ಚಿಕ್ಕಮಗಳೂರು: ಭದ್ರಾ ನದಿಯಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಕಳಸ ತಾಲೂಕಿನ ರುದ್ರಪಾದ ಬಳಿ ನಡೆದಿದೆ.
Advertisement
ಜೀವನ್ ದಾಸ್ (೧೭) ಮೃತದೇಹ ಪತ್ತೆಯಾಗಿದ್ದು, ನೀರು ಪಾಲಾಗಿರುವ ಮತ್ತೊಬ್ಬ ವಿದ್ಯಾರ್ಥಿ ನಿಕ್ಷೇಪ್ ಗಾಗಿ ಮುಂದುವರಿದ ಶೋಧವನ್ನು ನಡೆಸಿದ್ದಾರೆ. ಇದನ್ನೂ ಓದಿ: ತೆರಿಗೆ ದಾಳಿ, 150 ಕೋಟಿ ನಗದು ವಶ – ಕಂತೆ ಕಂತೆ ನೋಟುಗಳ ಪತ್ತೆ
Advertisement
Advertisement
ಗುರುವಾರ ಕಾಲೇಜಿಗೆ ಹೋದವರು ಮನೆಗೆ ಬಂದಿರಲಿಲ್ಲ. ಇಂದು ಹುಡುಕಾಟ ನಡೆಸಿದಾಗ ಭದ್ರಾ ನದಿಯ ದಡದಲ್ಲಿ ಅವರ ಮೊಬೈಲ್, ಡ್ರೆಸ್ ಪತ್ತೆಯಾಗಿದೆ. ನೀರುಪಾಲಾದ ವಿದ್ಯಾರ್ಥಿಗಳು ಹಿರೇಬೈಲ್ ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗಮಾಡುತ್ತಿರುವದಾಗಿ ತಿಳಿದು ಬಂದಿದ್ದು, ಕಳಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜನವರಿ 1ಕ್ಕೆ 10 ವರ್ಷ ಪೂರೈಸುವ ಎಲ್ಲಾ ಡೀಸೆಲ್ ವಾಹನಗಳ ನೋಂದಣಿ ರದ್ದು