ನು ವಿರೋಧಾಭಾಸವೆಂದು ವಿವರಿಸಿದ ಅವರು, ಅಶ್ಲೀಲ, ಅಸಹ್ಯಕರ ಪಠ್ಯದಿಂದ ಆಯ್ದ ಭಾಗಗಳ ಜೊತೆ ಸುಂದರವಾದ ಲೈಂಗಿಕ ಕ್ರಿಯೆಯನ್ನು ಚಿತ್ರಿಸಿದ್ದಾಗಿ ಹೇಳಿದ್ದಾರೆ.
ಒಪ್ಪೆನ್‌ಹೈಮರ್ ಒಂದು ಉತ್ತಮ ಚಿತ್ರವಾಗಿದೆ. ಆದರೆ ನಾನು ಭಗವದ್ಗೀತೆಯ ಆಧ್ಯಾತ್ಮಿಕ ಭಾಗವನ್ನು ದ್ವೇಷಿಸುತ್ತೇನೆ ಎಂದು ಜಿಜೆಕ್ ಎಕ್ಸ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಹೇಳಿದ್ದಾರೆ. ಇದೀಗ ಹಿಜೆಕ್ ಹೇಳಿಕೆ ಭಾರೀ ಟೀಕೆಗೆ ಒಳಗಾಗಿದೆ. ಇದನ್ನೂ ಓದಿ: ರಣದೀಪ್ ಸುರ್ಜೇವಾಲಗೆ ಸುಪ್ರೀಂಕೋರ್ಟ್ ರಿಲೀಫ್