ಮೈಸೂರು: ನಾವೂ ಸಹ ಹಿಂದೂಗಳೇ ಭಗವದ್ಗೀತೆಯನ್ನು ಶಿಕ್ಷಣದಲ್ಲಿ ಮಾತ್ರವಲ್ಲ ಇಡೀ ದೇಶದ ಜನರಿಗೆ ತಲುಪಿಸಿದ್ದು ಕಾಂಗ್ರೆಸ್ ಪಕ್ಷ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗುಡುಗಿದ್ದಾರೆ.
Advertisement
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ರಾಜೀವ್ ಗಾಂಧಿ ಇಡೀ ದೇಶಕ್ಕೆ ರಾಮಾಯಣ, ಮಹಾಭಾರತ ಪ್ರಸಾರ ಮಾಡಿದ್ದಾರೆ. ದೂರದರ್ಶನದ ಮೂಲಕ ದೇಶದ ಜನರಿಗೆ ತಲುಪಿಸಿದ್ದಾರೆ ಎಂದು ಭಗವದ್ಗೀತೆಯ ಯದಾ ಯದಾ ಹಿ ಧರ್ಮಸ್ಯ ಶ್ಲೋಕದ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಉಚಿತ ಪ್ರದರ್ಶನ ನಿಲ್ಲಿಸಿ: ಬಿಜೆಪಿಗೆ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ಮನವಿ
Advertisement
Advertisement
ಮುಂದೊಂದು ದಿನ ಕೇಸರಿ ಭಾವುಟ ರಾಷ್ಟ್ರ ಧ್ವಜ ಆಗಬಹುದು ಎಂದು ಹಿಂದೂ ಪರ ಸಂಘಟನೆ ಮುಖಂಡ ಕಲ್ಲಡ್ಕ ಪ್ರಭಾಕರ ಹೇಳಿಕೆ ವಿಚಾರವಾಗಿ ಮಾತನಾಡಿ, ಕಲ್ಲಡ್ಕ ಪ್ರಭಾಕರ ಭಟ್ ಬಿಜೆಪಿಯಲ್ಲಿ ಯಾರು, ಏನು ಅಂತ ಗೊತ್ತಿಲ್ಲ. ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಆದರೆ ಈ ಹಿಂದೆ ಸಚಿವರೊಬ್ಬರ ಹೇಳಿಕೆಗೆ ಹೋರಾಟ ಮಾಡಿದ್ದೇವೆ. ಈ ಪ್ರತಿಭಟನೆಗೆ ಸರಿಯಾಗಿ ನಡ್ಡಾ ಅವರಿಂದ ಪ್ರತಿಕ್ರಿಯೆ ಸಿಕ್ಕಿದೆ. ಈ ರೀತಿ ಮಾತನಾಡುವವರು ರಾಷ್ಟ್ರ ದ್ರೋಹಿಗಳು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸೋಲಿಸಲು 25 ವರ್ಷಗಳ ಬಳಿಕ ಒಂದಾದ ಸಹೋದರರು
Advertisement
ದೇಶದಲ್ಲಿ ನಿರುದ್ಯೋಗ ಮತ್ತು ನಿರಂತರವಾಗಿ ಬೆಲೆ ಏರಿಕೆ ಆಗುತ್ತಿದೆ. ಈ ಬಗ್ಗೆ ಯಾರು ಮಾತನಾಡುತ್ತಿಲ್ಲ. ಕಬ್ಬಿಣ ಮತ್ತು ಸಿಮೆಂಟ್ ಬೆಲೆ ಗಗನಕ್ಕೇರಿದೆ. ಇದರಿಂದ ಜನಸಾಮಾನ್ಯರಿಗೆ ಮನೆಕಟ್ಟಬೇಕೆಂಬ ಆಸೆಯಲ್ಲಿರುವವರಿಗೆ ಸರ್ಕಾರ ಅಡ್ಡಗಾಲಿಟ್ಟಿದೆ. ನಿರುದ್ಯೋಗದಿಂದ ಜನ ತತ್ತರಿಸಿದ್ದಾರೆ. ಜನರು ದಡ್ಡರಲ್ಲ, ಬಿಜೆಪಿಯ ಸುಳ್ಳು ಮಾತುಗಳಿಗೆ ಮರಳಾಗುವುದಿಲ್ಲ. ಜನ ಬದಲಾವಣೆ ಬಯಸಿದ್ದಾರೆ ಎಂದಿದ್ದಾರೆ.