‘ಭಾಬಿಜಿ ಘರ್ ಪರ್ ಹೈ’ ಸೀರಿಯಲ್ ಖ್ಯಾತಿಯ ಶುಭಾಂಗಿ ಅತ್ರೆ (Shubhangi Atre) ಅವರಿಂದ ಡಿವೋರ್ಸ್ ಪಡೆದ 2 ತಿಂಗಳಲ್ಲೇ ಮಾಜಿ ಪತಿ ಪಿಯೂಷ್ ಪೊರೆ (Piyush Poorey) ವಿಧಿವಶರಾಗಿದ್ದಾರೆ. ಇದನ್ನೂ ಓದಿ:ಆ್ಯನಿವರ್ಸರಿ ದಿನವೇ ಹೆಣ್ಣು ಮಗುವನ್ನು ಬರಮಾಡಿಕೊಂಡ ನಟ ವಿಷ್ಣು ವಿಶಾಲ್, ಜ್ವಾಲಾ ಗುಟ್ಟಾ ದಂಪತಿ
ನಟಿ ಶುಭಾಂಗಿ ಅವರ ಮಾಜಿ ಪತಿ ಪಿಯೂಷ್ ಅವರು ಲಿವರ್ ಸಿರೋಸಿಸ್ ಕಾಯಿಲೆಯಿಂದ ಬಳಲುತ್ತಿದ್ದರು. ಈ ಸಂಬಂಧ ಅವರು ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಅವರು ಏ.19ರಂದು ನಿಧನರಾಗಿದ್ದಾರೆ. ಮಾಜಿ ಪತಿಯ ನಿಧನದ ಕುರಿತು ನಟಿ ಪ್ರತಿಕ್ರಿಯಿಸಿ, ಈ ವಿಚಾರದ ಬಗ್ಗೆ ಮಾತನಾಡಲು ಸ್ವಲ್ಪ ಸಮಯ ನೀಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ:ಮದುವೆ ವಿಚಾರದಲ್ಲಿ ನನ್ನಿಂದ ತಪ್ಪಾಗಿದೆ – ತಂದೆಯ ಬಳಿ ಕ್ಷಮೆ ಕೇಳಿದ ಗಾಯಕಿ ಪೃಥ್ವಿ ಭಟ್
ಪಿಯೂಷ್ ಡಿಜಿಟಲ್ ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದರು. 2003ರಲ್ಲಿ ಪಿಯೂಷ್ ಜೊತೆ ನಟಿ ಮದುವೆಯಾದರು. ಈ ಜೋಡಿಗೆ ಆಶಿ ಎಂಬ ಮಗಳಿದ್ದಾಳೆ. ಈ ವರ್ಷ ಫೆ.5ರಂದು ಡಿವೋರ್ಸ್ ಆಗಿರೋದಾಗಿ ಅಧಿಕೃತವಾಗಿ ತಿಳಿಸಿದ್ದರು. ಡಿವೋರ್ಸ್ ಆಗಿ 2 ತಿಂಗಳಲ್ಲೇ ಪಿಯೂಷ್ ನಿಧನದ ಸುದ್ದಿ ಅವರ ಕುಟುಂಬಕ್ಕೆ ಶಾಕ್ ಕೊಟ್ಟಿದೆ.