ತುಮಕೂರು: ಪದವಿ ಪೂರ್ವ ಕಾಲೇಜು ಪ್ರಾಚಾರ್ಯರು ಕಟ್ಟಡದಿಂದ ಹೊರ ಹಾಕಿದ್ದಕ್ಕೆ ಬ್ಯಾಚುಲರ್ ಆಫ್ ಫೈನ್ ಆರ್ಟ್ (ಬಿಎಫ್‍ಎ) ಚಿತ್ರಕಲಾ ಕಾಲೇಜು ಉಪನ್ಯಾಸಕರು ಕಾಲೇಜು ಆವರಣದಲ್ಲಿಯೇ ವಿದ್ಯಾರ್ಥಿಗಳಿಗೆ ಹೇಳಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರಿನ ಬಿಎಫ್‍ಎ ಕಾಲೇಜಿಗೆ ಸ್ವತಂತ್ರ ಕಟ್ಟಡವಿಲ್ಲ. ಹೀಗಾಗಿ ಸುಮಾರು 20 ವರ್ಷಗಳಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೊಠಡಿಯಲ್ಲಿಯೇ ತರಗತಿಗಳನ್ನು ನಡೆಸಲಾಗುತ್ತಿತ್ತು. ಆದರೆ ಕಳೆದ ಮೂರು ದಿನಗಳಿಂದ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಜಯರಾಮಯ್ಯ ಅವರು, ತಮಗೆ ಕೊಠಡಿಗಳು ಬೇಕು. ನೀವು ಬೇರೆ ಕಟ್ಟಡ ನೋಡಿಕೊಳ್ಳಿ ಎಂದು ಹೇಳಿ ತರಗತಿಗೆ ಬೀಗ ಹಾಕಿದ್ದರು.
Advertisement
Advertisement
ತರಗತಿಗಳೇ ಇಲ್ಲದೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರದಾಡುವಂತಾಗಿತ್ತು. ಹೀಗಾಗಿ ಇಂದು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಕ್ರಮವನ್ನು ಖಂಡಿಸಿ ಚಿತ್ರಕಲಾ ಉಪನ್ಯಾಸಕರು ತಮ್ಮ ಕಾಲೇಜು ಕಟ್ಟಡದ ಗೋಡೆಯ ಮೇಲೆ ಚಿತ್ರ ಬಿಡಿಸಿ ಪಾಠ ಮಾಡಿದರು. ವಿದ್ಯಾರ್ಥಿಗಳು ನಿಂತುಕೊಂಡೆ ಪಾಠ ಕೇಳುತ್ತಿದ್ದರು. ಈ ಕುರಿತು ಮಾಹಿತಿ ಪಡೆದ ಪದವಿ ಪೂರ್ವ ಡಿಡಿಪಿಐ ಉನ್ನಿಸಾ ಅವರು ಕಾಲೇಜಿಗೆ ಹಾಕಿದ್ದ ಬೀಗ ತೆಗಿಸಿ, ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
Advertisement
ಸದ್ಯ ಚಿತ್ರಕಲಾ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ತಾತ್ಕಾಲಿಕ ಕಟ್ಟಡದಲ್ಲಿಯೇ ಕಲಿಕಾ ಚಟುವಟಿಕೆಯಲ್ಲಿ ನಡೆಸಬೇಕಾಗಿದೆ. ಸ್ವತಂತ್ರ ಕಟ್ಟಡದ ವ್ಯವಸ್ಥೆ ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಆಗ್ರಹಿಸಿದ್ದಾರೆ.